ವಿಡಿಯೋ ತುಂಬಾ ಅಸಹ್ಯವಾಗಿದೆಯಂತೆ, ಈ ವಯಸ್ಸಲ್ಲಿ ಯಡಿಯೂರಪ್ಪ ಏನು ಮಾಡಿದ್ದಾನೋ ಯಾರಿ ಗೊತ್ತು? ಎಂದ ಸಿದ್ದರಾಮಯ್ಯ
ಬೆಂಗಳೂರು: ಯಡಿಯೂರಪ್ಪ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಯಡಿಯೂರಪ್ಪ ಏನೇನು ಮಾಡಿದ್ದಾನೋ ಗೊತ್ತಿಲ್ವಲ್ಲ.. ಅಸಹ್ಯವಾಗಿದೆಯಂತಲ್ಲ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಅವರ ಸಿಡಿ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಸಿಡಿ ವಿಚಾರವಾಗಿ ತನಿಖೆ ನಡೆಯ ಬೇಕು ಎಂದು ಹೇಳಿದರಲ್ಲದೇ, ಯಡಿಯೂರಪ್ಪ ಈ ವಯಸ್ಸಿನಲ್ಲಿ ಏನೇನು ಮಾಡಿದ್ದಾನೆ ಯಾರಿಗೆ ಗೊತ್ತು? ತುಂಬ ಅಸಹ್ಯವಾಗಿದೆಯಂತಲ್ವಾ? ಎಂದು ಶಾಸಕ ಯತ್ನಾಳ್ ಹೇಳಿಕೆಯ ಆಧಾರದಲ್ಲಿ ಹೇಳಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಸಿಡಿ ವಿಚಾರವಾಗಿ ಭಾರೀ ಚರ್ಚೆಗಳು ನಡೆಯುತ್ತಿವೆ. ಸಿಡಿ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿದವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಸ್ವಪಕ್ಷದ ಸದಸ್ಯರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೂ ಸಿಡಿ ವಿಚಾರ ಇದೀಗ ಬಿಜೆಪಿ ಸರ್ಕಾರದ ವಿರುದ್ಧ ಬೀಸಲು ಕೈಗೆ ಚಾಟಿ ನೀಡಿದಂತಾಗಿದೆ.
ಈ ವಯಸ್ಸಿನಲ್ಲಿ ಯಡಿಯೂರಪ್ಪ ಅದೇನು ಮಾಡಿದ್ದಾನೋ ಯಾರಿಗೆ ಗೊತ್ತು, ವಿಡಿಯೋ ತುಂಬಾ ಅಸಹ್ಯವಾಗಿದೆಯಂತಲ್ವಾ? ಎಂದು ಹೇಳಿದ ಸಿದ್ದರಾಮಯ್ಯ ಪತ್ರಕರ್ತರನ್ನು ಜೋರಾಗಿ ನಗಿಸಿದರು.