ಮದ್ವೆ ಆಗಿದ್ರೂ ಲವರ್ ಇಟ್ಕೊಂಡ: ಪ್ರಿಯತಮೆ ಮದ್ವೆ ಆಗು ಎಂದಿದ್ದಕ್ಕೆ ಆಕೆಯನ್ನು ಕೊಂದು ಚರಂಡಿಗೆ ಎಸೆದ ಅರ್ಚಕ..!
ಅರ್ಚಕನೊಬ್ಬ ತನ್ನ ಪ್ರಿಯತಮೆಯನ್ನು ಕೊಂದು ಶವವನ್ನು ಚರಂಡಿಯಲ್ಲಿ ಬಿಸಾಡಿದ ಘಟನೆ ತೆಲಂಗಾಣದ ಸರೂರ್ ನಗರದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ರಿಜಿಸ್ಟ್ರಾರ್ ಕಚೇರಿಯ ಹಿಂಭಾಗದ ಚರಂಡಿಯಲ್ಲಿ ಪ್ರಿಯತಮೆಯನ್ನು ಕೊಂದು ಶವವನ್ನು ಎಸೆದ ಆರೋಪದ ಮೇಲೆ ವಿವಾಹಿತ ಅರ್ಚಕ ಅಯ್ಯಗರಿ ಸಾಯಿ ಕೃಷ್ಣ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಿಕ್ಕಿಬಿದ್ದಿದ್ದು ಹೇಗೆ..?:
ತನ್ನ ಪ್ರಿಯತಮೆ ಕುರುಗಂಟಿ ಅಪ್ಸರಾ ಅವರನ್ನು ಭದ್ರಾಚಲಂಗೆ ಪ್ರಯಾಣಿಸಲು ತಾನು ಆಕೆಯನ್ನು ಶಂಶಾಬಾದ್ ಬಸ್ ನಿಲ್ದಾಣದಲ್ಲಿ ಡ್ರಾಪ್ ಮಾಡಿ ಬಂದಿದ್ದೆ. ಆದಾದ ನಂತರ ಆಕೆ ಕಾಣೆಯಾಗಿದ್ದಾಳೆ ಎಂದು ಸ್ವತಃ ಅರ್ಚಕ ಸಾಯಿಕೃಷ್ಣ ನಾಪತ್ತೆ ದೂರು ದಾಖಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಈ ದೂರಿನಲ್ಲಿ ನಾನು ಆಕೆಯನ್ನು ಡ್ರಾಪ್ ಮಾಡಿದ ನಂತರ ಆಕೆ ಯಾವುದೇ ಕರೆಗಳಿಗೆ ಸ್ಪಂದಿಸುತ್ತಿಲ್ಲ. ಮೇ 3 ರಿಂದ ಕಾಣೆಯಾಗಿದ್ದಾರೆ ಎಂದು ಹೇಳಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುವ ವೇಳೆ ಸಿಸಿಟಿವಿಗಳು ಮತ್ತು ಇತರ ತಾಂತ್ರಿಕ ದತ್ತಾಂಶಗಳನ್ನು ಶೋಧಿಸಿದ ನಂತರ ಪೊಲೀಸರಿಗೆ ಸಾಯಿ ಕೃಷ್ಣ ಬಗ್ಗೆ ಅನುಮಾನ ಬಂದಿದೆ. ಆತನನ್ನೇ ವಶಕ್ಕೆ ತೆಗೆದುಕೊಂಡು ವಿಚಾರಣೆಯ ಮಾಡುವ ವೇಳೆ ತಾನು ಅಪ್ಸರಾನನ್ನು ಕೊಂದಿದ್ದೇನೆ ಎಂದು ಬಹಿರಂಗಪಡಿಸಿದ್ದಾನೆ.
ಆರೋಪಿ ಅರ್ಚಕ ಸಾಯಿ ಕೃಷ್ಣನಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳು ಕೂಡಾ ಇದ್ದಾರೆ. ಆದಾಗ್ಯೂ, ಈತ ಅಪ್ಸರಾ ಜೊತೆಗೆ ವಿವಾಹೇತರ ಸಂಬಂಧ ಹೊಂದಿದ್ದ. ಹೀಗಾಗಿ ಅಪ್ಸರಾ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು. ಹೀಗಾಗಿ ನಾನು ಅವಳನ್ನು ಕೊಲೆ ಮಾಡಲು ಮುಂದಾದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಪೊಲೀಸರ ಪ್ರಕಾರ ಆರೋಪಿ ಶಂಶಾಬಾದ್ ನಲ್ಲಿ ಅಪ್ಸರಾ ಅವರನ್ನು ಕೊಂದು ನಂತರ ಶವವನ್ನು ಸರೂರ್ ನಗರಕ್ಕೆ ಸಾಗಿಸುವ ಮೊದಲು ಪ್ಲಾಸ್ಟಿಕ್ ಕವರ್ನಲ್ಲಿ ಪ್ಯಾಕ್ ಮಾಡಿದ್ದರು. ಅವರು ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ದೇವಾಲಯದ ಸಮೀಪ ಇರುವ ಸರ್ಕಾರಿ ಕಚೇರಿಯ ಹಿಂಭಾಗದ ಚರಂಡಿಗೆ ಶವವನ್ನು ಎಸೆದು ಹೋಗಿದ್ದರು. ಆರೋಪಿ ಸಾಯಿ ಕೃಷ್ಣ ವಿರುದ್ಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw