ಫ್ಯಾಕ್ಟ್ ಚೆಕ್: ಚೀಲದಲ್ಲಿ ಹಣ ಇರುವ ವಿಡಿಯೋ ವೈರಲ್: ಇದು ಭಾರತದಲ್ಲ, ಬಾಂಗ್ಲಾದ ಚಿತ್ರಣ..!
ಮೊನ್ನೆಯಿಂದ ಮಸೀದಿಯಂತೆ ಕಾಣುವ ಸ್ಥಳದಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಹಣವನ್ನು ತುಂಬುತ್ತಿರುವುದನ್ನು ತೋರಿಸುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರ ಜೊತೆಗೆ ಕೋಮು ದ್ವೇಷದ ಪೋಸ್ಟ್ ಗಲೂ ಹರಿದಾಡುತ್ತಿದ್ದು, ಅದರಲ್ಲಿ ಮಸೀದಿಗಳಲ್ಲಿ ಸಂಗ್ರಹವಾಗುವ ಹಣಕ್ಕೆ ತೆರಿಗೆ ಇಲ್ಲ. ಈ ಹಣವನ್ನು ಮತಾಂತರ, ಭಯೋತ್ಪಾದನೆ ಮತ್ತು ಲವ್ ಜಿಹಾದ್ ಮಾಡಲು ಬಳಸಲಾಗುತ್ತದೆ ಎಂಬ ಬರಹದೊಂದಿಗೆ ಈ ವಿಡಿಯೊ ಶೇರ್ ಆಗುತ್ತಿದೆ.
ಸತ್ಯಾಂಶ ಏನು..?
ಈ ವೈರಲ್ ವಿಡಿಯೊದ ಫ್ಯಾಕ್ಟ್ ಚೆಕ್ ಮಾಡಿದ ದಿ ಕ್ವಿಂಟ್, ವಿಡಿಯೊ ಮಸೀದಿಯದ್ದಾಗಿದ್ದರೂ ಇದು ಭಾರತದ್ದಲ್ಲ. ಇದು ಬಾಂಗ್ಲಾದೇಶದ ಕಿಶೋರ್‌ಗಂಜ್‌ನಲ್ಲಿರುವ ಪಾಗ್ಲಾ ಮಸೀದಿಯ ಚಿತ್ರಣ. ಹಣದ ಎಣಿಕೆಗಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಇಲ್ಲಿನ ಕಾಣಿಕೆ ಡಬ್ಬಿಯನ್ನು ತೆರೆಯಲಾಗುತ್ತದೆ.
ಆದರೆ ಈ ವೈರಲ್ ವಿಡಿಯೊದಲ್ಲಿ ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ಹಣ ತುಂಬುತ್ತಿರುವುದನ್ನು ಕಾಣಬಹುದು. ಈ ಪ್ಲಾಸ್ಟಿಕ್ ಬ್ಯಾಗ್ ಮೇಲೆ ಬರೆದ ಪಠ್ಯವನ್ನು ಜೂಮ್ ಮಾಡಿ ನೋಡಿದರೆ ಅದು ಬಂಗಾಳಿಯಲ್ಲಿದೆ. ಅದನ್ನು ಇಂಗ್ಲಿಷ್‌ಗೆ ಅನುವಾದಿಸಿದಾಗ, ‘In coal, Broiler and BG ಎಂದು ತೋರಿಸುತ್ತದೆ.
ಗೂಗಲ್ ನಲ್ಲಿ Bangla, mosque and money- ಹೀಗೆ ಕೀವರ್ಡ್‌ಗಳಿಂದ ಹುಡುಕಿದಾಗ ಮೇ 7 ರಂದು ಪ್ರಕಟವಾದ ಡೈಲಿ ಸ್ಟಾರ್ ನಲ್ಲಿ ಈ ಕುರಿತಾದ ವರದಿ ಇದೆ. ಈ ವರದಿಯಲ್ಲಿ ವೈರಲ್ ವಿಡಿಯೊದಲ್ಲಿರುವ ಅದೇ ಸ್ಥಳವಿದೆ. ಅದು ಬಾಂಗ್ಲಾದೇಶದ ಕಿಶೋರೆಗಂಜ್ ಪಾಗ್ಲಾ ಮಸೀದಿ.
ಜನವರಿಯಲ್ಲಿ 7ರಂದು ಬಿಸಿನೆಸ್ ಸ್ಟ್ಯಾಂಡರ್ಡ್‌ನಲ್ಲಿ ಪ್ರಕಟವಾದ ಸುದ್ದಿಯಲ್ಲಿ ಪಾಗ್ಲಾ ಮಸೀದಿಯಲ್ಲಿ ಸಂಗ್ರಹಿಸಿದ ಹಣವನ್ನು ಎಣಿಸಲು ಪ್ರತಿ ಮೂರು ತಿಂಗಳಿಗೊಮ್ಮೆ ದೇಣಿಗೆ ಪೆಟ್ಟಿಗೆಗಳನ್ನು ತೆರೆಯಲಾಗುತ್ತದೆ ಎಂದು ಹೇಳಿದೆ. ಈ ಹಣವನ್ನು ಇತರ ಮಸೀದಿಗಳು, ಮದರಸಾಗಳ ಅಭಿವೃದ್ಧಿ ಮತ್ತು ಸಾಮಾಜಿಕ ಕಾರ್ಯಗಳಿಗೆ ಬಳಸಲಾಗುತ್ತದೆ ಎಂದು ಈ ವರದಿ ಹೇಳಿದೆ.
ಇನ್ನು ಈ ಕುರಿತು ದಿ ಕ್ವಿಂಟ್‌ನೊಂದಿಗೆ ಮಾತನಾಡಿದ ಬಾಂಗ್ಲಾದೇಶದ ಚಾನೆಲ್ I ನ ಸಿಬ್ಬಂದಿ ವರದಿಗಾರ್ತಿ ಹಬೀಬಾ ನಜ್ನಿನ್, ಕಿಶೋರೆಗಂಜ್‌ನ ಪಾಗ್ಲಾ ಮಸೀದಿಯಲ್ಲಿ ದೇಣಿಗೆ ಪೆಟ್ಟಿಗೆಗಳ ಎಣಿಕೆ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯುತ್ತದೆ ಎಂದಿದ್ದಾರೆ.
ಅಷ್ಟೇ ಅಲ್ಲ, ಬಾಂಗ್ಲಾದೇಶ ಸುದ್ದಿ ವಾಹಿನಿ ಸೊಮೊಯ್ ಟಿವಿ ಮೇ 6 ರಂದು ಪೋಸ್ಟ್ ಮಾಡಿದ ಯೂಟ್ಯೂಬ್ ವಿಡಿಯೊದಲ್ಲಿ ಕೂಡಾ ಈ ವೈರಲ್ ವಿಡಿಯೊದಲ್ಲಿರುವ ದೃಶ್ಯಗಳನ್ನು ಕಾಣಬಹುದು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAwf