2024ರಲ್ಲಿ ನಾಸಾ ಇಸ್ರೋ ಜಂಟಿ ಅಂತರಿಕ್ಷಯಾನ: ಮಹತ್ವದ ಒಪ್ಪಂದಕ್ಕೆ ಸಹಿ - Mahanayaka

2024ರಲ್ಲಿ ನಾಸಾ ಇಸ್ರೋ ಜಂಟಿ ಅಂತರಿಕ್ಷಯಾನ: ಮಹತ್ವದ ಒಪ್ಪಂದಕ್ಕೆ ಸಹಿ

23/06/2023

ಬಾಹ್ಯಾಕಾಶ ಅನ್ವೇಷಣೆಯ ಹಿನ್ನೆಲೆಯಲ್ಲಿ ಮಹತ್ವದ ಆರ್ಟೆಮೆಸ್‌ ಒಪ್ಪಂದಕ್ಕೆ ಅಮೆರಿಕದಲ್ಲಿ ಭಾರತ ಸಹಿ ಹಾಕಿದೆ. ಮುಂದಿನ ವರ್ಷದ ಇಂಟರ್‌ ನ್ಯಾಷನಲ್‌ ಸ್ಪೇಸ್‌ ಸ್ಟೇಷನ್‌ ಜಂಟಿ ಕಾರ್ಯಾಚರಣೆಗೆ ಅಮೆರಿಕದ ನಾಸಾ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಜೊತೆಗೂಡಿ ಕೆಲಸ ಮಾಡಲಿವೆ. 2024ರಲ್ಲಿ ಮಾನವ ಸಹಿತ ಜಂಟಿ ಅಂತರಿಕ್ಷಯಾನ ಮಾಡಲಿವೆ. ಇತರ ಅಂತರಿಕ್ಷ ಕುರಿತ ವಿಷಯಗಳ ಬಗ್ಗೆಯೂ ಅಧ್ಯಯನ ನಡೆಸಲಿದೆ. ಈ ಮೂಲಕ ಅಮೆರಿಕ ನೇತೃತ್ವದಲ್ಲಿ ಸೃಷ್ಟಿಯಾಗಿದ್ದ ವೇದಿಕೆ 26ನೇ ದೇಶವಾಗಿ ಭಾರತ ಸೇರ್ಪಡೆಯಾಗಿದೆ.
ಅಧ್ಯಕ್ಷ ಜೋ ಬೈಡನ್ ಅವರ ಆಹ್ವಾನದ ಮೇರೆಗೆ ಯುಎಸ್‌ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಈ ವೇಳೆ ಆರ್ಟೆಮೆಸ್‌ ಯೋಜನೆಯ ಭಾಗವಾಗಿ 2024ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಜಂಟಿ ಪ್ರಯಾಣ ಕೈಗೊಳ್ಳಲು ಉಭಯ ದೇಶಗಳು ಸಮ್ಮತಿಸಿವೆ.
1967ರ ಬಾಹ್ಯಾಕಾಶ ಒಪ್ಪಂದದ ಆಧಾರದಲ್ಲಿ ಆರ್ಟೆಮಿಸ್‌ ಒಪ್ಪಂದಗಳು ನಾಗರಿಕ ಬಾಹ್ಯಾಕಾಶ ಪರಿಶೋಧನೆ ಮತ್ತು ಬಳಕೆಗೆ ಮಾರ್ದರ್ಶನ ನೀಡಲು ವಿನ್ಯಾಸಗೊಳಿಸಲಾದ ಒಂದು ಕಾರ್ಯಾಚರಣೆಯಾಗಿದೆ. 2025ರ ವೇಳೆಗೆ ಮಾನವನನ್ನ ಚಂದ್ರನತ್ತ ಕಳುಹಿಸಲು ಪ್ರಯತ್ನ ನಡೆಸಿದೆ. ಜೊತೆಗೆ ಮಂಗಳಯಾನ ಮತ್ತು ಅದರಾಚೆಗೆ ಬಾಹ್ಯಾಕಾಶ ಪರಿಶೋಧನೆ ವಿಸ್ತರಿಸುವ ಅಂತಿಮ ಗುರಿ ಹೊಂದಿದೆ.

 

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ