ಬಂಡೀಪುರ ಕಾಡಲ್ಲಿ ಮೂರು ಚಿರತೆ ಸಾವು - Mahanayaka
1:49 PM Saturday 21 - September 2024

ಬಂಡೀಪುರ ಕಾಡಲ್ಲಿ ಮೂರು ಚಿರತೆ ಸಾವು

chirate
23/06/2023

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದೇ ದಿನ 3 ಚಿರತೆ ಶವಗಳು ಪತ್ತೆಯಾಗಿತುವ ಆತಂಕಕಾರಿ ಘಟನೆ ಇಂದು ನಡೆದಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ಅರಣ್ಯ ವಲಯದ ಕಣಿಯನಪುರ ಗ್ರಾಮದ ಸಮೀಪ 1 ಹಾಗೂ ಜಿ.ಎಸ್.ಬೆಟ್ಟ ವಲಯ ವ್ಯಾಪ್ತಿಯ ಮಂಗಲ ಗ್ರಾಮದಲ್ಲಿ ಮತ್ತೊಂದು ಚಿರತೆ ಶವ ಪತ್ತೆಯಾಗಿದ್ದು ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.

ಕಣಿಯನಪುರ, ಮಂ ಗ್ರಾಮಕ್ಕೆ ಅರಣ್ಯಾಧಿಕಾರಿಗಳು ಭೇಟಿ ಕೊಟ್ಟು ಪರಿಶೀಲಿನೆ ನಡೆಸುತ್ತಿದ್ದಾರೆ. ಕಣಿಯನಪುರದಲ್ಲಿ 5 ವರ್ಷದ ಗಂಡು‌ ಚಿರತೆ, ಮಂಗಲ ಗ್ರಾಮದಲ್ಲಿ 2.5 ವರ್ಷದ ಹೆಣ್ಣು ಚಿರತೆ ಸತ್ತಿವೆ.


Provided by

ವಿಷಪೂರಿತ ಮಾಂಸ ತಿಂದು ಮತ್ತೊಂದು ಚಿರತೆ ಸಾವು:

ಗುಂಡ್ಲುಪೇಟೆ ಬಫರ್ ವಲಯದ ಕೂತನೂರು ಗ್ರಾಮದ ಜಮೀನಿನಲ್ಲಿ ವಿಷಪೂರಿತ ಮಾಂಸ ತಿಂದು 3 ವರ್ಷದ ಚಿರತೆಯೊಂದು ಮೃತಪಟ್ಟಿದೆ. ಜಿ.ಆರ್.ಗೋವಿಂದರಾಜ ಎಂಬವರ ಜಮೀನಿನಲ್ಲಿ ಈ ಘಟನೆ ನಡೆದಿದ್ದು ಸಾಕು ನಾಯಿಯನ್ನು ಚಿರತೆ ಬೇಟೆಯಾಡಿ ಹೋಗಿತ್ತು. ಉಳಿದ ಕಳೇಬರಕ್ಕೆ ಜಮೀನಿನ ಕಾವಲುಗಾರ ಸೋಮಶೇಖರ್ ಕೀಟನಾಶಕ ಸಿಂಪಡಿಸಿ ಇರಿಸಿದ್ದನು.

ತನ್ನ ಉಳಿದ ಬೇಟೆ ತಿನ್ನಲು ಬಂದ ಚಿರತೆ ವಿಷಪೂರಿತ ಮಾಂಸವನ್ನು ತಿಂದು ಅಸುನೀಗಿದೆ. ಸದ್ಯ, ಮೃತ ಚಿರತೆ 3 ವರ್ಷದ ಹೆಣ್ಣು ಚಿರತೆ ಎಂದು ಬಂಡೀಪುರ‌ ಸಿಎಫ್ಒ ರಮೇಶ್ ಕುಮಾರ್ ತಿಳಿಸಿದ್ದಾರೆ‌.

ವಿಷ ಹಾಕಿದ್ದ ಕಾವಲುಗಾರ ಸೋಮಶೇಖರ್ ನನ್ನು ಅರಣ್ಯಾಧಿಕಾರಿಗಳು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಣಿಯನಪುರ ಹಾಗೂ ಮಂಗಲ ಗ್ರಾಮದ ಚಿರತೆ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ