ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಅಭಿಮಾನಿಯ ಕೊನೆಯ ಆಸೆ ಪೂರೈಸಿದ ಕುಮಾರಸ್ವಾಮಿ - Mahanayaka
7:25 PM Thursday 12 - December 2024

ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಅಭಿಮಾನಿಯ ಕೊನೆಯ ಆಸೆ ಪೂರೈಸಿದ ಕುಮಾರಸ್ವಾಮಿ

17/01/2021

ರಾಮನಗರ: ಸಾವಿಗೂ ಮುನ್ನ ತನ್ನ ಅಂತ್ಯಕ್ರಿಯೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ  ಭಾಗಿಯಾಗಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದ ಅಭಿಮಾನಿಯ ಕೊನೆಯ ಆಸೆಯನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೆರವೇರಿಸಿದ್ದು, ತಮ್ಮ ಪುತ್ರ ನಿಖಿಲ್ ಜೊತೆಗೆ ಆಗಮಿಸಿ ಅಂತ್ಯಕ್ರಿಯೆಲ್ಲಿ ಭಾಗವಹಿಸಿದ್ದಾರೆ.

ಆಟೋ ಚಾಲಕರಾಗಿದ್ದ ಜಯರಾಮು ಅವರು, ಅನಾರೋಗ್ಯದಿಂದ ಬಳಲುತ್ತಿದ್ದು, ಸಾವಿಗೂ ಮುನ್ನ ಕುಮಾರಸ್ವಾಮಿ ಅವರಿಗೆ ಪತ್ರ ಬರೆದ ಅವರು ತನ್ನ ಅಂತ್ಯಕ್ರಿಯೆಯಲ್ಲಿ ಕುಮಾರಸ್ವಾಮಿ ಭಾಗವಹಿಸಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದ್ದರು.

ಜಯರಾಮು ಅವರು ಸಾವಿಗೂ ಮೊದಲು ತಮ್ಮ ಅಂಗಿಯ ಜೇಬಿನಲ್ಲಿ ಈ ಪತ್ರವನ್ನಿಟ್ಟುಕೊಂಡಿದ್ದರು. ಜೊತೆಗೆ ನನ್ನ ಬುದ್ಧಿಮಾಂದ್ಯ ಮಗುವಿಗೆ ಧನ ಸಹಾಯ ಮಾಡುವಂತೆಯೂ ಮನವಿ ಮಾಡಿದ್ದು, ಈ ಋಣವನ್ನು ಮುಂದಿನ ಜನ್ಮದಲ್ಲಿ ತೀರಿಸುತ್ತೇನೆ ಎಂದು ಭಾವನಾತ್ಮಕ ಪತ್ರವನ್ನು ಅವರು ಬರೆದಿದ್ದರು.

ಜಯರಾಮು ಅವರ ಕೊನೆಯ ಆಸೆಯಂತೆ ಕುಮಾರಸ್ವಾಮಿ ಅವರು ಅಂತ್ಯಕ್ರಿಯೆಲ್ಲಿ ಭಾಗವಹಿಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ನಿಖಿಲ್ ಕುಮಾರ ಸ್ವಾಮಿ ಅವರು ಕುಟುಂಸ್ಥರಿಗೆ ಧನಸಹಾಯ ನೀಡಿದರು.

ಇದನ್ನೂ ಓದಿ:  ತನ್ನ ಅಂತ್ಯ ಸಂಸ್ಕಾರಕ್ಕೆ ಬರುವಂತೆ ಪತ್ರ ಬರೆದು ಸಾವಿಗೀಡಾದ ಕುಮಾರಸ್ವಾಮಿಯ ಕಟ್ಟಾ ಅಭಿಮಾನಿ

whatsapp

ಇತ್ತೀಚಿನ ಸುದ್ದಿ