ಭೂ ವಿವಾದ: ವೃದ್ದನನ್ನು ಕೊಂದ ಕೃತ್ಯವನ್ನು ಫೇಸ್ ಬುಕ್ ನಲ್ಲಿ ಲೈವ್ ತೋರಿಸಿದ ಆರೋಪಿ..!
ವ್ಯಕ್ತಿಯೊಬ್ಬ ಭೂ ವಿವಾದದ ಹಿನ್ನೆಲೆಯಲ್ಲಿ ನೆರೆಹೊರೆಯ ವೃದ್ಧನನ್ನು ಕೊಂದು ಕ್ರೂರ ಕೃತ್ಯವನ್ನು ಫೇಸ್ ಬುಕ್ ನಲ್ಲಿ ಲೈವ್ ಸ್ಟ್ರೀಮ್ ಮಾಡಿದ ಆಘಾತಕಾರಿ ಘಟನೆ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಗಂಡೋಹ್ ಪ್ರದೇಶದಲ್ಲಿ ನಡೆದಿದೆ. ಈ ಘೋರ ಅಪರಾಧ ಎಸಗಿದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ವ್ಯಕ್ತಿಯನ್ನು ದೋಡಾದ ಗಂಡೋಹ್ ತಹಸಿಲ್ ನ ಚೌವಾನ್ರಿ ಗ್ರಾಮದ ನಿವಾಸಿ ಭೈರವ್ ಸಿಂಗ್ ಎಂದು ಗುರುತಿಸಲಾಗಿದೆ. ರಾಮ್ ಕೃಷ್ಣನ್, ಕೊಲೆಯಾದ ವ್ಯಕ್ತಿ.
ಎರಡು ಕುಟುಂಬಗಳ ನಡುವಿನ ಭೂ ವಿವಾದದಲ್ಲಿ ಈ ಘಟನೆ ನಡೆದಿದೆ. ದೋಡಾ ಪೊಲೀಸರು ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ವಿವಾದಿತ ಭೂಮಿಯಿಂದ ಕಲ್ಲು ಹೊರತೆಗೆಯುವ ಬಗ್ಗೆ ಉಭಯ ಕುಟುಂಬಗಳ ಮಧ್ಯೆ ತೀವ್ರ ವಾಗ್ವಾದ ನಡೆದಿದೆ.
ಇದೇ ವೇಳೆ ಈ ಕೃತ್ಯ ನಡೆದಿದೆ. ಘಟನೆ ನಡೆದಾಗ ರಾಮ್ ಕೃಷ್ಣನ್ ತನ್ನ ಮೊಮ್ಮಗಳು ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಇದ್ದರು. ಕ್ರೂರ ಕೃತ್ಯವನ್ನು ನೋಡಿದ ಮಗುವಿನ ಗೋಳಾಟವನ್ನು ಫೇಸ್ಬುಕ್ ನಲ್ಲೇ ಪ್ರಸಾರ ಮಾಡಲಾಗಿತ್ತು. ಅತ್ತ ಮಾವನನ್ನು ಉಳಿಸುವ ಪ್ರಯತ್ನದಲ್ಲಿ ಮಗುವಿನ ತಾಯಿ ಅಂಜು ದೇವಿ ಕೂಡ ಗಾಯಗೊಂಡಿದ್ದರು. ಆಕೆಯನ್ನು ಚಿಕಿತ್ಸೆಗಾಗಿ ದೋಡಾ ಆಸ್ಪತ್ರೆಗೆ ಕಳುಹಿಸಲಾಗಿದೆ.
ಕೊಲೆಯ ನಂತರ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹತ್ತಿರದ ಅರಣ್ಯ ಪ್ರದೇಶದ ಎತ್ತರದ ಶಿಖರಗಳಿಂದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ.
ಗಂಡೋಹ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 302, 307 ಮತ್ತು 342 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw