ಒಡಿಶಾ ರೈಲು ದುರಂತ: ಆಸ್ಪತ್ರೆಯಲ್ಲಿದ್ದ ಮಗನನ್ನು ಹೆತ್ತವರ ಬಳಿ ಸೇರಿಸಿದ ಟಿವಿ ಲೈವ್ ನ್ಯೂಸ್..!
ಜೂನ್ 2 ರಂದು ಒಡಿಶಾ ರೈಲು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನನ್ನು ನ್ಯೂಸ್ ಚಾನೆಲ್ ನ ಲೈವ್ ನ್ಯೂಸ್ ವೊಂದು ಹೆತ್ತವರ ಜತೆಗೂಡಿಸಿದ ಮತ್ತೊಂದು ಅಪರೂಪದ ಘಟನೆ ಬೆಳಕಿಗೆ ಬಂದಿದೆ.
ಆಸ್ಪತ್ರೆಯ ಐಸಿಯುನಲ್ಲಿ ಚೇತರಿಸಿಕೊಳ್ಳುತ್ತಿದ್ದ 15 ವರ್ಷದ ಬಾಲಕ ರಮಾನಂದ ಪಾಸ್ವಾನ್ ಎಂಬಾತ ತನ್ನ ಹೆತ್ತವರನ್ನು ಸುದ್ದಿ ವಾಹಿನಿಯಲ್ಲಿ ಬರುತ್ತಿದ್ದ ಟಿವಿ ಸಂದರ್ಶನದಲ್ಲಿ ನೋಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ.
288 ಜನರನ್ನು ಬಲಿ ತೆಗೆದುಕೊಂಡ ಅಪಘಾತದ ಬಗ್ಗೆ ತಿಳಿದು ಆತನ ಹೆತ್ತವರು ಒಡಿಶಾಗೆ ಬಂದಿದ್ದರು. ಅಲ್ಲದೇ ಭುವನೇಶ್ವರಕ್ಕೆ ಬಂದ ನಂತರ ಯುವಕನ ತಂದೆ ಹರಿ ಪಾಸ್ವಾನ್ ದಂಪತಿ ತಮ್ಮ ಮಗನನ್ನು ಹುಡುಕುತ್ತಾ ಒಂದರ ನಂತರ ಒಂದರಂತೆ ಆಸ್ಪತ್ರೆಗೆ ಅಲೆದಾಡುತ್ತಿದ್ದರು. ಹೀಗೆ ಭುವನೇಶ್ವರದ AIMS ನಲ್ಲಿದ್ದಾಗ, ಸ್ಥಳೀಯ ಟಿವಿ ಸುದ್ದಿ ವಾಹಿನಿಯ ಪತ್ರಕರ್ತರೊಬ್ಬರು ಇವರನ್ನು ಮಾತಾಡಿಸುವಾಗ ಲೈವಾಗಿ ನ್ಯೂಸ್ ಟೆಲಿಕಾಸ್ಟ್ ಆಗಿತ್ತು.
ಆವಾಗ ಆಸ್ಪತ್ರೆಯಲ್ಲಿದ್ದ ರಮಾನಂದ ಅವರಿದ್ದ ಕೋಣೆಯಲ್ಲಿ ಟಿವಿ ಆಳವಡಿಸಲಾಗಿತ್ತು. ಆಗ ಟಿವಿಯಲ್ಲಿ ಬಂದ ನ್ಯೂಸನ್ನು ಆತ ನೋಡುತ್ತಿರುವಾಗ ತನ್ನ ಹೆತ್ತವರನ್ನು ಗುರುತಿಸಿದ್ದಾನೆ. ಆತ ಈ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ.
ಕೂಡಲೇ ಆಸ್ಪತ್ರೆಯ ಸಿಬ್ಬಂದಿ ಟಿವಿ ಚಾನೆಲ್ ಕಚೇರಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿ ಆಸ್ಪತ್ರೆಯ ಅಧಿಕಾರಿಗಳು ರಮಾನಂದರನ್ನು ಅವರ ಪೋಷಕರೊಂದಿಗೆ ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಗನನ್ನು ಭೇಟಿಯಾದ ನಂತರ ಸಂತಸ ಹಂಚಿಕೊಂಡ ಬಾಲಕನ ತಂದೆ ಹರಿ ಪಾಸ್ವಾನ್, ‘ನನ್ನ ಮಗನನ್ನು ಕಂಡು ನನಗೆ ಸಂತೋಷವಾಗಿದೆ. ಅವನು ನಮ್ಮ ಮೂವರು ಸಂಬಂಧಿಕರೊಂದಿಗೆ ಪ್ರಯಾಣಿಸುತ್ತಿದ್ದ. ಅಪಘಾತದಲ್ಲಿ ಅವರೆಲ್ಲರೂ ಸಾವನ್ನಪ್ಪಿದ್ದಾರೆ. ದೇವರ ದಯೆಯಿಂದ ಈತ ಗಾಯದೊಂದಿಗೆ ಪವಾಡಸದೃಶವಾಗಿ ಪಾರಾಗಿದ್ದಾನೆ’ ಎಂದು ಭಾವುಕರಾದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw