ಚಾಕ್ಲೇಟ್ ಕೇಳಿದ್ದಕ್ಕೆ ಮಗಳನ್ನು ಕೊಂದ ತಂದೆ..!
ಎಂಟು ವರ್ಷದ ಮಗಳನ್ನು 37 ವರ್ಷದ ಅಪ್ಪ ತಲೆಗೆ ಕಲ್ಲು ಎತ್ತಿ ಹಾಕಿ ಸಾಯಿಸಿದ ಪೈಶಾಚಿಕ ಘಟನೆಯು ಮಧ್ಯಪ್ರದೇಶದಲ್ಲಿ ನಡೆದಿದೆ. ಆತ ಕುಡಿತದ ಚಟ ಹೊಂದಿದ್ದ ಮತ್ತು ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾನು ದಟ್ಟ ದಾರಿದ್ರ್ಯದಲ್ಲಿ ಬದುಕುತ್ತಿದ್ದೇನೆ.
ಆದರೆ ನನ್ನ ಈ ಪುಟ್ಟ ಮಗಳು ನನ್ನಲ್ಲಿ ಚಾಕ್ಲೇಟ್ ಕೇಳುತ್ತಾಳೆ. ಆಟಿಕೆಗಳನ್ನು ಕೇಳುತ್ತಾಳೆ ಮತ್ತು ಬಟ್ಟೆ ಬರೆಗಳನ್ನು ಕೇಳ್ತಾಳೆ. ನನಗೆ ಆಕೆಗೆ ಕೊಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ನಾನು ಮನಕ್ಲೇಶಗೊಂಡು ಈ ಕೃತ್ಯವನ್ನು ಎಸಗಿದ್ದೇನೆ. ಮಗಳಿಗೆ ಬೇಕಾದುದನ್ನು ತೆಗೆದುಕೊಡುವುದಕ್ಕೆ ನನ್ನಿಂದ ಸಾಧ್ಯವಾಗುತ್ತಿಲ್ಲ ಅನ್ನುವ ಸಂಕಟ ಈ ಹತ್ಯೆಯನ್ನು ಮಾಡಿಸಿದೆ ಎಂದಾತ ಹೇಳಿದ್ದಾನೆ.
ನಿರ್ಮಾಣ ಹಂತದ ಕಟ್ಟಡಕ್ಕೆ ಕೊಂಡು ಹೋದ ಟೈಲ್ಸ್ ಮತ್ತು ಇಟ್ಟಿಗೆಗಳಿಂದ ಮಗಳ ತಲೆಗೆ ಹೊಡೆದು ಆತ ಸಾಯಿಸಿದ್ದಾನೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw