ಜಾರಕಿಹೊಳಿಯವ್ರ ವೆಬ್ ಸೈಟ್ ಹ್ಯಾಕ್ ಹೇಳಿಕೆ: ಮೈಂಡ್ ಹ್ಯಾಕ್ ಮಾಡಿದ್ದಾರೆ ಎಂದ ಸಿ.ಟಿ.ರವಿ!
ಜಾರಕಿಹೊಳಿಯವ್ರ ವೆಬ್ ಸೈಟ್ ಹ್ಯಾಕ್ ವಿಚಾರದ ಹೇಳಿಕೆ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಂಗಳೂರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಸದ್ಯ ಕಾಂಗ್ರೆಸ್ ನಾಯಕರ ಹೇಳಿಕೆ ಮುಂದೆ ಬೇರೆ ರೀತಿ ತಿರುಗಬಹುದು. ನಮ್ಮ ಮೈಂಡ್ ಹ್ಯಾಕ್ ಮಾಡಿದ್ದಾರೆ. ಹೀಗಾಗಿ ಹುಚ್ಚುಚ್ಚು ಹೇಳಿಕೆ ಕೊಡ್ತಿದೇವೆ ಎನ್ನಬಹುದು. ಸದ್ಯ ಇವರದ್ದು ಹುಚ್ಚುಚ್ಚು ಹೇಳಿಕೆಗಳು, ಇದರಲ್ಲಿ ವ್ಯತ್ಯಾಸ ಇಲ್ಲ ಎಂದು ಕಿಡಿಕಾರಿದ್ದಾರೆ.
ಮೋದಿಯವರು ನೂರಾರು ಯೋಜನೆ ಕೊಟ್ಟಿದ್ದಾರೆ, ಚುನಾವಣೆಗೆ ಅಂತ ಕೊಡಲಿಲ್ಲ. ಗೆದ್ದ ಮೇಲೆ ಜನರ ಅವಶ್ಯಕತೆ ಗುರುತಿಸಿ ಮೋದಿ ಕೊಟ್ಟರು. ಇವರು ಚುನಾವಣೆಗೆ ಮೊದಲೇ ಡಂಗುರ ಹೊಡೆದರು. ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗಲೂ ಕೇಂದ್ರದಲ್ಲಿ ಬಿಜೆಪಿ ಇತ್ತು. ಆದ್ರೆ ಆಗ ಸಿದ್ದರಾಮಯ್ಯ ಮೋದಿ ಅಕ್ಕಿ ಕೊಟ್ಟರು ಅಂತ ಹೇಳಿದ್ರಾ? ಆಗಲೂ ನಾನು ಕೊಟ್ಟೆ ಅಂತಾನೇ ಸಿದ್ದರಾಮಯ್ಯ ಹೇಳಿದ್ದಾರೆ ಎಂದರು.
ಯಾವುದೇ ರಾಜ್ಯಗಳಿಗೆ ಕೇಂದ್ರ ಅಕ್ಕಿ ಕೊಟ್ಟಿಲ್ಲ ಅಂತ ಸಚಿವರು ಸ್ಪಷ್ಟಪಡಿಸಿದ್ದಾರೆ. ಗರೀಬಿ ಕಲ್ಯಾಣ್ ಯೋಜನೆಗೆ ಬಳಸಿ ಉಳಿದ್ರೆ ಮಾರುಕಟ್ಟೆಗೆ ಬಿಡುಗಡೆ ಮಾಡ್ತೀವಿ ಅಂದಿದ್ದಾರೆ. ಆಮ್ ಅದ್ಮೀ ಆರಂಭಿಸ್ತು, ಕಾಂಗ್ರೆಸ್ ಈ ಫ್ರೀ ಸ್ಕೀಂ ಜೋಡಿಸಿಕೊಳ್ತು. ನಮ್ಮ ಸರ್ಕಾರ ಆತ್ಮನಿರ್ಭರ ಯೋಜನೆ ಮೂಲಕ ಸ್ವಾವಲಂಬಿ ಬದುಕಿಗೆ ನೆರವು ಕೊಡ್ತಿದೆ. ನಮ್ಮ ಓಟ್ ಕಡಿಮೆ ಆಗಿ ನಾವು ಅಧಿಕಾರ ಕಳೆದುಕೊಂಡಿಲ್ಲ. 2013ರಲ್ಲಿ ಕಾಂಗ್ರೆಸ್ ಗೆದ್ದಿತ್ತು, ಆದರೆ ಇದೇ ಜನ ಲೋಕಸಭೆಗೆ ಬಿಜೆಪಿ ಗೆಲ್ಲಿಸಿದ್ರು. ಆಗಲೂ ಸಿದ್ದರಾಮಯ್ಯ, ಕುಮಾರಸ್ವಾಮಿ ನಾವು ಗೆಲ್ಲಲ್ಪ ಅಂದಿದ್ದರು. ಆದರೆ ಜನ ಲೋಕಸಭೆಗೆ ಬಿಜೆಪಿಗೆ ಓಟ್ ಹಾಕಿ ಗೆಲ್ಲಿಸಿದ್ರು. ದೇಶ ಗೆಲ್ಲಬೇಕು ಅನ್ನೋರು ಮೋದಿಯವರನ್ನ ಗೆಲ್ಲಿಸ್ತಾರೆ. ದೇಶ ಹಾಳಾಗಬೇಕು ಅನ್ನೋರು ತುಕಡೆ ಗ್ಯಾಂಗ್ ಗಳು ದೇಶ ಸೋಲಬೇಕು ಅಂತಾರೆ. ಹೊಂದಾಣಿಕೆ ರಾಜಕೀಯದ ಬಗ್ಗೆ ನನ್ನದು ನೋ ಕಾಮೆಂಟ್ಸ್. ನಾವು ರಾಜ್ಯದ ಸೋಲು ಒಪ್ಪಿಕೊಳ್ತೇವೆ, ಆದರೆ ಹೀನಾಯ ಸೋಲು ಅಲ್ಲ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw