ಉಕ್ರೇನ್ ನಲ್ಲಿ ಬೃಹತ್ ಅಣೆಕಟ್ಟು ಕುಸಿತ: ಸುಮಾರು 100 ಗ್ರಾಮಗಳು ಮುಳುಗಡೆ
ದಕ್ಷಿಣ ಉಕ್ರೇನ್ ನ ರಷ್ಯಾ ನಿಯಂತ್ರಿತ ಖಮರ್ಸೆನ್ ಪ್ರಾಂತ್ಯದ ಪ್ರಮುಖ ಅಣೆಕಟ್ಟು ಕುಸಿದಿದೆ. ಪರಿಣಾಮ ತಗ್ಗು ಪ್ರದೇಶಗಳು ಪ್ರವಾಹದ ಭೀತಿಯಲ್ಲಿವೆ. ಈ ಪ್ರದೇಶದ ಸುಮಾರು 100 ಹಳ್ಳಿಗಳು ಮತ್ತು ಪಟ್ಟಣಗಳ ಸಾವಿರಾರು ಜನರನ್ನು ಸ್ಥಳಾಂತರಿಸಲು ಪ್ರಾರಂಭಿಸಲಾಗಿದೆ.
ಜಲವಿದ್ಯುತ್ ಯೋಜನೆಯ ಭಾಗವಾಗಿರುವ ನೋವಾ ಕಖೋವ್ಕಾ ಅಣೆಕಟ್ಟನ್ನು ರಷ್ಯಾದ ಪಡೆಗಳು ನಾಶಪಡಿಸಿವೆ ಎಂದು ಉಕ್ರೇನಿಯನ್ ಮಿಲಿಟರಿ ತಿಳಿಸಿದೆ. ಉಕ್ರೇನಿಯನ್ ಶೆಲ್ ದಾಳಿಯಿಂದ ಅದು ನಾಶವಾಗಿದೆ ಎಂದು ರಷ್ಯಾದ ಅಧಿಕಾರಿಗಳು ಹೇಳಿದ್ದಾರೆ.
ನಿಪ್ರೊ ನದಿಗೆ ಸೋವಿಯತ್ ಅವಧಿಯಲ್ಲಿ ನಿರ್ಮಿಸಲಾದ 6 ಅಣೆಕಟ್ಟುಗಳಲ್ಲಿ ಇದು ಅತಿದೊಡ್ಡದಾಗಿದೆ. ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾದ ಸಪೋರಿಟಿಯಾದಲ್ಲಿನ ರಿಯಾಕ್ಟರನ್ನು ತಂಪಾಗಿಸಲು ಇಲ್ಲಿಂದ ನೀರನ್ನು ಬಳಸಲಾಗುತ್ತದೆ. ಇದನ್ನು 2014 ರಲ್ಲಿ ರಷ್ಯಾ ವಶಪಡಿಸಿಕೊಂಡಿತ್ತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw