ಸೂಲಿಬೆಲೆ ರಾಷ್ಟ್ರಭಕ್ತರೇ ಹೊರತು ಭಯೋತ್ಪಾದಕ ಅಲ್ಲ: ಕೋಟ ಶ್ರೀನಿವಾಸ ಪೂಜಾರಿ
![chakravarthi sullibelle](https://www.mahanayaka.in/wp-content/uploads/2023/06/chakravarthi-sullibelle.jpg)
ಉಡುಪಿ: ಜನಸಾಮಾನ್ಯರಲ್ಲಿ ರಾಷ್ಟ್ರ ಭಕ್ತಿ ಹೆಚ್ಚಿಸುವ ಹಾಗೂ ರಾಷ್ಟ್ರೀಯತೆಗೆ ಒತ್ತು ಕೊಟ್ಟು ದೇಶ ಪ್ರೇಮ ಬೆಳೆಸುತ್ತಿರುವ ಚಕ್ರವರ್ತಿ ಸೂಲಿಬೆಲೆ ರಾಷ್ಟ್ರಭಕ್ತರೇ ಹೊರತು ಭಯೋತ್ಪಾದಕ ಅಲ್ಲ. ಅವರನ್ನು ಜೈಲಿಗೆ ಹಾಕುತ್ತೇವೆ ಎಂಬ ಹೇಳಿಕೆ ನೀಡಿರುವ ಸಚಿವ ಎಂ.ಬಿ.ಪಾಟೀಲ್ ಹಾಗೂ ರಾಜ್ಯ ಸರಕಾರ ವಿರುದ್ಧ ಬಿಜೆಪಿ ತೀವ್ರ ಹೋರಾಟ ಮಾಡಲಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾತನಾಡಿದ ಅವರು, ಕುಸ್ತಿಪಟುಗಳ ಪ್ರತಿಭಟನೆ ಹಾಗೂ ಅದರ ಹಿಂದೆ ಇರುವ ತಾರ್ಕಿಕವಾದ ಅಂಶವನ್ನು ಕೇಂದ್ರ ಸಕಕಾರ ಗಮನಿಸಿದೆ. ಒಟ್ಟಾರೆಯಾಗಿ ಕೇಂದ್ರ ಸರಕಾರ ಸಮಸ್ಯೆಗಳನ್ನು ಗಂಭೀರವಾಗಿ ಪರಿಶೀಲನೆ ನಡೆಸುತ್ತಿದೆ. ಅಲ್ಲದೆ ಸರಿಯಾದ ಸಮಯಕ್ಕೆ ಸಮಸ್ಯೆಯನ್ನು ಪರಿಹಾರ ಮಾಡುತ್ತದೆ. ಅದೇ ರೀತಿ ಪ್ರತಿಭಟನೆಗೆ ವಿದೇಶಿ ನೆರವಿನ ಹಿನ್ನೆಲೆಯ ಬಗ್ಗೆಯೂ ಚರ್ಚೆ ಮಾಡುತ್ತೇವೆ ಎಂದರು.
ಪಶು ಸಂಗೋಪನಾ ಸಚಿವರು ಗೋಹತ್ಯೆ ಮಾಡಿದರೆ ಏನಾಗುತ್ತದೆ ಎಂಬ ಉದ್ಧಟತನ ಹೇಳಿಕೆ ನೀಡಿದ್ದಾರೆ. ಗೋಹತ್ಯೆ ನಿಷೇಧ ಕಾಯಿದೆಯನ್ನು ರೈತರ ಪರವಾಗಿ ಮತ್ತು ಸಾಧು ಸಂತರ ಅಭಿಪ್ರಾಯ ಗೌರವಿಸಲು ಮತ್ತು ಹಿಂದು ಧರ್ಮದಲ್ಲಿ ಪೂಜನೀಯವಾಗಿರುವ ಗೋವುಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಜಾರಿಗೆ ತಂದಿರುವುದು. ಒಂದು ವೇಳೆ ರಾಜ್ಯ ಸರಕಾರ ಈ ಕಾಯಿದೆಗೆ ತಿದ್ದುಪಡಿ ಮಾಡಿ ಗೋವುಗಳ ಮಾರಣಾಹೋಮ ಮಾಡುವ ಪರಿಸ್ಥಿತಿ ನಿರ್ಮಿಸಿದರೆ ಇದರ ವಿರುದ್ಧ ಬಿಜೆಪಿ ತೀವ್ರ ಹೋರಾಟ ಮಾಡಲಿದೆ ಎಂದು ಅವರು ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw