ಒಡಿಶಾ ರೈಲು ದುರಂತ: ಛಿದ್ರ ಛಿದ್ರಗೊಂಡ ದೇಹದ ಗುರುತು ಪತ್ತೆ ಹಚ್ಚಿದ್ದು ಹೇಗೆ ಗೊತ್ತಾ..? - Mahanayaka
11:57 AM Thursday 14 - November 2024

ಒಡಿಶಾ ರೈಲು ದುರಂತ: ಛಿದ್ರ ಛಿದ್ರಗೊಂಡ ದೇಹದ ಗುರುತು ಪತ್ತೆ ಹಚ್ಚಿದ್ದು ಹೇಗೆ ಗೊತ್ತಾ..?

11/06/2023

ಒಡಿಶಾ ದುರಂತದಲ್ಲಿ ಮೃತಪಟ್ಟ ವ್ಯಕ್ತಿಗಳ ಗುರುತನ್ನು ಪತ್ತೆ ಹಚ್ಚಲು ರೈಲ್ವೇ ಸಚಿವಾಲಯ ಕೇಂದ್ರದ ವಿವಿಧ ಸಂಸ್ಥೆಗಳ ನೆರವಿನಿಂದ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ತಂತ್ರಜ್ಞಾನದ ಸಹಾಯ ಪಡೆದು ಮೃತರ ದೇಹಗಳನ್ನು ಪತ್ತೆ ಹಚ್ಚಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದೆ.

ಒಡಿಶಾ ರೈಲು ದುರಂತದಲ್ಲಿ ಒಟ್ಟು 275 ಮಂದಿ ಮೃತಪಟ್ಟಿದ್ದರು. ಇದರಲ್ಲಿ ಕೆಲವರ ದೇಹ ಗುರುತು ಸಿಗದಷ್ಟು ಛಿದ್ರವಾಗಿತ್ತು. ಈ ಸಮಸ್ಯೆ ಪರಿಹಾರಕ್ಕೆ ರೈಲ್ವೇ ಟೆಲಿಕಾಂ ಸಚಿವಾಲಯ, ಸೈಬರ್‌ ಸೆಲ್‌, ಸರ್ಕಾರಿ ಅಧಿಕಾರಿಗಳು, ಆಧಾರ್‌ ಅಧಿಕಾರಿಗಳ ಜೊತೆ ಚರ್ಚಿಸಿ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ನೆರವು ಪಡೆದಿದ್ದಾರೆ.

ಮೊದಲು ಆಧಾರ್‌ ತಜ್ಞರು‌ ಮೃತ ವ್ಯಕ್ತಿಗಳ ಎಡಗೈಯಿಂದ ಬೆರಳಚ್ಚನ್ನು ಪಡೆದರು. ಆವಾಗ ಫಿಂಗರ್‌ಪ್ರಿಂಟ್‌ನಿಂದಾಗಿ 65 ಮಂದಿಯ ದೇಹದ ಗುರುತು ಪತ್ತೆಯಾಯಿತು.

ಮೃತದೇಹಗಳ ಪೈಕಿ ಕೆಲವರ ಕೈಗಳ ಚರ್ಮವೇ ಕಿತ್ತು ಹೋಗಿತ್ತು. ಹೀಗಾಗಿ ಫಿಂಗರ್‌ ಪ್ರಿಂಟ್‌ನಿಂದ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ ಸಂಚಾರ್‌ ಸಾಥಿ ತಂತ್ರಜ್ಞಾನ ಬಳಸಿ ಪ್ರಯಾಣಿಕರ ಗುರುತು ಪತ್ತೆ ಹಚ್ಚಲು ಅಧಿಕಾರಿಗಳು ಮುಂದಾದರು.




ಫೋನ್‌ ನಂಬರ್‌ ಮೂಲಕ ಪ್ರಯಾಣಿಕರ ಮಾಹಿತಿಯನ್ನು ಸಂಚಾರ್‌ ಸಾಥಿ ಟೂಲ್‌ ಪತ್ತೆ ಹಚ್ಚುತ್ತದೆ. ಈ ಟೂಲ್‌ ಸಹಾಯದಿಂದ ಸಂತ್ರಸ್ತರ ಮುಖವನ್ನು ಸ್ಕ್ಯಾನ್‌ ಮಾಡಲಾಯಿತು. ಬಂದ ಫೋಟೋವನ್ನು ಆಧಾರ್‌ ಕಾರ್ಡ್‌ ಭಾವಚಿತ್ರ ತಾಳೆ ಹಾಕಿ ಹೆಚ್ಚು ಸಾಮ್ಯತೆ ಕಂಡು ಬಂದ ಬಳಿಕ ಆಧಾರ್‌ ಲಿಂಕ್‌ ಮೊಬೈಲ್‌ ನಂಬರ್‌ ಪಡೆದು ವಿವರವನ್ನು ಪತ್ತೆ ಹಚ್ಚಲಾಯಿತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ