ನಿರ್ದೇಶಕ ನಟಿಗೆ ಮುತ್ತಿಟ್ಟದ್ದಕ್ಕೆ ಅರ್ಚಕ ಗರಂ: ಹೊಟೇಲ್ ಗೆ ಹೋಗಿ ಅದನ್ನು ಮಾಡಬಹುದು ಎಂದ ಅರ್ಚಕ
ಆದಿ ಪುರುಷ್ ಸಿನಿಮಾದ ನಿರ್ದೇಶಕ ಓಂ ರಾವುತ್ ಹಾಗೂ ನಟಿ ಕೃತಿ ಸನೋನ್ ಅವರು ತಿರುಪತಿಯ ವೆಂಕಟೇಶ್ವರ ದೇವಸ್ಥಾನಕ್ಕೆ ಇತ್ತೀಚೆಗೆ ಆಗಮಿಸಿದ್ದರು. ಭೇಟಿಯ ಬಳಿಕ ವಿದಾಯ ಹೇಳುವಾಗ ಓಂ ರಾವುತ್ ನಟಿಯ ಕೆನ್ನೆಗೆ ಮುತ್ತಿಟ್ಟು ವಿದಾಯ ಹೇಳಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಪರ ವಿರೋಧ ಕಾಮೆಂಟ್ ಗಳು, ಟ್ರೋಲ್ ಗಳಿಗೆ ಕಾರಣವಾಗಿತ್ತು.
ಈ ಘಟನೆಯನ್ನು ಮುಂದಿಟ್ಟುಕೊಂಡು ತೆಲಂಗಾಣದ ಬಾಲಾಜಿ ದೇವಸ್ಥಾನದ ಪ್ರಧಾನ ಅರ್ಚಕ ನಾಲಿಗೆ ಹರಿಯಬಿಟ್ಟಿದ್ದು, ನೀವು ಹೊಟೇಲ್ ಕೋಣೆಗೆ ಹೋಗಿ ಅದನ್ನು ಮಾಡಬಹುದು ಹಾರಿ ಹಾಯ್ದಿದ್ದಾರೆ.
ವಿದ್ಯಾವಂತ ಜನಸಮೂಹ ಪರಸ್ಪರ ಆತ್ಮೀಯತೆಯಿಂದ ಕೆನ್ನೆಗೆ ಮುತ್ತಿಡುವುದು ಪ್ರಸ್ತುತ ಸಾಮಾನ್ಯ ಸಂಗತಿಯಾಗಿದೆ. ಆದರೆ, ಸಂಪ್ರದಾಯವಾದಿಗಳಿಗೆ ಇದು ಬೇರೆಯದೇ ರೀತಿಯಾಗಿ ಕಾಣಿಸುತ್ತಿರುವುದೇ ವಿವಾದದ ಪ್ರಮುಖ ಬಿಂದುವಾಗಿ ಪರಿಣಮಿಸಿದೆ.
ಆದಿಪುರುಷ್ ಚಿತ್ರದ ನಿರ್ದೇಶಕ ನಟಿಗೆ ಮುತ್ತಿಟ್ಟಿರುವುದಕ್ಕೆ ಹರಿಹಾಯ್ದಿರುವ ದೇವಸ್ಥಾನದ ಪ್ರಧಾನ ಅರ್ಚಕ, “ಇದು ಖಂಡನೀಯ ಕೃತ್ಯ. ಗಂಡ ಹೆಂಡತಿ ಕೂಡ ಅಲ್ಲಿಗೆ (ದೇವಸ್ಥಾನ) ಒಟ್ಟಿಗೆ ಹೋಗುವುದಿಲ್ಲ. ನೀವು ಹೊಟೇಲ್ ಕೋಣೆಗೆ ಹೋಗಿ ಅದನ್ನು ಮಾಡಬಹುದು. ನಿಮ್ಮ ನಡವಳಿಕೆಯು ರಾಮಾಯಣ ಮತ್ತು ಸೀತಾ ದೇವಿಯನ್ನು ಅವಮಾನಿಸುವಂತಿದೆ ಎಂದು ನಾಲಿಗೆ ಹರಿಯಬಿಟ್ಟಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw