ಉತ್ತರಪ್ರದೇಶದ ಲಕ್ನೋದಲ್ಲಿ ಹತ್ಯೆಯಾದ ಸಂಜೀವ್ ಜೀವಾ ಯಾರು..? ಈತನ ಬ್ಯಾಕ್ ಗ್ರೌಂಡ್ ಹಿಸ್ಟರಿಯೇ ಭಯಾನಕ..!
ಉತ್ತರ ಪ್ರದೇಶದ ಕುಖ್ಯಾತ ದರೋಡೆಕೋರ ಸಂಜೀವ್ ಜೀವಾ ಅವರನ್ನು ರಾಜ್ಯದ ರಾಜಧಾನಿ ಲಕ್ನೋದ ಸೆಷನ್ಸ್ ನ್ಯಾಯಾಲಯದ ಹೊರಗಡೆ ಗುಂಡಿಕ್ಕಿ ಕೊಲ್ಲಲಾಗಿದೆ.
ಈ ಶೂಟೌಟ್ ನಡೆದ ವೇಳೆ ಅಪ್ರಾಪ್ತ ಬಾಲಕಿಗೆ ಗುಂಡೇಟಿನಿಂದ ಗಾಯಗಳಾಗಿವೆ. ಆಕೆಯನ್ನು ಹತ್ತಿರದ ಬಲರಾಂಪುರ ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾಡಹಗಲೇ ನ್ಯಾಯಾಲಯದ ಆವರಣದಲ್ಲೇ ನಡೆದ ಶೂಟೌಟ್ ಪ್ರಕರಣವು ರಾಜ್ಯ ರಾಜಧಾನಿಯಲ್ಲಿ ಭಾರಿ ಅವ್ಯವಸ್ಥೆಗೆ ಕಾರಣವಾಗಿದೆ. ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆ ‘ವಿಫಲವಾಗಿದೆ’ ಎಂದು ಪ್ರತಿಪಕ್ಷಗಳು ಯೋಗಿ ಆದಿತ್ಯನಾಥ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.
ಹತ್ಯೆಯಾದ ಸಂಜೀವ್ ಜೀವಾ, ಮುಖ್ತಾರ್ ಅನ್ಸಾರಿ ಮತ್ತು ಮುನ್ನಾ ಭಜರಂಗಿ ಗ್ಯಾಂಗ್ ನ ನಿಕಟ ಸಹಾಯಕ ಎಂದು ಹೇಳಲಾಗಿದೆ. ಜೀವಾ ಅವರನ್ನು ಲಕ್ನೋದ ಜೈಲಿನಲ್ಲಿ ಇರಿಸಲಾಗಿತ್ತು. ಈತ ರಾಜ್ಯದ ಪಶ್ಚಿಮ ಪ್ರದೇಶದ ಕುಖ್ಯಾತ ಅಪರಾಧಿಯಾಗಿದ್ದ.
ಗ್ಯಾಂಗ್ ಸ್ಟಾರ್ ಸಂಜೀವ್ ಜೀವಾ ಉತ್ತರ ಪ್ರದೇಶದ ಮುಜಾಫರ್ ನಗರದ ನಿವಾಸಿಯಾಗಿದ್ದ. ಮುಖ್ತಾರ್ ಅನ್ಸಾರಿ ಮತ್ತು ಮುನ್ನಾ ಭಜರಂಗಿ ಜೊತೆಗೆ ಜೀವಾ ಕೂಡ ಭಾಟಿ ಗ್ಯಾಂಗ್ ನೊಂದಿಗೆ ಸಂಬಂಧ ಹೊಂದಿದ್ದ. ಇವನ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ. ಕೆಲವು ದಿನಗಳ ಹಿಂದೆ ಸಂಜೀವ್ ಜೀವಾ ಅವರ ಪತ್ನಿ ಪಾಳಯ ಮಹೇಶ್ವರಿ ಅವರು ತಮ್ಮ ಪತಿಯ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದರು.
ಪತ್ನಿಯ ಬೇಡಿಕೆಯ ಮೇರೆಗೆ ಜೀವಾ ಅವರಿಗೆ ಭದ್ರತೆಯನ್ನು ಸಹ ಹೆಚ್ಚಿಸಲಾಗಿತ್ತು. ಆದಾಗ್ಯೂ, ಶೂಟರ್ ವಕೀಲರ ಸೋಗಿನಲ್ಲಿ ಬಂದು ಪಾಯಿಂಟ್-ಬ್ಲಾಂಕ್ ರೇಂಜ್‌ನಿಂದ ಗುಂಡು ಹಾರಿಸಿದ್ದಾನೆ.
ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಶೂಟೌಟ್ ಸಮಯದಲ್ಲಿ ಗಾಯಗೊಂಡ ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಕೃಷ್ಣಾನಂದ ರೈ ಮತ್ತು ಬ್ರಹ್ಮದತ್ ದ್ವಿವೇದಿ ಹತ್ಯೆ ಪ್ರಕರಣದ ಆರೋಪಿಗಳು: ಬಿಜೆಪಿ ಶಾಸಕ ಕೃಷ್ಣಾನಂದ್ ರಾಯ್ ಹತ್ಯೆ ಪ್ರಕರಣದಲ್ಲಿ ಜೀವಾ ಸಹ ಆರೋಪಿಯಾಗಿದ್ದು, ಮುಖ್ತಾರ್ ಅನ್ಸಾರಿ ಕೂಡ ಆರೋಪಿಯಾಗಿದ್ದಾನೆ. ಬಿಜೆಪಿ ಶಾಸಕ ಬ್ರಹ್ಮ ದತ್ ದ್ವಿವೇದಿ ಅವರ ಹತ್ಯೆಯಲ್ಲೂ ಈತ ಆರೋಪಿಯಾಗಿದ್ದ.
ಇನ್ನು ಹತ್ಯೆ ಮಾಡಿದ ಆರೋಪಿಯನ್ನು ಜೌನ್ ಪುರ ಜಿಲ್ಲೆಯ ಕೆರಕಟ್ ನ ವಿಜಯ್ ಯಾದವ್ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw