ಹುಕ್ಕಾಬಾರ್ ನಲ್ಲಿ ಯುವಕರ ತಂಡಗಳ ನಡುವೆ ಹೊಡೆದಾಟ | ಅಷ್ಟಕ್ಕೂ ಅಲ್ಲಿ ನಡೆದದ್ದೇನು ಗೊತ್ತಾ? - Mahanayaka
6:25 PM Thursday 12 - December 2024

ಹುಕ್ಕಾಬಾರ್ ನಲ್ಲಿ ಯುವಕರ ತಂಡಗಳ ನಡುವೆ ಹೊಡೆದಾಟ | ಅಷ್ಟಕ್ಕೂ ಅಲ್ಲಿ ನಡೆದದ್ದೇನು ಗೊತ್ತಾ?

20/01/2021

ಬೆಂಗಳೂರು: ಬಾರ್ ಗೆ ತೆರಳಿದ್ದ ಯುವಕರ ಗುಂಪೊಂದು ಹಿಗ್ಗಾಮುಗ್ಗಾ ಹಲ್ಲೆ ನಡೆಸಿಕೊಂಡು ಬೀದಿ ಹೊಡೆದಾಟ ನಡೆಸಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು,  ಸುಮಾರು 20 ಮಂದಿಯ ಗುಂಪಿನ ನಡುವೆ ಹೊಡೆದಾಟ ನಡೆದಿದೆ.

ಈ ಘಟನೆ ಬೆಂಗಳೂರಿನ ಕಾಝಿನ್ಸ್ ಎಂಬ ಹುಕ್ಕಾಬಾರ್ ಬಳಿಯಲ್ಲಿ ನಡೆದಿದೆ ಎಂದು ಹೇಳಲಾಗಿದೆ.  ಬೊಮ್ಮಸಂದ್ರ ಹಾಗೂ ಎಂ.ಎಸ್.ರಾಮಯ್ಯ ಲೇಔಟ್ ಯುವಕರ ನಡುವೆ ಈ ಹೊಡೆದಾಟ ನಡೆದಿದೆ ಎಂದು ಹೇಳಲಾಗಿದೆ.

ಯಾವುದೋ ಕ್ಷುಲ್ಲಕ ಕಾರಣಕ್ಕೆ ಈ ಹೊಡೆದಾಟ ನಡೆದಿದೆ ಎಂದು ಹೇಳಲಾಗಿದೆ. ಯುವಕರು ಪರಸ್ಪರ ಹೊಡೆದಾಡುತ್ತಾ ಬಾರ್ ನಿಂದ ಹೊರ ಬರುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ವರದಿಯಾಗಿದೆ. ಈ ಘಟನೆ ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ