ಫ್ಯಾಕ್ಟ್ ಚೆಕ್: ಯುಪಿಯಲ್ಲಿ ದೇಗುಲದ ವಿಗ್ರಹ ಒಡೆದದ್ದು ಮುಸ್ಲಿಮರಲ್ಲ; ಸತ್ಯಾಂಶ ಬಯಲು
ಅದು ಜೂನ್ 1. ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿನ ಬರಲ್ ಗ್ರಾಮದಲ್ಲಿ ನಾಲ್ಕು ದೇಗುಲಗಳಲ್ಲಿ ಸುಮಾರು ಹನ್ನೆರಡು ಹಿಂದೂ ದೇವರ ವಿಗ್ರಹಗಳನ್ನು ಕೆಲವು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಮಂದಿ ವಿಗ್ರಹಗಳ ಧ್ವಂಸಗೊಳಿಸಿದ ವಿಡಿಯೊ ಪೋಸ್ಟ್ ಮಾಡಿ ಇದು ಹಿಂದೂಗಳ ಮೇಲಿನ ದಾಳಿ ಎಂದಿದ್ದಾರೆ. ಇನ್ನು ಕೆಲವು ಇದು ಮುಸ್ಲಿಂ ಸಮುದಾಯದ ಕೃತ್ಯ ಎಂದು ಹೇಳಿದ್ದರು.
ಸತ್ಯ ಏನು..?:
ಈ ವೈರಲ್ ಪೋಸ್ಟ್ಗಳ ಬಗ್ಗೆ ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ಮಾಡಿ ವರದಿ ಮಾಡಿದೆ. ಈ ಬಗ್ಗೆ ಹಿಂದಿಯಲ್ಲಿ ಕೀವರ್ಡ್ ಹುಡುಕಾಟ ಮಾಡಿದ ಜೂನ್ 8 ರಂದು ಪ್ರಕಟವಾದ ದೈನಿಕ್ ಭಾಸ್ಕರ್ ವರದಿ ಸಿಕ್ಕಿದೆ. ಈ ವರದಿಯಲ್ಲಿ ಧಾರ್ಮಿಕ ವಿಗ್ರಹ ಧ್ವಂಸ ಆರೋಪದ ತಪ್ಪೊಪ್ಪಿಗೆ: ನಾವು ಪೂಜಿಸುತ್ತಿರುವ ವಿಗ್ರಹಗಳನ್ನು ಮುರಿದಿದ್ದೇವೆ. ಹೊಸ ವಿಗ್ರಹಗಳಿಗಾಗಿ ನಾನು ಈ ರೀತಿ ಮಾಡಿದ್ದೇವೆ. 4 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದೆ. ಎಲ್ಲಾ ನಾಲ್ವರು ಆರೋಪಿಗಳು ಬರಾಲ್ ನಿವಾಸಿಗಳಾಗಿದ್ದು, ಅವರ ಹೆಸರುಗಳು – ಹರೀಶ್ ಶರ್ಮಾ, ಶಿವಂ, ಕೇಶವ್ ಮತ್ತು ಅಜಯ್ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಎಸ್ಪಿ ಶ್ಲೋಕ್ ಕುಮಾರ್ ದೃಢಪಡಿಸಿದ ಬುಲಂದ್ಶಹರ್ ಪೊಲೀಸರ ಟ್ವೀಟ್ ಕೂಡಾ ಇದನ್ನೇ ಕೇಳುತ್ತದೆ. ಈ ಕೃತ್ಯಕ್ಕೆ ಹರೀಶ್ ಶರ್ಮಾ ನೇತೃತ್ವ ವಹಿಸಿದ್ದು, ಇತರ ಮೂವರಿಗೆ ಆಗಾಗ್ಗೆ ಆತಿಥ್ಯ ನೀಡುತ್ತಿದ್ದರು. ಅವರು ಒಟ್ಟಿಗೆ ಮದ್ಯ ಸೇವಿಸುತ್ತಿದ್ದರು ಎಂದು ಎಸ್ಎಸ್ಪಿ ಉಲ್ಲೇಖಿಸಿದ್ದಾರೆ. ಕೃತ್ಯ ನಡೆದ ದಿನವೂ ಅವರು ಕುಡಿದ ಮತ್ತಿನಲ್ಲಿದ್ದರು.
ಮತ್ತೊಂದು ಟ್ವೀಟ್ನಲ್ಲಿ ಬುಲಂದ್ಶಹರ್ ಪೊಲೀಸರು ನಾಲ್ವರ ಬಂಧನದ ಅಧಿಕೃತ ಸೂಚನೆಯನ್ನು ಹಂಚಿಕೊಂಡಿದ್ದಾರೆ. ದೈನಿಕ್ ಭಾಸ್ಕರ್ ವರದಿಯಲ್ಲಿ ಉಲ್ಲೇಖಿಸಿರುವ ಎಲ್ಲಾ ನಾಲ್ವರು ಆರೋಪಿಗಳ ಹೆಸರನ್ನೇ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ನಾಲ್ವರು ಆರೋಪಿಗಳನ್ನು ಬಂಧಿಸಿದ ಕುರಿತು ಆಜ್ ತಕ್, ದುಷ್ಕರ್ಮಿಗಳು ಹಿಂದೂಗಳು ಎಂಬ ವಿಷಯವನ್ನು ಹಂಚಿಕೊಂಡಿದೆ. ಹೀಗಾಗಿ ಬುಲಂದ್ಶಹರ್ನ ನಾಲ್ಕು ದೇಗುಲಗಳಲ್ಲಿ ಹಿಂದೂ ದೇವತೆಗಳ ವಿಗ್ರಹಗಳನ್ನು ಧ್ವಂಸ ಮಾಡಿದ ದುಷ್ಕರ್ಮಿಗಳು ಮುಸ್ಲಿಮರಲ್ಲ. ಬದಲಾಗಿ ಹಿಂದೂ ಸಮುದಾಯದ ಮಂದಿಯೇ ಎಂಬುದು ಈ ವರದಿಗಳಿಂದ ಸ್ಪಷ್ಟವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw