ಐಎಎಫ್ ಗೆ ಫ್ಲೈಯಿಂಗ್ ಆಫೀಸರ್ ಆಗಿ ಆಯ್ಕೆಯಾದ ಕಾಶ್ಮೀರದ ಬಿಎಸ್ಎಫ್ ಯೋಧನ ಪುತ್ರಿ
ಗಡಿ ಭದ್ರತಾ ಪಡೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿರುವ ತನ್ನ ತಂದೆಯಿಂದ ಸ್ಫೂರ್ತಿ ಪಡೆದ ಜಮ್ಮು ಮತ್ತು ಕಾಶ್ಮೀರದ ಗುಡ್ಡಗಾಡು ಜಿಲ್ಲೆಯ 23 ವರ್ಷದ ಆಕೃತಿ ಶರ್ಮಾ ಮುಂದಿನ ತಿಂಗಳು ಭಾರತೀಯ ವಾಯುಪಡೆಗೆ ಫ್ಲೈಯಿಂಗ್ ಆಫೀಸರ್ ಆಗಿ ಸೇರಲು ಸಜ್ಜಾಗಿದ್ದಾರೆ.
ಹೌದು. ಶರ್ಮಾ ಅವರು ಮಗನಿ ಗ್ರಾಮದವರು. ಏರ್ ಫೋರ್ಸ್ ಕಾಮನ್ ಅಡ್ಮಿಷನ್ ಟೆಸ್ಟ್ (ಎಎಫ್ ಎಸ್ ಎಟಿ) ಪರೀಕ್ಷೆಯಲ್ಲಿ ತೇರ್ಗಡೆಯಾದ ಈಕೆ ತನ್ನ ಯಶಸ್ಸನ್ನು ತನ್ನ ಹೆತ್ತವರು ಮತ್ತು ಎನ್ ಸಿಸಿಗೆ ಅರ್ಪಿಸಿದ್ದಾರೆ.
‘ಶೀಘ್ರದಲ್ಲೇ ನಾನು ಐಎಎಫ್ ಹೈದರಾಬಾದ್ ಅಕಾಡೆಮಿಯಲ್ಲಿ ಅಂಡರ್ ಟ್ರೈನಿ ಫ್ಲೈಯಿಂಗ್ ಆಫೀಸರ್ ಆಗಿ ಸೇರಲಿದ್ದೇನೆ. ನನ್ನ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ನಾನು ಐಎಎಫ್‌ನಲ್ಲಿ ಫ್ಲೈಯಿಂಗ್ ಆಫೀಸರ್ ಆಗಿ ನೇಮಕಗೊಳ್ಳುತ್ತೇನೆ’ ಎಂದು ಶರ್ಮಾ ತಮ್ಮ ನಿವಾಸದಲ್ಲಿ ಪಿಟಿಐಗೆ ತಿಳಿಸಿದ್ದಾರೆ. ಶರ್ಮಾ ತನ್ನ ಶಾಲಾ ಶಿಕ್ಷಣವನ್ನು ಕೇಂದ್ರೀಯ ವಿದ್ಯಾಲಯದಲ್ಲಿ ಮುಗಿಸಿದರು. ಉಧಮ್ ಪುರದ ಸರ್ಕಾರಿ ಮಹಿಳಾ ಕಾಲೇಜಿನಿಂದ ಪದವಿ ಪಡೆದರು.
ಕಾಲೇಜಿನಲ್ಲಿದ್ದಾಗ, ನಾನು ಎನ್ ಸಿಸಿಯಲ್ಲಿದ್ದೆ. ಇಲ್ಲಿ ಹಲವಾರು ಶಿಬಿರಗಳಲ್ಲಿ ಭಾಗವಹಿಸಿದ್ದೆ. ಇದು ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿತು’ ಎಂದು ಅವರು ಹೇಳಿದ್ದಾರೆ. ಎನ್ ಸಿಸಿಯ ಭಾಗವಾಗಿ ಅವರು ಗಣರಾಜ್ಯೋತ್ಸವ ಪರೇಡ್ ನಲ್ಲಿ ಕೂಡಾ ಭಾಗವಹಿಸಿದ್ದರು. ಜೊತೆಗೆ ಯುವ ವಿನಿಮಯ ಕಾರ್ಯಕ್ರಮದಡಿಯಲ್ಲಿ ವಿಯೆಟ್ನಾಂನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. ಮುಂದುವರಿದು ಮಾತನಾಡಿದ ಅವರು, ‘ಎಲ್ಲಾ ಕ್ರೆಡಿಟ್ ನನ್ನ ಪೋಷಕರು ಮತ್ತು ಸ್ನೇಹಿತರಿಗೆ ಹೋಗುತ್ತದೆ. ನನ್ನ ಪೋಷಕರು ಯಾವಾಗಲೂ ನನ್ನೊಂದಿಗೆ ಬೆಂಬಲವಾಗಿ ನಿಂತರು. ಅಲ್ಲದೇ ನನಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡಿದರು. ನನ್ನ ತಂದೆ ಬಿಎಸ್ಎಫ್ ನಲ್ಲಿದ್ದು ಪ್ರಸ್ತುತ ಅಸ್ಸಾಂನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಯಾವಾಗಲೂ ನನ್ನನ್ನು ಸಾಧನೆಯ ಹಾದಿಯಲ್ಲಿ ಗಮನ ಹರಿಸಲು ನನ್ನನ್ನು ಪ್ರೇರೇಪಿಸಿದರು’
ಎಂದಿದ್ದಾರೆ.
ತಾನು ನೇವಿ ಸರ್ವಿಸ್ ಸೆಲೆಕ್ಷನ್ ಬೋರ್ಡ್ ಸಂದರ್ಶನದಲ್ಲಿ ಉತ್ತೀರ್ಣಳಾಗಿದ್ದೇನೆ ಆದರೆ ಐಎಎಫ್ ಗೆ ಸೇರಲು ನಿರ್ಧರಿಸಿದ್ದೇನೆ ಎಂದು ಶರ್ಮಾ ಹೇಳಿದರು.
ಉಧಮ್ ಪುರದ ಹಲವಾರು ಸ್ಥಳಗಳು ಅಭಿವೃದ್ಧಿ ಹೊಂದಿಲ್ಲ. ಮಕ್ಕಳಿಗೆ ಸಾಕಷ್ಟು ಸೌಲಭ್ಯಗಳು ಸಿಗುತ್ತಿಲ್ಲ ಎಂದು ಒತ್ತಿಹೇಳಿದ ಶರ್ಮಾ, ಯುವಕರು ಹಿಂತಿರುಗಿ ನೋಡದೆ ತಮ್ಮ ಗುರಿಗಳನ್ನು ಸಾಧಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw