ಮಾಸ್ಕ್ ಧರಿಸದ ಮಹಿಳೆಗೆ ಕಪಾಳ ಮೋಕ್ಷ ಮಾಡಿದ ಹೆಡ್ ಕಾನ್‌ ಸ್ಟೆಬಲ್ - Mahanayaka

ಮಾಸ್ಕ್ ಧರಿಸದ ಮಹಿಳೆಗೆ ಕಪಾಳ ಮೋಕ್ಷ ಮಾಡಿದ ಹೆಡ್ ಕಾನ್‌ ಸ್ಟೆಬಲ್

16/01/2021

ಅಹ್ಮದಾಬಾದ್: ಮಾಸ್ಕ್ ಹಾಕದ ಮಹಿಳೆಗೆ ಪೊಲೀಸ್ ಅಧಿಕಾರಿಯೊಬ್ಬರು ಕಪಾಳಕ್ಕೆ ಬಾರಿಸಿದ ಘಟನೆ ನಡೆದಿದ್ದು,  ಘಟನೆ ಸಂಬಂಧ ನವರಂಗಪುರ ಪೊಲೀಸರ ಮುಖ್ಯ ಕಾನ್‌ಸ್ಟೆಬಲ್ ನನ್ನು ಅಮಾನತುಗೊಳಿಸಲಾಗಿದೆ.

ಮಾಸ್ಕ್ ಧರಿಸದ ಕಾರಣ ನವರಂಗ್‌ ಪುರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಲು ಮುಂದಾದಾಗ ಈ ಘಟನೆ ಸಂಭವಿಸಿದೆ. ಮಾಸ್ಕ್ ವ್ಯಕ್ತಿಯೋರ್ವನನ್ನು ಪೊಲೀಸ್ ಪೇದೆಗಳು ವಾಹನದಲ್ಲಿ ಕೂರಿಸಲು ಮುಂದಾಗಿದ್ದರು. ಈ ವೇಳೆ ಆತನೊಂದಿಗಿದ್ದ ಇಬ್ಬರು ಮಹಿಳೆಯರು ಪೊಲೀಸ್ ಕ್ರಮಗಳನ್ನು ಪ್ರತಿಭಟಿಸಿದ್ದಾರೆ.  ಈ ವೇಳೆ  ವಿಕ್ರಮಸಿಂಹ ದರ್ಬಾರ್ ಎಂಬ ಹೆಸರಿನ ಹೆಡ್ ಕಾನ್‌ ಸ್ಟೆಬಲ್ ಮಹಿಳೆಯರಿಗೆ ಕಪಾಳಮೋಕ್ಷ ಮಾಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಬ್ಬರು ಮಹಿಳೆಯರ ಪೈಕಿ ಓರ್ವ ಮಹಿಳೆ ಏರುಧ್ವನಿಯಲ್ಲಿ ಪೊಲೀಸರ ಕ್ರಮವನ್ನು ಖಂಡಿಸಿದ್ದು, ಈ ವೇಳೆ ಆಕ್ರೋಶಕೊಂಡ ಪೊಲೀಸ್ ಅಧಿಕಾರಿ ಆಕೆಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ವಿಡಿಯೋದಲ್ಲಿ ಕಂಡು ಬಂದಿದೆ.

ಇತ್ತೀಚಿನ ಸುದ್ದಿ