ದಿಢೀರನೆ ಪಾರ್ಕಿಂಗ್ ಸ್ಥಳ ಕುಸಿತ: ಅವಶೇಷಗಳಡಿಯಲ್ಲಿ ವಾಹನಗಳು‌ ಜಖಂ - Mahanayaka

ದಿಢೀರನೆ ಪಾರ್ಕಿಂಗ್ ಸ್ಥಳ ಕುಸಿತ: ಅವಶೇಷಗಳಡಿಯಲ್ಲಿ ವಾಹನಗಳು‌ ಜಖಂ

Punjabs Mohali
15/06/2023

ಪಂಜಾಬ್ ನ ಮೊಹಾಲಿಯಲ್ಲಿ ಪಾರ್ಕಿಂಗ್ ಸ್ಥಳದ ಒಂದು ಭಾಗ ಕುಸಿದ ಪರಿಣಾಮ ಕಾರುಗಳು ಮತ್ತು ಬೈಕ್ ಗಳು ಸೇರಿದಂತೆ ಸುಮಾರು 12 ವಾಹನಗಳು ಹಾನಿಗೊಂಡ ಘಟನೆ ನಡೆದಿದೆ. ಇನ್ನೂ ಕೆಲವು ವಾಹನಗಳು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿವೆ.

ಪಕ್ಕದಲ್ಲಿದ್ದ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ನೆಲಮಾಳಿಗೆಯಲ್ಲಿ ಕೆಲಸ ನಡೆಯುತ್ತಿದ್ದು, ಇದಕ್ಕಾಗಿ ಮಣ್ಣನ್ನು ಅಗೆದದ್ದೇ ಕುಸಿತಕ್ಕೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೂ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದಾಗ ದ್ವಿಚಕ್ರ ವಾಹನಗಳು ಮತ್ತು ಒಂದೆರಡು ಕಾರುಗಳು ಪಾರ್ಕಿಂಗ್ ಸ್ಥಳದಲ್ಲಿ ಉಂಟಾದ ಆಳವಾದ ಗುಂಡಿಗೆ ಹೋಗುತ್ತಿರುವುದನ್ನು ತೋರಿಸಿದೆ.

ಅನುಮತಿಸಲಾದ ಮಿತಿಗಳನ್ನು ಮೀರಿ ಪಕ್ಕದ ಕಟ್ಟಡದ ನೆಲಮಾಳಿಗೆಗಾಗಿ ಭೂಮಿಯನ್ನು ಅಗೆಯುವುದು ಅಡಿಪಾಯವನ್ನು ದುರ್ಬಲಗೊಳಿಸಿತು ಎನ್ನಲಾಗಿದೆ.

ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆದಾಗ್ಯೂ, ಘಟನೆಯಲ್ಲಿ ಕೆಲವು ವಾಹನಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಈ ಘಟನೆಯಲ್ಲಿ 9 ರಿಂದ 10 ಬೈಕ್ ಗಳು ಮತ್ತು ಒಂದು ಅಥವಾ ಎರಡು ಕಾರುಗಳು ಜಖಂಗೊಂಡಿವೆ ಎಂದು ತಿಳಿಸಿದ ಮೊಹಾಲಿ ಡಿಎಸ್ಪಿ ಹರ್ಸಿಮ್ರನ್ ಸಿಂಗ್, ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ