ಪ್ರತಿಷ್ಠಿತ ಕ್ಯಾಬ್ ಆಪರೇಟೀವ್ ಸಂಸ್ಥೆಗಳಿಗೆ ವಂಚನೆ ಮಾಡುತ್ತಿದ್ದ ಜಾಲ ಪತ್ತೆ: 3 ಆರೋಪಿಗಳ ಬಂಧನ
ಬೆಂಗಳೂರು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆ ಅಧಿಕಾರಿಗಳು ಫ್ರೀ ಆಕ್ಟಿವೇಟೆಡ್ ಸಿಮ್ ಕಾರ್ಡ್ಗಳನ್ನು ದುರುಪಯೋಗಪಡಿಸಿ ಪ್ರತಿಷ್ಠಿತ ಕ್ಯಾಬ್ ಆಪರೇಟೀವ್ ಸಂಸ್ಥೆಗಳಿಗೆ ವಂಚನೆ ಮಾಡುತ್ತಿದ್ದ ಜಾಲ ಪತ್ತೆ ಹಚ್ಚಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಿ, 1055 ಮೀ ಆಕ್ಟಿವೇಟೆಡ್ ಮೊಬೈಲ್ ಸಿಮ್ ಕಾರ್ಡ್ಗಳು, 15 ಮೊಬೈಲ್ ಫೋನ್, 4 ಲ್ಯಾಪ್ ಟಾಪ್, ಕಂಪ್ಯೂಟರ್ ಸಿಸ್ಟಮ್ ಗಳ ವಶ ಪಡಿಸಲಾಗಿದೆ.
ಬೆಂಗಳೂರು ನಗರದಲ್ಲಿ ಬಾಡಿಗೆ ವಾಹನ ಸೇವೆ ನೀಡುತ್ತಿರುವ ಹೆಸರಾಂತ ಕಂಪನಿಗಳಾದ ಉಬರ್ ಮತ್ತು ರಾಪಿಡೋ ಕಂಪನಿಗಳಿಗೆ ಡ್ರೈವರ್ಗಳನ್ನು ಮತ್ತು ವಾಹನಗಳನ್ನು ನೋಂದಣಿ ಮಾಡುವ ಸಲುವಾಗಿ ವೆಂಡರ್ ಶಿಪ್ ಪಡೆದು ಆನ್ಲೈನ್ ಮೂಲಕ ಡ್ರೈವರ್ ಮತ್ತು ವಾಹನಗಳನ್ನು ಆಟಾಚ್ ಮಾಡಿಸಿ ಬೇರೆಯವರ ಹೆಸರಿನಲ್ಲಿ ತೆಗೆದುಕೊಂಡಿದ್ದ ಸಾವಿರಾರು ಮೊಬೈಲ್ ಸಿಮ್ ಕಾರ್ಡ್ಗಳನ್ನು ಉಪಯೋಗಿಸಿ, ಯಾವುದೇ ಸಂಚಾರ ಸೇವೆಯನ್ನು ನೀಡದೆ ಸಾಫ್ಟ್ವೇರ್ ದುರುಪಯೋಗಪಡಿಸಿಕೊಂಡು ಸಂಚಾರಿ ಸೇವೆ ನೀಡಿದಂತೆ ಮಾಡಿ ಕಂಪನಿಗಳಿಂದ ಬರುತ್ತಿದ್ದ ಸಾವಿರಾರು ರೂಗಳ ಇನ್ಸೆಂಟಿವ್ ಹಣವನ್ನು ಪಡೆದು ಕಂಪನಿಗಳಿಗೆ ಮೋಸ ಮಾಡುತ್ತಿದ್ದ ಆಸಾಮಿಗಳಾದ ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಿರುತ್ತದೆ.
ಇವರುಗಳಲ್ಲಿ ಎ–1 ಆರೋಪಿಯು ಉಬರ್ ಮತ್ತು ರಾಪಿಡೋ ಕಂಪನಿಗಳ ವೆಂಡರ್ಫ್ ಪಡೆದಿದ್ದು, ಈತನ ಸ್ನೇಹಿತನಾದ ಎ–2 ಫೈನಾನ್ಸ್ ಕಂಪನಿಯಲ್ಲಿ ಲೋನ್ ಕೊಡಿಸುವ ಕೆಲಸ ಮಾಡಿಕೊಂಡಿದ್ದು, ಎ–3 ಆರೋಪಿಯು ವೋಡಾಫೋನ್ ಕಂಪನಿಯಲ್ಲಿ ಸಿಮ್ ಡಿಸ್ಟಿಬ್ಯೂಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಈ ಮೂರು ಜನರು ಸೇರಿ ಸುಲಭವಾಗಿ ಹಣ ಮಾಡುವ ದುರುದ್ದೇಶದಿಂದ ಸಲುವಾಗಿ ಒಳಸಂಚು ರೂಪಿಸಿ ಎ ಹೊಂದಿದ್ದ ಉಬ ಮತ್ತು ರಾಪಿಡೋ ವೆಂಡರ್ಮ್ನ ಸಹಾಯದಿಂದ, ಎ–2 ಒದಗಿಸುತ್ತಿದ್ದ ದಾಖಲಾತಿಗಳನ್ನು ಬಳಸಿ ಆನ್ ಲೈನ್ನಲ್ಲಿ ಅಪಲೋಡ್ ಮಾಡಿ, ಎಲ್ಲಾ ನೀಡುತ್ತಿದ್ದ ಫ್ರೀ ಆಕ್ಟಿವೇಟೆಡ್ ಸಿಮ್ ಕಾರ್ಡ್ಗಳನ್ನು ಬಳಸಿಕೊಂಡು ಕಾರು / ಬೈಕುಗಳು ಓಡುವ ರೀತಿಯಲ್ಲಿ ಮೊಬೈಲ್ ಬೋನ್/ಲ್ಯಾಪ್ ಟಾಪ್ ಗಳ ಮೂಲಕ ಸಾಫ್ಟ್ವೇರ್ ಬಳಸಿ ಯಾವುದೇ ವಾಹನವನ್ನು ಚಲಿಸದೇ ಇದ್ದರೂ ವಾಹನಗಳು ಚಲಿಸಿದ ರೀತಿಯಲ್ಲಿ ಡಾಟಾ ಸೃಷ್ಟಿಸಿ ಕಂಪನಿಗಳಿಂದ ವೆಂಡರ್ ಗೆ ಬರುವ ಇನ್ಸೆಂಟೀವ್ ಹಣವನ್ನು ಅಕ್ರಮವಾಗಿ ಪಡೆದುಕೊಂಡು ಹಂಚಿಕೊಳ್ಳುತ್ತಿದ್ದರೆಂಬುದು ತನಿಖೆಯಲ್ಲಿ ದೃಢಪಟ್ಟಿರುತ್ತದೆ.
ಮೇಲ್ಕಂಡ 3 ಜನ ಆರೋಪಿಗಳನ್ನು ವಶಕ್ಕೆ ಪಡೆದು ಅವರುಗಳ ವಿಚಾರಣೆ ಮಾಡಿ ಅವರು ಕೃತ್ಯಕ್ಕೆ ಉಪಯೋಗಿಸುತ್ತಿದ್ದ 1055 ಶ್ರೀ ಅಕ್ಟಿವೇಟೆಡ್ ಮೊಬೈಲ್ ಸಿಮ್ ಗಳು, 15 ಮೊಬೈಲ್ಗಳು, 4 ಲ್ಯಾಪ್ ಟಾಪ್, ಒಂದು ಕಂಪ್ಯೂಟರ್ ಸಿಸ್ಟಮ್ ಮತ್ತು ಒಂದು ಬಯೋಮೆಟ್ರಿಕ್ ಡಿವೈಸ್ ಇವುಗಳನ್ನು ವಶಪಡಿಸಿಕೊಂಡಿರುತ್ತದೆ. ಈ ಆರೋಪಿಗಳ ವಿರುದ್ಧ ಐಪಿಸಿ, ಟೆಲಿಗ್ರಾಫ್ ಆಕ್ಟ್ ಹಾಗೂ ಐಟಿ ಆಕ್ಟ್, ಗಳಡಿಯಲ್ಲಿ ತನಿಖೆ ಮುಂದುವರಿಸಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw