ಜೈಲಿನಲ್ಲಿ ಕದ್ದು ಮೊಬೈಲ್ ಬಳಸುತ್ತಿದ್ದವರಿಗೆ ಬ್ರೇಕ್

ಬೆಂಗಳೂರು : ಪರಪ್ಪನ ಆಗ್ರಹಾರ ಜೈಲಿನಲ್ಲಿ ಮೊಬೈಲ್ ಇಟ್ಟುಕೊಂಡು ಹೊರಗಡೆ ಸಂಪರ್ಕ ಸಾಧಿಸುವ ಕೈದಿಗಳ ಆಟವನ್ನು ನಿಲ್ಲಿಸಲು ಬೆಂಗಳೂರು ಕಮೀಷನರ್ ಮುಂದಾಗಿದ್ದಾರೆ. ಇಲ್ಲಿ ಹೈ ಫ್ರೀಕ್ವೆನ್ಸಿ ಮೋಡ್ ಟವರ್ ನಿರ್ಮಿಸಲಾಗುತ್ತಿದ್ದು, ಇನ್ನು ಮುಂದೆ ಜೈಲಿನೊಳಗಿಂದಲೇ ನಡೆಯುವ ರೌಡಿ ಚಟುವಟಿಕೆಗಳಿಗೆ ಬ್ರೇಕ್ ಬೀಳಲಿದೆ
ಕೆಲವು ಪ್ರಭಾವಿ ರೌಡಿಗಳು ಈವರೆಗೆ ಲಂಚ ನೀಡಿಯೋ, ಕದ್ದು ತರಿಸಿಯೋ ಜೈಲಿನೊಳಗೆ ಮೊಬೈಲ್ ಇಟ್ಟುಕೊಳ್ಳುತ್ತಿದ್ದರು. ಇಲ್ಲಿಂದಲೇ ಹೊರಗಿನ ಡೀಲಿಂಗ್‌ಗಳನ್ನು ನಡೆಸುತ್ತಿದ್ದರು. ಆದರೆ, ಇನ್ನು ಮುಂದೆ ಅಂತಹ ಸಾಹಸ ಮಾಡಿ ಮೊಬೈಲ್ ಇಟ್ಟುಕೊಂಡರೂ ಪ್ರಯೋಜನವಿಲ್ಲ. ಜೈಲಿನಿಂದ ಡೀಲ್ ಮಾಡುವ ರೌಡಿಗಳಿಗೆ ಕಮೀಷನರ್ ದಯಾನಂದ್ ಮಾಸ್ಟರ್ ಸ್ಟ್ರೋಕ್ ನೀಡಿದ್ದಾರೆ.ಜೈಲಿನ ಕರೆಗಳನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡುವ ಹೈ ಫ್ರೀಕ್ವೆನ್ಸಿ ಮೋಡ್ ಟವರ್ ಇನ್‌ಸ್ಟಾಲ್ ಮಾಡಲಾಗುತ್ತಿದ್ದು, ಹೊಸ ತಂತ್ರಜ್ಞಾನದಿಂದಾಗಿ ಹೊರ ಹೋಗುವ ಮತ್ತು ಒಳಬರುವ ಕರೆಗಳು ಕೂಡ ನಿರ್ಬಂಧಕ್ಕೊಳಗಾಗಲಿವೆ. ಈ ಬಗ್ಗೆ ಕಾರಾಗೃಹ ಇಲಾಖೆ ಅಧಿಕಾರಿಗಳ ಜೊತೆ ಕಮೀಷನರ್ ಚರ್ಚೆ ನಡೆಸಿದ್ದು, ಕಾರಾಗೃಹ ಇಲಾಖೆ ಅಧಿಕಾರಿಗಳು ರೂಪುರೇಷೆ ರಚಿಸಲು ಮುಂದಾಗಿದ್ದಾರೆ.
ಜೈಲಿನಿಂದ ಮೊಬೈಲ್ ಬಳಸಿ ಹಲವು ರೌಡಿಗಳು ಹೊರಗಡೆ ಡೀಲಿಂಗ್ ನಡೆಸುವ, ಜೈಲಿನಿಂದಲೇ ಸುಪಾರಿ ನೀಡಿ ದುಷ್ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಹಿನ್ನೆಲೆ, ಜೈಲಿನ ಎಲ್ಲ ಅಕ್ರಮಗಳಿಗೂ ಕಡಿವಾಣ ಹಾಕಲು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮುಂದಾಗಿದ್ದಾರೆ. ಜೈಲಿನಲ್ಲಿ ಡ್ರಗ್ಸ್ ಸರಬರಾಜು, ಮಾಫಿಯಾ ಯಾವುದೂ ಇರಬಾರದು ಎಂದು ಸೂಚನೆ ನೀಡಲಾಗಿದ್ದು, ಅಗತ್ಯ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw