ಮನೆ ಮಾಲಿಕನ ಮನೆಯಲ್ಲೇ ಚಿನ್ನಾಭರಣ ಕದ್ದ ಕಾರು ಚಾಲಕನ ಬಂಧನ!
ಬೆಂಗಳೂರು: ಕಾರು ಚಾಲಕನಾಗಿ ಕೆಲಸ ಮಾಡಿಕೊಂಡು ಮಾಲೀಕರ ಮನೆಯಲ್ಲಿಯೇ ಚಿನ್ನದ ಆಭರಣ ಹಾಗೂ ಹಣ ಕಳ್ಳತನಮಾಡುತ್ತಿದ್ದ ಆರೋಪಿಯ ಬಂಧಿಸಿ ಸುಮಾರು 4,00,000/-ರೂ ಬೆಲೆ ಬಾಳುವ ಸುಮಾರು 7ಗ್ರಾಂ … ಚಿನ್ನದ ಆಭರಣಗಳು, ಮೋಬೈಲ್ ಪೋನ್ ಮತ್ತು ಕೃತ್ಯಕ್ಕೆ ಉಪಯೋಗಿಸಿದ್ದ ಹೊಂಡಾ ಆಕ್ಟಿವಾ ವಾಹನ ವಶ ಪಡಿಸಿಕೊಳ್ಳಲಾಗಿದೆ.
ರಾಜರಾಜೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪೇಸ್ಟೀಜ್ ಭಾಗಮನೆ ಟೆಂಪಲ್ ಅಪಾರ್ಟ್ ಮೆಂಟ್ನಲ್ಲಿ ವಾಸವಾಗಿದ್ದ ಕಾರ್ತಿಕ್ಕಿರಣ್ ಎಂಬುವರ ಮನೆಯಲ್ಲಿ ಚಿನ್ನದ ಆಭರಣಗಳು ಹಾಗೂ ನಗದು ಹಣ ಕಳವು ಆಗಿದ್ದು, ಕಾರು ಚಾಲಕನ ಮೇಲೆ ಅನುಮಾನವಿರುತ್ತದೆ ಎಂದು ಮಾಲೀಕರು ದೂರು ನೀಡಿರುತ್ತಾರೆ. ಈ ಬಗ್ಗೆ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿ, ದಿನಾಂಕ:-10-06-2023 ರಂದು ಆರೋಪಿಯಾದ ಕಾರು ಚಾಲಕನನ್ನು ದಸ್ತಗಿರಿ ಮಾಡಿ ಆತನಿಂದ ಮಾಲೀಕರಾದ ಕಾರ್ತಿಕ್ ಕಿರಣ್ ರವರ ಮನೆಯಿಂದ ಆರೋಪಿ ಚಾಲಕನು ಚಿನ್ನದ ಆಭರಣಗಳು ಮತ್ತು ಮೊಬೈಲ್ ಪೋನ್ ನ್ನು ಕಳವು ಮಾಡಿದ್ದಾಗಿ ಒಪ್ಪಿಕೊಂಡಿರುತ್ತಾರೆ. ಸದರಿ ಆರೋಪಿಯಿಂದ ಸುಮಾರು 4,00,000/- ರೂ ಬೆಲೆ ಬಾಳುವ 67 ಗ್ರಾಂ ತೂಕದ ಚಿನ್ನದ ಆಭರಣಗಳು, ಒಂದು ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ್ದ ಹೊಂಡಾ ಆಕ್ಟಿವಾ ವಾಹನವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಕಾರ್ಯಚರಣೆಯನ್ನು ಬೆಂಗಳೂರು ನಗರದ ಡಿ.ಸಿ.ಪಿ(ಪಶ್ಚಿಮ) ಲಕ್ಷ್ಮಣ್ ಬನಿಂಬರಗಿ, ಕೆಂಗೇರಿಗೇಟ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಭರತ್.ಎಸ್.ರೆಡ್ಡಿ ಮಾರ್ಗದರ್ಶನದಲ್ಲಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಂ. ಶಿವಣ್ಣ ರವರ ನೇತೃತ್ವದಲ್ಲಿ ಸಿಬ್ಬಂದಿಯವರ ತಂಡ ಕಾರ್ಯಚರಣೆಯನ್ನು ಕೈಗೊಂಡು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw