ಬಸ್ಸಿನಲ್ಲಿ ಅನುಚಿತವಾಗಿ ಸ್ಪರ್ಶಿಸಿದ ಯುವಕನ ಗ್ರಹಚಾರ ಬಿಡಿಸಿದ ಯುವತಿ!

ಬಸ್ಸಿನಲ್ಲಿ ಮಹಿಳೆಯೊಬ್ಬರು ತನಗೆ ಕಿರುಕುಳ ನೀಡಿದ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಸ್ಸೊಂದರಲ್ಲಿ ಮಹಿಳೆಯೊಬ್ಬರು ಯುವಕನ ಕಾಲರ್ ಹಿಡಿದು ಕಪಾಳಕ್ಕೆ ಬಾರಿಸುತ್ತಾ, “ನಿನ್ನ ಅಕ್ಕ ತಂಗಿ, ಅವ್ವಗೆ ಹಿಂಗೆ ಕೈ ಹಾಕ್ತಿಯಾ? ಎಂದು ಪ್ರಶ್ನಿಸುತ್ತಿರುವುದು, ವಿಡಿಯೋದಲ್ಲಿ ಕಂಡು ಬಂದಿದೆ. ಇದೇ ವೇಳೆ ವ್ಯಕ್ತಿಯು ತನಗೆ ಕಾಲು ನೋವು ಎಂದು ಹೇಳಿಕೊಂಡಿದ್ದಾನೆ. ಈ ವೇಳೆ ಏನು ಕಾಲು ನೋವು… ಯಾಕೆ ಸುಳ್ಳು ಹೇಳ್ತಿದ್ದೀಯಾ? ನಿನ್ಗೆ ಚಪ್ಪಲಿಯಲ್ಲಿ ಹೊಡಿಯಬೇಕಾಗುತ್ತೆ ಎಂದು ಮಹಿಳೆ ಎಚ್ಚರಿಕೆ ನೀಡುತ್ತಾ, ನಿರಂತರವಾಗಿ ಯುವಕನಿಗೆ ಹಲ್ಲೆ ನಡೆಸುತ್ತಿರುವುದು ಕಂಡು ಬಂದಿದೆ.
ಮಹಿಳೆಯ ಏಟು ಸಹಿಸಿಕೊಳ್ಳಲು ಸಾಧ್ಯವಾಗದ ಯುವಕ ಆಕೆಯ ಹಿಡಿತದಿಂದ ತಪ್ಪಿಸಿಕೊಂಡು ಬಸ್ಸಿನಿಂದ ಹೊರಗೆ ಓಡಿ ಹೋಗಿದ್ದಾನೆ. ಈ ವೇಳೆ ಮಹಿಳೆ ಹಿಡ್ಕೊಳ್ರೀ… ಅವನನ್ನ… ನಿಮ್ಮ ಹೆಣ್ಮಕ್ಳು ಆಗಿದ್ರೆ, ಸಹಿಸ್ತಿದ್ರಾ? ಎಂದು ಸಹ ಪ್ರಯಾಣಿಕರಿಗೆ ಹೇಳಿದ್ದಾಳೆ. ಬಸ್ ನಿಲ್ದಾಣದಲ್ಲಿ ಕೆಲವರು ಈತನನ್ನು ಹಿಡಿದುಕೊಂಡಿದ್ದರಾದರೂ, ಅವರ ಕೈಯಿಂದ ತಪ್ಪಿಸಿಕೊಂಡು ಯುವಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಘಟನೆ ಮಂಡ್ಯದ ಕೆ.ಆರ್.ಪೇಟೆ ಬಸ್ ನಿಲ್ದಾಣದಲ್ಲಿ ನಡೆದಿದೆ ಎನ್ನಲಾಗಿದೆ. ಅಪರಿಚಿತ ಯುವಕ ಮಹಿಳೆಯನ್ನು ಅನುಚಿಯವಾಗಿ ಸ್ಪರ್ಶಿಸಿದ್ದು, ಈ ವೇಳೆ ಆಕೆ ಎಚ್ಚರಿಸಿದ್ದಳು. ಆದರೂ ಆತ ಮತ್ತೆ ಅನುಚಿತ ವರ್ತನೆ ಮುಂದುವರಿಸಿದಾಗ ರೊಚ್ಚಿಗೆದ್ದ ಮಹಿಳೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ ಎಂದು ತಿಳಿದು ಬಂದಿದೆ.
ಇನ್ನೂ ಬಸ್ಸಿನಲ್ಲಿ ವ್ಯಕ್ತಿ ಮಹಿಳೆಗೆ ಕಿರುಕುಳ ನೀಡಿದ್ದಾನೆ ಎನ್ನುವುದು ತಿಳಿದರೂ ಬಸ್ಸಿನಲ್ಲಿದ್ದ ಮಹಿಳೆಯರು, ಹೋಗಮ್ಮ ಬಸ್ಸಿಂದ ಕೆಳಗೆ ಎಳ್ಕೊಂಡು… ಎಂಬಂತೆ ಹೇಳುತ್ತಿದ್ದು, ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವ ಗೋಜಿಗೆ ಹೋಗದೇ ಈ ಸಮಸ್ಯೆ ನಮ್ಮದಲ್ಲ ಎನ್ನುವಂತೆ ವರ್ತಿಸಿದ್ದಾರೆ. ಇಷ್ಟಾದರೂ, ನೊಂದ ಮಹಿಳೆ ಯುವಕನಿಗೆ ತಕ್ಕಪಾಠ ಕಲಿಸಿದ್ದಾಳೆ.
The woman later slapped him and confronted him. No one on the bus helped her. He managed to run away. No case registered. But the video recorded by a passenger has gone viral on social media.#Karnataka #Mandya #KRPetehttps://t.co/IDiTtHzFxn
— Hate Detector 🔍 (@HateDetectors) June 3, 2023
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw