ಬಿಹಾರದಲ್ಲಿ ಸೇತುವೆ ಕುಸಿತ ಪ್ರಕರಣ: ತಪ್ಪಿತಸ್ಥರಿಗೆ ಶಿಕ್ಷೆ ಕೊಡದೇ ಬಿಡಲ್ಲ ಎಂದ ಸಿಎಂ ನಿತೀಶ್

ಬಿಹಾರದಲ್ಲಿ ಗಂಗಾ ನದಿಯ ಮೇಲೆ ನಿರ್ಮಾಣ ಹಂತದ ಸೇತುವೆ ಕುಸಿದ ಘಟನೆಯ ಕುರಿತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸೇತುವೆಯನ್ನು ಸರಿಯಾಗಿ ನಿರ್ಮಿಸಿಲ್ಲ. ಹೀಗಾಗಿಯೇ ಅದು ಏಪ್ರಿಲ್ 2022 ರಿಂದ ಇದು ಎರಡು ಬಾರಿ ಕುಸಿದಿದೆ. ಇದು ಗಂಭೀರ ವಿಷಯ. ಸಂಬಂಧಪಟ್ಟ ಇಲಾಖೆ ಈಗಾಗಲೇ ಅದರ ಬಗ್ಗೆ ಸಂಪೂರ್ಣ ತನಿಖೆಯನ್ನು ಪ್ರಾರಂಭಿಸಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಹಾರ ಸಿಎಂ ಹೇಳಿದ್ದಾರೆ.
2014ರಲ್ಲಿ ಆರಂಭವಾದ ಸೇತುವೆ ನಿರ್ಮಾಣ ಕಾಮಗಾರಿ ಇದುವರೆಗೂ ಏಕೆ ಪೂರ್ಣಗೊಂಡಿಲ್ಲ? ಯಾಕೆ ಅದು ನಿಗದಿತ ಸಮಯಕ್ಕೆ ಪೂರ್ತಿಯಾಗಿಲ್ಲ?. ನಾನು ಈ ಬಗ್ಗೆಯೂ ತನಿಖೆ ನಡೆಸುವಂತೆ ಸಂಬಂಧಿಸಿದ ಇಲಾಖೆಯನ್ನು ಕೇಳಿದ್ದೇನೆ. ಉಪಮುಖ್ಯಮಂತ್ರಿ ಕೂಡ ಬೆಳವಣಿಗೆಗಳನ್ನು ಗಮನಿಸುತ್ತಿದ್ದಾರೆ ಎಂದು ಕುಮಾರ್ ಹೇಳಿದ್ದಾರೆ.
2014ರಿಂದ ನಿರ್ಮಿಸಲಾಗುತ್ತಿರುವ 3.16 ಕಿಮೀ ಸೇತುವೆಯು 14 ತಿಂಗಳುಗಳಲ್ಲಿ ಎರಡು ಬಾರಿ ಕುಸಿದಿದೆ.ಮೊದಲನೆಯದು ಭಾಗಲ್ಪುರದ ಸುಲ್ತಂಗಂಜ್ ಭಾಗದಲ್ಲಿ ಏಪ್ರಿಲ್ 2022 ರಂದು ಕುಸಿದರೆ ಎರಡನೇ ಬಾರಿಗೆ ಭಾನುವಾರ ಸಂಜೆ ಖಗಾರಿಯಾ ಭಾಗದಲ್ಲಿ ಕುಸಿದಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw