ಉಡುಪಿ: ಫುಟ್ ಪಾತ್ ಗಳಲ್ಲಿರುವ ಅಂಗಡಿ ಬೋರ್ಡ್ ಗಳನ್ನು ತೆರವುಗೊಳಿಸಲು ನಗರಸಭೆ ಸೂಚನೆ
ಉಡುಪಿ : ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡಗಳು ಹಾಗೂ ಉದ್ದಿಮೆದಾರರು ತಮ್ಮ ಅಂಗಡಿಗಳ ಬೋರ್ಡುಗಳನ್ನು ಪಾದಾಚಾರಿ ಮಾರ್ಗ / ಫುಟ್‌ಪಾತ್‌ಗಳಲ್ಲಿ ಅಳವಡಿಸಬಾರದು.
ಫುಟ್ ಪಾತ್ ಗಳಲ್ಲಿ ಅಂಗಡಿಗಳ ಬೋರ್ಡುಗಳನ್ನು ಅಳವಡಿಸಿರುವುದು ಕಂಡುಬಂದಲ್ಲಿ, ನಗರಸಭೆಯ ವತಿಯಿಂದ ಯಾವುದೇ ಮುನ್ಸೂಚನೆ ನೀಡದೇ ಅಂತಹ ಬೋರ್ಡುಗಳನ್ನು ತೆರವುಗೊಳಿಸಿ, ಭಾರೀ ದಂಡ ವಿಧಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ಪಿಂಚಣಿ ಜಮೆಗೆ ಆಧಾರ್ ಜೋಡಣೆ ಕಡ್ಡಾಯ:
ಉಡುಪಿ: ಅಂಚೆ ಇಲಾಖೆಯ ವತಿಯಿಂದ ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳಿಗೆ ಪಿಂಚಣಿ ವಿತರಣೆಯನ್ನು ಪ್ರಸಕ್ತ ಸಾಲಿನ ಜೂನ್‌ನಿಂದಲೇ ಆಧಾರ್ ಆಧಾರಿತ ವ್ಯವಸ್ಥೆಯಡಿ ಪ್ರಾರಂಭಿಸಲಾಗುತ್ತಿದ್ದು, ಅಂಚೆ ಇಲಾಖೆಯಲ್ಲಿನ ಉಳಿತಾಯ ಖಾತೆಗೆ ಪಿಂಚಣಿ ಜಮೆಯಾಗಲು ಫಲಾನುಭವಿಗಳು ತಮ್ಮ ಹತ್ತಿರದ ಅಂಚೆ ಕಚೇರಿ ಅಥವಾ ಪೋಸ್ಟ್ ಮ್ಯಾನ್ ರನ್ನು ಸಂಪರ್ಕಿಸಿ, ಆಧಾರ್ ಸಂಖ್ಯೆಯನ್ನು ಜೋಡಿಸಿಕೊಳ್ಳುವಂತೆ ಉಡುಪಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಲ್ಪೆ: ಮೀನುಗಾರಿಕಾ ಜಟ್ಟಿಯ ಮೇಲಿನ ವಸ್ತುಗಳ ತೆರವಿಗೆ ಸೂಚನೆ
ಉಡುಪಿ : ಸರಕಾರದ ಆದೇಶದಂತೆ ಈಗಾಗಲೇ ಜೂನ್ 1 ರಿಂದ ಜುಲೈ 31 ರ ವರೆಗೆ ಮೀನುಗಾರಿಕೆ ನಿಷೇಧ ಜಾರಿಯಲ್ಲಿದ್ದು, ಈ ಅವಧಿಯಲ್ಲಿ ಮೀನುಗಾರಿಕೆ ಚಟುವಟಿಕೆಗಳನ್ನು ಸಂಪೂರ್ಣ ನಿಷೇಧಿಸಲಾಗಿರುತ್ತದೆ.
ಮಲ್ಪೆ ಬಂದರಿನಲ್ಲಿ ಬೆಂಕಿಯಿಂದ ಉಂಟಾಗುವ ಅವಘಡಗಳನ್ನು ತಡೆಯಲು ಅಗ್ನಿ ಶಾಮಕ ವಾಹನವು ತಿರುಗಾಡಲು ಅನುಕೂಲವಾಗುವಂತೆ ಜಟ್ಟಿಯ ಮೇಲಿರುವ ಡಿಂಗಿ, ಬಲೆ, ಪ್ಲಾಸ್ಟಿಕ್ ಕ್ರೇಟ್ಸ್ ಹಾಗೂ ಇತ್ಯಾದಿ ವಸ್ತುಗಳನ್ನು ತೆರವುಗೊಳಿಸಬೇಕು.
ಜಟ್ಟಿಯ ಮೇಲೆ ನೀರು ಸರಬರಾಜು ಮಾಡುವ ವಾಹನ ಹಾಗೂ ಕ್ರೇನ್ಗಳ ಓಡಾಟವನ್ನು ನಿರ್ಬಂಧಿಸಲಾಗಿದ್ದು, ಮೀನುಗಾರಿಕೆ ಇಲಾಖೆಯ ಅನುಮತಿ ಮೇರೆಗೆ ಬೆಳಗ್ಗೆ 9 ರಿಂದ ಸಂಜೆ 6 ರ ವರೆಗೆ ಬೋಟುಗಳ ದುರಸ್ತಿ ಕಾರ್ಯ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಮಲ್ಪೆ ಮೀನುಗಾರಿಕೆ ಬಂದರು ಯೋಜನೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw