ಈ ಸಮಸ್ಯೆಗಳಿರುವವರು ಲಸಿಕೆ ಸ್ವೀಕರಿಸಬೇಡಿ | ಸೇರಮ್ ಇನ್ ಸ್ಟಿಟ್ಯೂಟ್ - Mahanayaka
2:05 PM Thursday 12 - December 2024

ಈ ಸಮಸ್ಯೆಗಳಿರುವವರು ಲಸಿಕೆ ಸ್ವೀಕರಿಸಬೇಡಿ | ಸೇರಮ್ ಇನ್ ಸ್ಟಿಟ್ಯೂಟ್

19/01/2021

ನವದೆಹಲಿ: ಕೋವಿಶೀಲ್ಡ್ ಅಡ್ಡಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿರುವ ಭಾರತ ಸೇರಮ್ ಇನ್ ಸ್ಟಿಟ್ಯೂಟ್, ಅಲರ್ಜಿ ಸಮಸ್ಯೆಗಳನ್ನು ಹೊಂದಿರುವ ಯಾವುದೇ ವ್ಯಕ್ತಿ ಕೋವಿಶೀಲ್ಡ್ ಲಸಿಕೆಗಳನ್ನು ಸ್ವೀಕರಿಸಬೇಡಿ ಎಂದು ಸೂಚನೆ ನೀಡಿದೆ.

ಕೋವಿಶೀಲ್ಡ್​ ಲಸಿಕೆಗೆ ಎಲ್​ – ಹಿಸ್ಟಿಡೈನ್​, ಎಲ್​ – ಹಿಸ್ಟಿಡೈನ್​ ಹೈಡ್ರೋಕ್ಲೋರೈಡ್​​ ಮೊನೋಹೈಡ್ರೇಟ್​, ಮ್ಯಾಗ್ನೀಷಿಯಂ ಕ್ಲೋರೈಡ್​​​ ಹೆಕ್ಸಾಹೈಡ್ರೇಟ್​​, ಪೋಲಿಸೋರ್ಬೆಟ್​, ಎಥನಾಲ್​, ಸುಕ್ರೋಸ್​, ಸೋಡಿಯಂ ಕ್ಲೋರೈಡ್​, ಡೈಸೋಡಿಯಂ ಎಡಿಟೇಟ್​ ಡಿಹೈಡ್ರೇಟ್​ ಹಾಗೂ ಇಂಜೆಕ್ಷನ್​ ವಾಟರ್​ ಬಳಕೆ ಮಾಡಿದ್ದೇವೆ ಎಂದು ಸೇರಮ್​ ಮಾಹಿತಿ ನೀಡಿದೆ.

ಗರ್ಭಿಣಿಯರು ಹಾಗೂ ಗರ್ಭಿಣಿಯಾಗುವ ತಯಾರಿಯಲ್ಲಿರುವವರು ಹಾಗೂ ಬಾಣಂತಿಯರು, ಜ್ವರ ಲಕ್ಷಣ ಇರುವವರು ಈ ಲಸಿಕೆಯನ್ನು ಪಡೆಯಬೇಡಿ. ಈಗಾಗಲೇ ಬೇರೆ ಲಸಿಕೆಯ ಡೋಸ್ ಪಡೆದಿದ್ದರೆ ಅದರ ಬಗ್ಗೆಯೂ ಮಾಹಿತಿ ನೀಡುವಂತೆ  ಹೇಳಿದೆ.

ಇತ್ತೀಚಿನ ಸುದ್ದಿ