ಪತ್ನಿ ಅಪ್ಪಿಕೊಂಡ ವೇಳೆ ಗುಂಡು ಹಾರಿಸಿದ ಪತಿ: ಕೊನೆಗೆ ಆಗಿದ್ದೇ ದುರಂತ..! - Mahanayaka

ಪತ್ನಿ ಅಪ್ಪಿಕೊಂಡ ವೇಳೆ ಗುಂಡು ಹಾರಿಸಿದ ಪತಿ: ಕೊನೆಗೆ ಆಗಿದ್ದೇ ದುರಂತ..!

15/06/2023

ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ತಬ್ಬಿಕೊಂಡ ವೇಳೆ ಗುಂಡು ಹಾರಿಸಿದ ಪರಿಣಾಮ ದಂಪತಿ ಸಾವನ್ನಪ್ಪಿದ ಘಟನೆ ನಡೆದಿದೆ.

40 ವರ್ಷದ ಅನೆಕ್ ಪಾಲ್ ಮತ್ತು 38 ವರ್ಷದ ಪತ್ನಿ ಸುಮನ್ ಪಾಲ್, ಸಾವನ್ನಪ್ಪಿದ ದಂಪತಿ.
ಅನೆಕ್ ಪಾಲ್ ತನ್ನ ಹೆಂಡತಿಯ ಬಳಿಗೆ ಹೋಗಿ ಅವಳನ್ನು ತಬ್ಬಿಕೊಂಡಿದ್ದಾನೆ. ನಂತರ ಅವಳ ಬೆನ್ನಿಗೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇದೇ ವೇಳೆ ಗುಂಡು ಅನೆಕ್ ಗೆ ಚುಚ್ಚಿದೆ. ಇದೇ ವೇಳೆ ದಂಪತಿ ಸಾವನ್ನಪ್ಪಿದ್ದಾರೆ.

ಅನೆಕ್ ಪಾಲ್ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ನೇರವಾಗಿ ತನ್ನ ಹೆಂಡತಿಯನ್ನು ತಬಿಕೊಂಡಿದ್ದಾನೆ. ಗುಂಡು ಹಾರಿಸುವಾಗ ಗುಂಡು ಅನೆಕ್ ಪಾಲ್ ಅವರ ಎದೆಗೆ ತಗುಲಿ ಅವರ ಬೆನ್ನಿನಿಂದ ಹಾದುಹೋಗಿತು. ಇಬ್ಬರೂ ಗುಂಡೇಟಿನಿಂದ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕುಳಿಯಲಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ ಮೊರಾದಾಬಾದ್) ಸಂದೀಪ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ. ಇವರಿಗೆ ನಾಲ್ಕು ಮಕ್ಕಳಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆ ನಡೆಯುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ