ಪ್ರಧಾನಿ ಮೋದಿಯನ್ನ ಹೊಗಳೇ ಇಲ್ಲ ಮನಮೋಹನ್ ಸಿಂಗ್: ಫೇಕ್ ಇಮೇಜ್ ನ ಅಸಲಿಯತ್ತು ಬಯಲು - Mahanayaka
6:02 AM Saturday 21 - September 2024

ಪ್ರಧಾನಿ ಮೋದಿಯನ್ನ ಹೊಗಳೇ ಇಲ್ಲ ಮನಮೋಹನ್ ಸಿಂಗ್: ಫೇಕ್ ಇಮೇಜ್ ನ ಅಸಲಿಯತ್ತು ಬಯಲು

19/06/2023

ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಮನಮೋಹನ್ ಸಿಂಗ್ ಹೊಗಳಿದ್ದಾರೆ ಎನ್ನಲಾದ ಫೋಟೋ ವೈರಲ್ ಆಗಿದ್ದು ಈ ಟ್ವೀಟ್ ಫೇಕ್ ಎನ್ನುವುದು ಬಯಲಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಎರಡು ಟ್ವೀಟ್‌ಗಳ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಅದರಲ್ಲಿ ಮೋದಿಯವರಂತೆ ಪ್ರಧಾನಿಯಾಗಿದ್ದಾಗ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ನನಗಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಪ್ರಧಾನಿ ಸಿಂಗ್, ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುತ್ತಿರುವ ಟ್ವೀಟ್ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಬರೆದು ಎರಡೂ ಟ್ವೀಟ್​​ಗಳ ಚಿತ್ರವವನ್ನು ಕೊಲಾಜ್ ಮಾಡಲಾಗಿದೆ.

ಮೊದಲನೆಯ ಟ್ವೀಟ್​​ನಲ್ಲಿ ಏನಿದೆ..? ನಾನೂ ದೇಶಕ್ಕಾಗಿ ಇಂತಹ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಿತ್ತು. ಆದರೆ ಕಾಂಗ್ರೆಸ್ ನನಗೆ ಆ ಸ್ವಾತಂತ್ರ್ಯವನ್ನು ಎಂದಿಗೂ ನೀಡಲಿಲ್ಲ. ನರೇಂದ್ರ ಮೋದಿ ಅವರು ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಅದಕ್ಕಾಗಿಯೇ ದೇಶ ಸುಧಾರಿಸುತ್ತಿದೆ. ಇನ್ನೊಂದು ಟ್ವೀಟ್ ನಲ್ಲಿ ಇಂದು ನಾನು ಇದನ್ನು ಯಾವುದೇ ನಿರ್ಬಂಧಗಳಿಲ್ಲದೆ ಹೇಳುತ್ತಿದ್ದೇನೆ, ಈ ಇಡೀ ಜಗತ್ತಿನಲ್ಲಿ ಮೋದಿಯಂತಹ ನಾಯಕ ಅಥವಾ ಪ್ರಧಾನಿ ಇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.


Provided by

ಫೇಸ್‌ಬುಕ್ ಬಳಕೆದಾರ ಲೋಕೇಶ್ ಕುಮಾರ್ ಆರ್ಯ ಜೂನ್ 6ರಂದು ಹಿಂದಿಯಲ್ಲಿ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ನಾನು ಏನು ಹೇಳಬೇಕಿದೆಯೋ ಮನಮೋಹನ್ ಸಿಂಗ್ ಅವರೇ ಎಲ್ಲವನ್ನೂ ಹೇಳಿದರು. ಕಾಂಗ್ರೆಸಿಗರೇ, ಈಗ ನಿಮ್ಮ ನಿಜ ಸಂಗತಿ ಬಯಲಾಗಿದೆ ಎಂದು ಅವರು ಹೇಳಿದ್ದಾರೆ.

ಸತ್ಯಾಂಶ ಏನು..?

ಟ್ವೀಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ಆಲ್ಟ್ ನ್ಯೂಸ್ ಚಿತ್ರಗಳಲ್ಲಿ ಉಲ್ಲೇಖಿಸಲಾದ ಟ್ವಿಟರ್ ಹ್ಯಾಂಡಲ್‌ ನ್ನು ಪರಿಶೀಲಿಸಿದೆ. ಟ್ವೀಟ್‌ಗಳನ್ನು ಹಂಚಿಕೊಂಡ ಖಾತೆಯ ಬಳಕೆದಾರಹೆಸರು ‘@manmohan_5’ ಎಂದು ಇದ್ದು, ಅಂತಹ ಯಾವುದೇ ಖಾತೆ ಅಸ್ತಿತ್ವದಲ್ಲಿಲ್ಲ. ಸಂಬಂಧಿತ ಕೀವರ್ಡ್ ಹುಡುಕಾಟ ನಡೆಸಿದಾಗ 2021ರ ಕೆಲವು ವರದಿಗಳು ಸಿಕ್ಕಿದವು. ಅವುಗಳಲ್ಲಿ ಕೆಲವು ವರದಿಗಳು 2020 ರಿಂದ ಕಾಂಗ್ರೆಸ್ ನಾಯಕ ಸರಳ್ ಪಟೇಲ್ ಅವರ ಟ್ವೀಟ್ ಸಹ ಹೊಂದಿವೆ. ಅವರು ಟ್ವೀಟ್‌ನಲ್ಲಿ, ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಎಂದು ಹೇಳಿಕೊಳ್ಳುವ ಖಾತೆಗಳು ನಕಲಿ ಎಂದು ಉಲ್ಲೇಖಿಸಿದ್ದಾರೆ. ಇದು ನಾಯಕರ ನಿಜವಾದ ಟ್ವಿಟರ್ ಹ್ಯಾಂಡಲ್‌ಗಳಾಗಿದ್ದರೆ, ಅವರು ಪರಿಶೀಲಿಸಿದ ಬ್ಯಾಡ್ಜ್ ಅನ್ನು ಹೊಂದಿರುತ್ತಾರೆ. ಟೈಮ್ಸ್ ಆಫ್ ಇಂಡಿಯಾ ಕೂಡ ಈ ಬಗ್ಗೆ ವರದಿ ಮಾಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ