ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ ನ್ನು ಚಲಾಯಿಸಿಕೊಂಡು ಊರಿಗೆ ಹೋದ ಕುಡುಕ!

ಬೀದರ್: ವ್ಯಕ್ತಿಯೋರ್ವ ನಿಲ್ಲಿಸಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಸ್ ನ್ನು ಚಲಾಯಿಸಿಕೊಂಡು ಊರಿಗೆ ತೆರಳಿದ ಘಟನೆ ಬೀದರ್ ಜಿಲ್ಲೆಯ ಔರಾದ್ ನಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಔರಾದ್ ತಾಲೂಕಿನ ಕಾರಂಜಿ ಗ್ರಾಮದ ನಿವಾಸಿ ಯಶಪ್ಪ ಸೂರ್ಯವಂಶಿ ಸೋಮವಾರ ಕಂಠಮಟ್ಟ ಕುಡಿದು ಬಸ್ ಗೆ ಕಾಯುತ್ತಿದ್ದ. ಆದ್ರೆ ಎಷ್ಟೊತ್ತಾದ್ರೂ ತನ್ನ ಊರಿಗೆ ತೆರಳುವ ಬಸ್ ಬಾರದಿದ್ದಾಗ ತಾಳ್ಮೆ ಕಳೆದುಕೊಂಡು, ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ಏರಿ ತನ್ನ ಊರಿನತ್ತ ಚಲಾಯಿಸಲು ಮುಂದಾಗಿದ್ದಾನೆ.
ಕುಡಿತದ ಮತ್ತಿನಲ್ಲಿದ್ದ ಯಶಪ್ಪ ದಾರಿ ಮಧ್ಯೆ ಔರಾದ್ ನಲ್ಲಿ ಬಸ್ ನ್ನು ಡಿವೈಡರ್ ಗೆ ಡಿಕ್ಕಿ ಹೊಡೆಸಿದ್ದಾನೆ. ಈ ವೇಳೆ ಬಸ್ ನಲ್ಲಿದ್ದ ಪ್ರಯಾಣಿಕರು ಕಿರುಚಾಡಿ, ರಸ್ತೆಯಲ್ಲಿದ್ದ ಜನರನ್ನು ಸಹಾಯಕ್ಕೆ ಕರೆದಿದ್ದು, ಬಸ್ಸಿನಿಂದ ಯಶಪ್ಪನನ್ನು ಕೆಳಗಿಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು, ಯಶಪ್ಪನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಸ್ ಯಾಕೆ ಚಲಾಯಿಸಿಕೊಂಡು ಹೋಗಿರೋದು ಎಂದು ಪೊಲೀಸರು ಪ್ರಶ್ನಿಸಿದಾಗ, ಬಹಳ ಹೊತ್ತು ಕಾದರೂ ಬಸ್ ಬರಲಿಲ್ಲ, ಸಿಟ್ಟಿನಿಂದ ಬಸ್ ಚಲಾಯಿಸಿಕೊಂಡು ಹೋದೆ ಎಂದು ಬಾಯಿಬಿಟ್ಟಿದ್ದಾನೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw