ರಷ್ಯಾ ಉದ್ವಿಗ್ನ: ವ್ಯಾಗ್ನರ್ ಮಿಲಿಟರಿ ಬೆಂಗಾವಲು ಪಡೆಯ ಮೇಲೆ ರಷ್ಯಾ ಸೇನೆಯಿಂದ ಗುಂಡಿನ ದಾಳಿ
ರಷ್ಯಾದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. ವೊರೊನೆಜ್ ನಗರದ ಹೊರಗಿನ ಹೆದ್ದಾರಿಯಲ್ಲಿ ವ್ಯಾಗ್ನರ್ ಮಿಲಿಟರಿ ಬೆಂಗಾವಲು ಪಡೆಯ ಮೇಲೆ ರಷ್ಯಾ ಸೇನಾ ಹೆಲಿಕಾಪ್ಟರ್‌ಗಳು ಗುಂಡು ಹಾರಿಸಿದ ಘಟನೆ ರೋಸ್ಟೊವ್‌ನಿಂದ ಮಾಸ್ಕೋಗೆ ನಡುವಿನ 1,100-ಕಿಮೀ ಹೆದ್ದಾರಿಯಲ್ಲಿ ನಡೆದಿದೆ.
ತೈಲ ಡಿಪೋದಲ್ಲಿ ಉರಿಯುತ್ತಿರುವ ಇಂಧನ ಟ್ಯಾಂಕನ್ನು ನಂದಿಸಲು ತುರ್ತು ಸೇವೆಗಳು ಪ್ರಯತ್ನಿಸುತ್ತಿವೆ ಎಂದು ರಷ್ಯಾದ ವೊರೊನೆಜ್ ಪ್ರದೇಶದ ಗವರ್ನರ್ ಹೇಳಿದ ಸ್ವಲ್ಪ ಸಮಯದ ನಂತರ ಈ ಘಟನೆ ನಡೆದಿದೆ. ಪ್ರಸ್ತುತ ಸ್ಥಳದಲ್ಲಿ 100ಕ್ಕೂ ಹೆಚ್ಚು ಅಗ್ನಿಶಾಮಕ ದಳಗಳು ಮತ್ತು 30 ಯುನಿಟ್ ಉಪಕರಣಗಳು ಕಾರ್ಯನಿರ್ವಹಿಸುತ್ತಿವೆ ಎಂದು ರಾಜ್ಯಪಾಲ ಅಲೆಕ್ಸಾಂಡರ್ ಗುಸೆವ್ ಟೆಲಿಗ್ರಾಮ್‌ನಲ್ಲಿ ತಿಳಿಸಿದ್ದಾರೆ.
ಮಾಸ್ಕೋದಿಂದ ಸುಮಾರು 500 ಕಿಮೀ ದಕ್ಷಿಣದಲ್ಲಿರುವ ವೊರೊನೆಜ್ ನಗರದಲ್ಲಿನ ಮಿಲಿಟರಿ ಸೌಲಭ್ಯಗಳನ್ನು ವ್ಯಾಗ್ನರ್ ಹೋರಾಟಗಾರರು ವಶಪಡಿಸಿಕೊಂಡಿರುವುದಾಗಿ ಹೇಳಿದ್ದಾರೆ. ಆದರೆ ಇದನ್ನು ದೃಢೀಕರಿಸಲಾಗಿಲ್ಲ. ರಷ್ಯಾದ ಸಂಪೂರ್ಣ ಆಕ್ರಮಣ ಪಡೆಗೆ ವ್ಯವಸ್ಥಾಪನಾ ಕೇಂದ್ರವಾಗಿ ಕಾರ್ಯನಿರ್ವಹಿಸುವ ರೋಸ್ಟೊವ್‌ನಲ್ಲಿ, ಶಸ್ತ್ರಸಜ್ಜಿತ ವಾಹನಗಳು ಮತ್ತು ಯುದ್ಧ ಟ್ಯಾಂಕ್‌ಗಳಲ್ಲಿ ವ್ಯಾಗ್ನರ್ ಹೋರಾಟಗಾರರು ಇರುವುದನ್ನು ಅಲ್ಲಿನ ನಿವಾಸಿಗಳು ಮೊಬೈಲ್ ಫೋನ್‌ಗಳಲ್ಲಿ ಚಿತ್ರೀಕರಿಸಿದರು. ಮಾಸ್ಕೋ ಬೀದಿಗಳಲ್ಲಿ ಹೆಚ್ಚಿನ ಭದ್ರತಾ ಪಡೆ ನಿಯೋಜಿಸಿದ್ದು, ರೆಡ್ ಸ್ಕ್ವೇರ್ ನ್ನು ಲೋಹದ ಬ್ಯಾರಿಯರ್ನಿಂದ ತಡೆಯೊಡ್ಡಲಾಗಿದೆ ಎಂದು ತಿಳಿದು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw