ಪೊಲೀಸರ ಎದುರೇ ಕಾಂಗ್ರೆಸ್ ಮುಖಂಡನ ಕಾರು ಪುಡಿಗಟ್ಟಿದ ಬಿಜೆಪಿ ಕಾರ್ಯಕರ್ತರು - Mahanayaka
10:23 AM Thursday 12 - December 2024

ಪೊಲೀಸರ ಎದುರೇ ಕಾಂಗ್ರೆಸ್ ಮುಖಂಡನ ಕಾರು ಪುಡಿಗಟ್ಟಿದ ಬಿಜೆಪಿ ಕಾರ್ಯಕರ್ತರು

17/01/2021

ಅಗರ್ತಲ: ಪೊಲೀಸರ ಸಮ್ಮುಖದಲ್ಲಿಯೇ ತ್ರಿಪುರಾ ಕಾಂಗ್ರೆಸ್ ಅಧ್ಯಕ್ಷ ಪಿಜೂಶ್ ಬಿಸ್ವಾಸ್ ಕಾರಿನ ಮೇಲೆ ಆಡಳಿತ ಪಕ್ಷ ಬಿಜೆಪಿ ಬೆಂಬಲಿಗರು ದಾಳಿ ನಡೆಸಿದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

ಅಗರ್ತಲದಿಂದ 20 ಕಿ.ಮೀ.ದೂರದಲ್ಲಿರುವ ಬಿಶಾಲ್ ಗಢದಲ್ಲಿರುವ ಕಾಂಗ್ರೆಸ್ ಕಚೇರಿ ಬಳಿಯಲ್ಲಿ ಈ ಘಟನೆ ನಡೆದಿದ್ದು, ದಾಳಿಯ ಪರಿಣಾಮ ಪಿಜೂಶ್ ಬಿಸ್ವಾಸ್ ಅವರ ಕಾರಿನ ಗಾಜು ಪುಡಿಯಾಗಿ, ಅವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಇದೇ ಸಂದರ್ಭದಲ್ಲಿ ಜೊತೆಗಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೂ ಗಾಯಗಳಾಗಿವೆ.

ಇನ್ನೂ ಈ ಸಂಬಂಧ ಇಂದು ಸಂಜೆ ಪತ್ರಿಕಾಗೋಷ್ಠಿ ಕರೆಯುವುದಾಗಿ ಬಿಸ್ವಾಸ್ ತಿಳಿಸಿದ್ದು, ಈ ಕುರಿತು ತಾನು ಎಫ್ ಐಆರ್ ದಾಖಲಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ