ಪತ್ನಿಯ ಖಾಸಗಿ ವಿಡಿಯೋ ಮಾಡಿ ಈತ ಎಂತಹ ಕೆಲಸ ಮಾಡಿದ್ದಾನೆ  ನೋಡಿ! - Mahanayaka
12:05 AM Thursday 12 - December 2024

ಪತ್ನಿಯ ಖಾಸಗಿ ವಿಡಿಯೋ ಮಾಡಿ ಈತ ಎಂತಹ ಕೆಲಸ ಮಾಡಿದ್ದಾನೆ  ನೋಡಿ!

17/01/2021

ಬೆಂಗಳೂರು:  ಪ್ರೆಜರ್ ಟೌನ್ ನಿವಾಸಿಯಾಗಿರುವ 39 ವರ್ಷದ  ಮಹಿಳೆಯೊಬ್ಬರು ತನ್ನ  ಪತಿಯ ವಿರುದ್ಧ ಪುಲಿಕೇಶಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರಿನ ಬೆನ್ನಲ್ಲೇ ಪತಿಯ ಅಸಲಿಯತ್ತು ಬಯಲಾಗಿದೆ.

2019ರಲ್ಲಿ ಮಹಿಳೆಯು ಈ ವ್ಯಕ್ತಿಯನ್ನು ಮದುವೆಯಾಗಿದ್ದಳು. ಆರಂಭದಲ್ಲಿ ಪತಿ ಅನ್ಯೋನ್ಯವಾಗಿದ್ದ. ಆದರೆ ಆ ಬಳಿಕ ತನ್ನ ಬಾಲ ಬಿಚ್ಚಿದ್ದು, ದಿನನಿತ್ಯ ವಿಚಿತ್ರವಾಗಿ ವರ್ತಿಸುತ್ತಿದ್ದ. ಕಂಠಮಟ್ಟ ಮದ್ಯ ಸೇವಿಸಿ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ.

ಪತ್ನಿಯ ಶೀಲ ಶಂಕಿಸಿ, ಸಹೋದ್ಯೋಗಿಗಳಿಗೆ ಕರೆ ಮಾಡಲು ಆರಂಭಿಸಿದ್ದಾನೆ. ಆ ಬಳಿಕ ಪತ್ನಿಯ ಖಾಸಗಿ ವಿಡಿಯೋ, ಚಿತ್ರಗಳನ್ನು ತೆಗೆದು ಬೇರೆಯವರಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಲು ಆರಂಭಿಸಿದ್ದಾನೆ. ಅಲ್ಲದೇ ಪತ್ನಿಯ ಸಹೋದರಿಯ ಮೇಲೂ ಅತ್ಯಾಚಾರ ಮಾಡುತ್ತೇನೆ ಎಂದು ಬೆದರಿಸಿದ್ದಾನೆ.

ಮದುವೆಯ ಸಂದರ್ಭದಲ್ಲ ಈತನಿಗೆ ಕಾರು ನೀಡಲಾಗಿತ್ತು. ಆ ಕಾರನ್ನು ಪತ್ನಿಗೆ ಹೇಳದೆಯೇ ಮಾರಾಟ ಮಾಡಿದ್ದ. ಇದನ್ನು ಕೇಳಿದ್ದಕ್ಕಾಗಿ ಪತ್ನಿಗೆ ಕುತ್ತಿಗೆಗೆ ಶಾಲು ಬಿಗಿದು ಹತ್ಯೆ ಮಾಡಲು ಕೂಡ ಯತ್ನಿಸಿದ್ದ.

ಈತನ ನಿರಂತರ ಕಿರುಕುಳದಿಂದ ಬೇಸತ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪುಲಿಕೇಶಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ ಐಆರ್ ದಾಖಲಿಸಲಾಗಿದೆ. ಇದೇ ಸಂದರ್ಭದಲ್ಲಿ ಈತ ಈಗಾಗಲೇ ಮೂರು ಮದುವೆಯಾಗಿದ್ದಾನೆ ಎನ್ನುವುದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ