ಬ್ರಿಜ್ ಭೂಷಣ್ ಪರ ಮಹಾ ರ್‍ಯಾಲಿಗೆ ಅನುಮತಿ ನೀಡದ ಅಯೋಧ್ಯೆ ಜಿಲ್ಲಾಡಳಿತ: ಬಿಜೆಪಿ ಸಂಸದನಿಗೆ 'ಮಹಾ' ಹಿನ್ನಡೆ - Mahanayaka
5:00 PM Wednesday 11 - December 2024

ಬ್ರಿಜ್ ಭೂಷಣ್ ಪರ ಮಹಾ ರ್‍ಯಾಲಿಗೆ ಅನುಮತಿ ನೀಡದ ಅಯೋಧ್ಯೆ ಜಿಲ್ಲಾಡಳಿತ: ಬಿಜೆಪಿ ಸಂಸದನಿಗೆ ‘ಮಹಾ’ ಹಿನ್ನಡೆ

02/06/2023

ದೇಶದ ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಮತ್ತು ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ಜೂನ್ 5 ರಂದು ಮಹಾ ರ್‍ಯಾಲಿ ನಡೆಸಲು ಅಯೋಧ್ಯೆ ಜಿಲ್ಲಾಡಳಿತವು ಅನುಮತಿ ನಿರಾಕರಿಸಿದೆ.

ಈ ಕುರಿತು ಮಾತನಾಡಿರುವ ಅಯೋಧ್ಯೆ ವೃತ್ತ ಅಧಿಕಾರಿ ಎಸ್‌ ಪಿ ಗೌತಮ್ ಅವರು, ‘ಜೂನ್ 5 ರಂದು ವಿಶ್ವ ಪರಿಸರ ದಿನದಂದು ನಿಗದಿಪಡಿಸಲಾದ ಇತರ ಕಾರ್ಯಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಸಿಂಗ್ ಪರ ಬಿಜೆಪಿ ಕೌನ್ಸಿಲರ್ ಚಮೇಲಾ ದೇವಿ ಅವರು ಕೋರಿದ ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ಹೇಳಿದ್ದಾರೆ.

ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಎರಡು ಎಫ್‌ ಐಆರ್ ದಾಖಲಾಗಿದೆ. ಈ ದೂರಿನಲ್ಲಿ ಅನುಚಿತವಾಗಿ ಸ್ಪರ್ಶಿಸುವುದು, ಬೆದರಿಕೆ, ಲೈಂಗಿಕ ಕಿರುಕುಳ, ಅನುಚಿತ ವರ್ತನೆ, ವಿವಿಧ ನೆಪದಲ್ಲಿ ಎದೆಯನ್ನು ಮುಟ್ಟುವುದು ಸೇರಿದಂತೆ 10 ಪ್ರಕರಣಗಳು ದಾಖಲಾಗಿವೆ.

ಕುಸ್ತಿಪಟುಗಳು ಎಪ್ರಿಲ್ 21 ರಂದು ಭಾರತದ ವ್ರೆಸ್ಲಿಂಗ್ ಫೆಡರೇಶನ್ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಬ್ರಿಜ್ ಭೂಷಣ್ ವಿರುದ್ಧ ದೂರು ನೀಡಿದ್ದರು. ಕುಸ್ತಿಪಟುಗಳು ಸುಪ್ರೀಂ ಕೋರ್ಟ್‌ಗೆ ಮೊರೆ ಹೋದ ನಂತರ, ದೆಹಲಿ ಪೊಲೀಸರು ಏಪ್ರಿಲ್ 28 ರಂದು ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಈ ಎರಡೂ ಎಫ್‌ಐಆರ್‌ಗಳ ಪ್ರತಿಗಳು ಮುನ್ನೆಲೆಗೆ ಬಂದಿವೆ.

ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಹಲ್ಲೆ, ಲೈಂಗಿಕ ಕಿರುಕುಳ, ಹಿಂಬಾಲಿಸುವುದು ಮತ್ತು ಸಾಮಾನ್ಯ ಉದ್ದೇಶ ಸೇರಿದಂತೆ ಆರೋಪ ಹೊರಿಸಲಾಗಿದೆ. 2016 ರಿಂದ ಕುಸ್ತಿ ಚಾಂಪಿಯನ್‌ಶಿಪ್‌ಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವ 17 ವರ್ಷದ ಬಾಲಕಿಯ ತಂದೆ ಆಕೆಯ ಪರವಾಗಿ ಪೊಲೀಸ್ ದೂರು ದಾಖಲಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ