ಸ್ಯಾಕ್ಸೋಪೋನ್ ವಾದಕ ಸುಂದರ ಸೇರಿಗಾರ್ ನಿಧನ - Mahanayaka
12:01 AM Thursday 12 - December 2024

ಸ್ಯಾಕ್ಸೋಪೋನ್ ವಾದಕ ಸುಂದರ ಸೇರಿಗಾರ್ ನಿಧನ

sudar shetygar
14/06/2023

ಉಡುಪಿ: ಉಡುಪಿಯ ಖ್ಯಾತ ಸ್ಯಾಕ್ಸೋಫೋನ್ ವಾದಕ ಮೂಡು ಅಲೆವೂರು ನಿವಾಸಿ ಸುಂದರ ಸೇರಿಗಾರ್(76) ಬುಧವಾರ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಇವರ ಕಲಾಸೇವೆಯನ್ನು ಪರಿಗಣಿಸಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶ್ರೇಷ್ಠ ಕಲಾ ಶಿಕ್ಷಕ ಪ್ರಶಸ್ತಿಗೂ ಇವರಪು ಭಾಜನರಾಗಿದ್ದರು. ಅಲ್ಲದೆ ಹತ್ತು ಹಲವು ಸಂಘಟನೆಗಳು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿವೆ.

ಸ್ಯಾಕ್ಸೊಫೋನ್ ವಾದಕರಾಗಿ ದೇಶ ವಿದೇಶಗಳಲ್ಲಿ ಪ್ರಸಿದ್ಧರಾಗಿದ್ದ ಇವರು ಸ್ಯಾಕ್ಸೊಫೋನ್ ಕಲಾ ತರಗತಿಯನ್ನು ಆರಂಭಿಸಿ, ಸಾವಿರಾರು ಮಂದಿ ಶಿಷ್ಯರಿಗೆ ಕಲೆಯನ್ನು ಧಾರೆ ಎರೆದಿದ್ದಾರೆ. ಹೆಣ್ಣು ಮಕ್ಕಳಿಗೆ ಪ್ರಪ್ರಥಮ ಬಾರಿ ಸ್ಯಾಕ್ಸೋ ಫೋನ್ ಕಲೆಯನ್ನು ಕಲಿಸಿದ ಕೀರ್ತಿ ಇವರದ್ದಾಗಿದೆ.

ಕರ್ನಾಟಕ, ಕೇರಳ, ತಮಿಳುನಾಡು, ಹೈದರಾಬಾದ್, ಗೋವಾ, ಮುಂಬೈ ಸೇರಿದಂತೆ ದೇಶ ವಿದೇಶಗಳಲ್ಲಿ ತಮ್ಮ ಕಛೇರಿ ನೀಡಿ ಜನಪ್ರಿಯತೆ ಗಳಿಸಿದ್ದರು. ಇವರು ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ