ದಿಲ್ಲಿಯಲ್ಲಿ ಖಾಕಿ ಕಾರ್ಯಾಚರಣೆ: 776 ಆರೋಪಿಗಳು ಅಂದರ್ - Mahanayaka
7:07 PM Friday 20 - September 2024

ದಿಲ್ಲಿಯಲ್ಲಿ ಖಾಕಿ ಕಾರ್ಯಾಚರಣೆ: 776 ಆರೋಪಿಗಳು ಅಂದರ್

21/06/2023

ಈ ವರ್ಷದ ಜನವರಿಯಿಂದ ಜೂನ್ 19 ರವರೆಗೆ ದೆಹಲಿ ಪೊಲೀಸರ ಅಪರಾಧ ವಿಭಾಗವು ರಾಷ್ಟ್ರ ರಾಜಧಾನಿಯಾದ್ಯಂತ ದಾಖಲಾದ 615 ಎನ್ ಡಿಪಿಎಸ್ ಪ್ರಕರಣಗಳಲ್ಲಿ 776 ಆರೋಪಿಗಳನ್ನು ಬಂಧಿಸಿದೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, ಜೂನ್ 19 ರವರೆಗೆ ನಡೆದ ದಾಳಿಯಲ್ಲಿ ಸುಮಾರು 36 ಕೆಜಿ ಹೆರಾಯಿನ್ , 15 ಕೆಜಿ ಕೊಕೇನ್, 1800 ಕೆಜಿ ಗಾಂಜಾ, 233 ಕೆಜಿ ಅಫೀಮು, 10.5 ಕೆಜಿ ಚರಸ್ ಮತ್ತು 71 ಕೆಜಿ ಗಸಗಸೆ ತಲೆ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ವಿಶೇಷ ಪೊಲೀಸ್ ಆಯುಕ್ತ (ಅಪರಾಧ) ರವೀಂದ್ರ ಸಿಂಗ್ ಯಾದವ್ ಮಾತನಾಡಿ, ಮಾದಕವಸ್ತುಗಳ ಕಳ್ಳಸಾಗಣೆ ಮತ್ತು ವಿತರಣೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಗುರುತಿಸಿ ಬಂಧಿಸಲು ದೆಹಲಿಯಾದ್ಯಂತ ಜಂಟಿ ಮತ್ತು ವ್ಯಾಪಕ ಕಾರ್ಯಾಚರಣೆ (ಆಪರೇಷನ್ ಕವಾಚ್) ಪ್ರಾರಂಭಿಸಲಾಗಿದೆ ಎಂದು ಹೇಳಿದರು.


Provided by

ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಕ್ಷೇತ್ರ ಅಧಿಕಾರಿಗಳ ಸಹಕಾರದಲ್ಲಿ ಅಪರಾಧಿಗಳ ಮೇಲೆ ಸಂಘಟಿತ ದಾಳಿಗಾಗಿ ಪ್ಲ್ಯಾನ್ ರೂಪಿಸಲಾಗಿದೆ. ಕಾರ್ಯಾಚರಣೆ ನಡೆಸಲು ಎಎನ್ ಟಿಎಫ್, ಅಪರಾಧ ವಿಭಾಗ ಮತ್ತು ಎಲ್ಲಾ ಜಿಲ್ಲೆಗಳ ಎಲ್ಲಾ ಪೊಲೀಸ್ ಠಾಣೆಗಳನ್ನು ಒಳಗೊಂಡ ಒಟ್ಟು 150 ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಏಕಕಾಲದಲ್ಲಿ ದಾಳಿ ನಡೆಸಲು 100 ಕ್ಕೂ ಹೆಚ್ಚು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ