ಅತಿ ಹೆಚ್ಚು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ವ್ಯಕ್ತಿ ಪಡೆದ ಚಲನ್ ಎಷ್ಟು ಗೊತ್ತಾ..? - Mahanayaka

ಅತಿ ಹೆಚ್ಚು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ವ್ಯಕ್ತಿ ಪಡೆದ ಚಲನ್ ಎಷ್ಟು ಗೊತ್ತಾ..?

22/06/2023

ಈ ವ್ಯಕ್ತಿ ಟ್ರಾಫಿಕ್ ರೂಲ್ಸ್ ಬ್ರೇಕ್‌ ಮಾಡಿದ ಕುಖ್ಯಾತಿಗೆ ಒಳಗಾಗಿದ್ದಾರೆ. ಅದು ಎಷ್ಟು ಸಲ ಗೊತ್ತಾ..? ಅಬ್ಬಬ್ಬಾ ಎನ್ನಬೇಕು ನೀವು. ಹೌದು. ಗೋರಖ್‌ ಪುರದಲ್ಲಿ ವ್ಯಕ್ತಿಯೊಬ್ಬರು ಅತಿ ಹೆಚ್ಚು ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದಾರೆ. ಅದಕ್ಕಾಗಿ 70 ಬಾರಿ ಚಲನ್ ಪಡೆದಿದ್ದಾರೆ. ಹೀಗಾಗಿ ಆತ 70,500 ರೂಪಾಯಿ ದಂಡ ಕಟ್ಟಬೇಕಿದೆ. ಈ ವ್ಯಕ್ತಿ ಈಗಾಗಲೇ ಈ ವರ್ಷ 33 ಚಲನ್‌ ಗಳನ್ನು ಪಡೆದಿದ್ದಾರೆ. ಕಳೆದ ವರ್ಷ 37 ಚಲನ್​ಗಳನ್ನು ಪಡೆದಿದ್ದರು.

ಒಂಬತ್ತು ಮಂದಿಯ ಹೆಸರುಗಳನ್ನು ಡೀಫಾಲ್ಟರ್‌ಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಅವರಲ್ಲಿ ಕೆಲವರಿಗೆ 50 ಕ್ಕೂ ಹೆಚ್ಚು ಬಾರಿ ಚಲನ್ ನೀಡಲಾಗಿದೆ. ಗೋರಖ್‌ಪುರ ಪೊಲೀಸ್ ಆಡಳಿತವು ಭದ್ರತಾ ಉದ್ದೇಶಗಳಿಗಾಗಿ ಎಲ್ಲೆಡೆ ಟ್ರಾಫಿಕ್ ಕ್ಯಾಮೆರಾಗಳನ್ನು ಆಳವಡಿಸಿದೆ.

ಈ ಕ್ಯಾಮೆರಾಗಳು ಟ್ರಾಫಿಕ್ ಸಿಗ್ನಲ್ ನಿಯಮಗಳನ್ನು ಉಲ್ಲಂಘಿಸುವ ವಾಹನಗಳ ನಂಬರ್ ಪ್ಲೇಟ್‌ಗಳನ್ನು ಸೆರೆಹಿಡಿಯುತ್ತವೆ, ಇದರಿಂದಾಗಿ ಸ್ವಯಂಚಾಲಿತ ಟಿಕೆಟ್ ಉತ್ಪಾದನೆಯಾಗುತ್ತದೆ.

ಈ ವ್ಯಕ್ತಿಗೆ ನೋಟಿಸ್ ಕಳುಹಿಸಲು ಸಿದ್ಧತೆ ನಡೆಸಲಾಗುತ್ತಿದೆ. ಇಲ್ಲದಿದ್ದರೆ ಅವರ ವಾಹನಗಳನ್ನು ವಶಪಡಿಸಿಕೊಂಡು ದಂಡ ಪಾವತಿಸಿದ ನಂತರವೇ ಬಿಡುಗಡೆ ಮಾಡಲಾಗುವುದು ಎಂದು ಟ್ರಾಫಿಕ್ ಪೊಲೀಸರು ಹೇಳಿಕೆ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ