ತಪ್ಪಿದ ಮತ್ತೊಂದು ರೈಲು ದುರಂತ: ಜಾರ್ಖಂಡ್ ನಲ್ಲಿ ಭೀಕರ ರೈಲು ಅಪಘಾತ ತಪ್ಪಿಸಿದ ರಾಜಧಾನಿ ಎಕ್ಸ್ ಪ್ರೆಸ್ ಪೈಲಟ್
ದೇಶದಲ್ಲಿ ಮತ್ತೊಂದು ದೊಡ್ಡ ರೈಲು ಅವಘಡ ತಪ್ಪಿದೆ. ಒಂದು ಕ್ಷಣ ತಪ್ಪುತ್ತಿದ್ರೆ ಮೊನ್ನೆ ಒಡಿಶಾದಲ್ಲಿ ಆದಂತಹ ಭೀಕರ ರೈಲು ದುರಂತ ಮತ್ತೊಮ್ಮೆ ಘಟಿಸುತ್ತಿತ್ತು. ದೇವರ ದಯೆಯಲ್ಲಿ ಮತ್ತೊಂದು ದುರಂತ ತಪ್ಪಿಹೋಗಿದೆ.
ಹೌದು…! ನವದೆಹಲಿ-ಭುವನೇಶ್ವರ ರಾಜಧಾನಿ ಎಕ್ಸ್ ಪ್ರೆಸ್ ಭೋಜುಡಿಹ್ ನಿಲ್ದಾಣದ ಬಳಿ ಕ್ರಾಸಿಂಗ್ ಮೂಲಕ ಹಾದು ಹೋಗುತ್ತಿದ್ದಾಗ ಜಾರ್ಖಂಡ್ ನ ಬೊಕಾರೊದಲ್ಲಿ ನಡೆಯಬಹುದಾಗಿದ್ದ ದೊಡ್ಡ ರೈಲು ಅಪಘಾತವನ್ನು ತಪ್ಪಿಸಲಾಗಿದೆ. ಸಂತಾಲ್ಡಿಹ್ ರೈಲ್ವೆ ಕ್ರಾಸಿಂಗ್ ನಲ್ಲಿ ಈ ಘಟನೆ ನಡೆದಿದ್ದು, ನವದೆಹಲಿ-ಭುವನೇಶ್ವರ ರಾಜಧಾನಿ ಎಕ್ಸ್ ಪ್ರೆಸ್ ಇಲ್ಲಿಂದ ಹಾದು ಹೋಗುವಾಗ ಭೋಜುಡಿಹ್ ನಿಲ್ದಾಣದ ಬಳಿಯ ರೈಲ್ವೆ ಗೇಟ್ ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ.
ಆವಾಗ ರೈಲ್ವೆ ಟ್ರ್ಯಾಕ್ ಮತ್ತು ಗೇಟ್ ನಡುವೆ ಟ್ರ್ಯಾಕ್ಟರ್ ಸಿಲುಕಿಕೊಂಡಿತ್ತು. ಇದು ಕ್ರಾಸಿಂಗ್ ನಲ್ಲಿದ್ದವರಿಗೆ ಭಯವನ್ನುಂಟು ಮಾಡಿತು. ಆವಾಗ ರೈಲಿನ ಚಾಲಕ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ರೈಲು ನಿಂತಿತು. ಇದು ದೊಡ್ಡ ಅಪಘಾತವನ್ನು ತಪ್ಪಿಸಿತು. ಇದರಿಂದಾಗಿ ರೈಲಿನ ವೇಳಾಪಟ್ಟಿಯಲ್ಲಿ 45 ನಿಮಿಷಗಳ ವ್ಯತ್ಯಯ ಉಂಟಾಯಿತು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಗ್ನೇಯ ರೈಲ್ವೆಯ ಅದ್ರಾ ವಿಭಾಗದ ಡಿಆರ್ ಎಂ ಮನೀಶ್ ಕುಮಾರ್, ಬೊಕಾರೊ ಜಿಲ್ಲೆಯ ಭೋಜುಡಿಹ್ ನಿಲ್ದಾಣದ ಸಂತಾಲ್ಡಿಹ್ ರೈಲ್ವೆ ಕ್ರಾಸಿಂಗ್ ನಲ್ಲಿ ಟ್ರ್ಯಾಕ್ಟರ್ ರೈಲ್ವೆ ಗೇಟ್ ಗೆ ಡಿಕ್ಕಿ ಹೊಡೆದಿದೆ. ಇದೇ ವೇಳೆ ಸಮಯ ಪ್ರಜ್ಞೆ ಮೆರೆದ ರೈಲಿನ ಚಾಲಕ ಬ್ರೇಕ್ ಹಾಕಿದ್ದಾರೆ. ಆವಾಗ ರೈಲು ನಿಂತಿದೆ. ಇದರಿಂದಾಗಿ ದೊಡ್ಡ ಅಪಘಾತವನ್ನು ತಪ್ಪಿಸಲಾಯಿತು ಎಂದು ತಿಳಿಸಿದ್ದಾರೆ.
ಒಂದು ವೇಳೆ ರೈಲು ಚಾಲಕ ಬ್ರೇಕ್ ಹಾಕದೇ ಇದ್ದಿದ್ರೆ ಇದು ಒಡಿಶಾದಲ್ಲಿ 278 ಪ್ರಯಾಣಿಕರ ಸಾವಿಗೆ ಕಾರಣವಾದ ರೈಲು ಅಪಘಾತದಂತೆಯೇ ದೊಡ್ಡ ರೈಲು ಅಪಘಾತವಾಗುತ್ತಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಟ್ರ್ಯಾಕ್ಟರ್ ಅನ್ನು ವಶಪಡಿಸಿಕೊಂಡು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ರೈಲ್ವೆ ಗೇಟ್ ಮ್ಯಾನ್ ಅನ್ನು ಅಮಾನತುಗೊಳಿಸಲಾಗಿದೆ. ಘಟನೆ ನಡೆದ ಬಳಿಕ ಎಸ್ಕೇಪ್ ಆಗಿರುವ ಟ್ರ್ಯಾಕ್ಟರ್ ಚಾಲಕನಿಗಾಗಿ ಶೋಧ ನಡೆಸಲಾಗುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw