ಬಾಲಕನನ್ನು ಕೊಂದ ಮೊಸಳೆಯನ್ನು ಹೊಡೆದು ಸಾಯಿಸಿದರು..!
ಬಾಲಕನನ್ನು ಮೊಸಳೆ ಕೊಂದಿದ್ದರಿಂದ ಕುಪಿತಗೊಂಡ ಗ್ರಾಮಸ್ಥರು ಮೊಸಳೆಯನ್ನು ಹೊಡೆದು ಕೊಂದ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ಬಿದುಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗೋಕುಲಪುರ ನಿವಾಸಿ ಧರ್ಮೇಂದ್ರ ದಾಸ್ ಎಂಬುವವರು ಇತ್ತೀಚೆಗೆ ಬೈಕ್ ಖರೀದಿಸಿದ್ದರು. ಈ ಹಿನ್ನೆಲೆಯಲ್ಲಿ ಧಾರ್ಮಿಕ ವಿಧಿವಿಧಾನ ನಡೆಸಲು ತಮ್ಮ ಕುಟುಂಬದೊಂದಿಗೆ ಗಂಗಾ ನದಿಯ ದಡಕ್ಕೆ ಬಂದಿದ್ದಾರೆ. ದಾಸ್ ಅವರ ಮಗ ಅಂಕಿತ್ ಕೂಡಾ ನೀರನ್ನು ತರಲು ಗಂಗಾನದಿಯ ದಡಕ್ಕೆ ಹೋಗಿದ್ದಾಗ ಮೊಸಳೆಯು ಅವನನ್ನು ನದಿಗೆ ಎಳೆದುಕೊಂಡು ಹೋಗಿದೆ.
ಇದೇ ವೇಳೆ ಬಾಲಕ ಅಂಕಿತ್ ಕಿರುಚಾಡಿದ್ದನ್ನು ನೋಡಿದ ಕುಟುಂಬಸ್ಥರು ರಕ್ಷಣೆಗೆ ಧಾವಿಸಿದ್ದಾರೆ. ಆದರೆ ಆವಾಗಲೇ ಬಾಲಕ ಮೃತಪಟ್ಟಿದ್ದ.
ಈ ಘಟನೆ ಅಲ್ಲಿ ನೆರೆದಿದ್ದ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ. ಕೂಡಲೇ ಸ್ಥಳೀಯರು ಮೀನಿನ ಬಲೆಯನ್ನು ಹರಡಿ ದೋಣಿಯ ಮೂಲಕ ಸಾಗಿ ನದಿಗಿಳಿದು ಮೊಸಳೆಯನ್ನು ಹಿಡಿದು ದಡಕ್ಕೆ ತಂದು ದೊಣ್ಣೆಯಿಂದ ಮೊಸಳೆಗೆ ಹೊಡೆದು ಹಲ್ಲೆಗೈದು ಸಾಯಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw