ತನ್ನ ಸಾವಿಗೂ ಒಂದು ಗಂಟೆ ಮೊದಲು ರೀಲ್ಸ್ ಮಾಡಿದ್ದ ಖ್ಯಾತ ಯೂಟ್ಯೂಬರ್!
ರೀಲ್ಸ್ ಮೂಲಕ ಎಲ್ಲರನ್ನೂ ನಗಿಸುತ್ತಿದ್ದ ಖ್ಯಾತ ಯೂಟ್ಯೂಬರ್ ದೇವರಾಜ್ ಪಟೇಲ್ ಅವರು ಬೈಕ್ ಹಾಗೂ ಲಾರಿಯ ನಡುವೆ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದು, ಅವರ ಸಾವಿಗೆ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಛತ್ತೀಸ್ ಗಢದ ರಾಜಧಾನಿ ರಾಯ್ ಪುರದಲ್ಲಿ ಸೋಮವಾರ ಸ್ನೇಹಿತನೊಂದಿಗೆ ದೇವರಾಜ್ ಪಟೇಲ್ ರಾಯ್ ಪುರದ ಹೊರವಲಯದಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಲಾರಿಯೊಂದು ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ದೇವರಾಜ್ ಪಟೇಲ್ ಅವರ ಸ್ನೇಹಿತ ಅಪಾಯದಿಂದ ಪಾರಾದರೆ, ದೇವರಾಜ್ ಪಟೇಲ್ ದಾರುಣವಾಗಿ ಸಾವನ್ನಪ್ಪಿದ್ದರು.
ಈ ದುರ್ಘಟನೆಗೂ ಒಂದು ಗಂಟೆಗಿಂತ ಮೊದಲೂ ದೇವರಾಜ್ ಪಟೇಲ್ ಒಂದು ರೀಲ್ಸ್ ಮಾಡಿ, ಜನರನ್ನು ನಗಿಸಿದ್ದರು. ಈ ವಿಡಿಯೋದಲ್ಲಿ ಅವರು, “ಲೆಕಿನ್ ಮೇ ಕ್ಯೂಟ್ ಹು ನಾ ದೋಸ್ತೋ”( ಆದ್ರೆ ನಾನು ಮುದ್ದಾಗಿದ್ದೇನೆ.. ಅಲ್ವಾ ಸ್ನೇಹಿತರೇ?) ಎಂದು ಕೇಳಿದ್ದರು. ಈ ಪೋಸ್ಟ್ ಅವರ ಕೊನೆಯ ಪೋಸ್ಟ್ ಆಗಿತ್ತು.
ಛತ್ತೀಸ್ ಗಢದ ಮಹಾಸಮುಂಡ್ ಜಿಲ್ಲೆಯ ದೇವರಾಜ್ ಅವರು ಯೂಟ್ಯೂಬ್ ನಲ್ಲಿ 4 ಲಕ್ಷಕ್ಕೂ ಅಧಿಕ ಸಬ್ಸ್ ಕ್ರೈಬರ್ಸ್ ನ್ನು ಹೊಂದಿದ್ದರು. ಮತ್ತು 8.80 ಕೋಟಿ ವೀಕ್ಷಣೆಯನ್ನು ಅವರ ಖಾತೆ ಹೊಂದಿತ್ತು. ತಮ್ಮ ಹಾಸ್ಯದ ಶೈಲಿ ಹಾಗೂ ತಮಾಷೆಯ ವಿಡಿಯೋಗಳಿಗೆ ದೇವರಾಜ್ ಪಟೇಲ್ ಹೆಸರು ವಾಸಿಯಾಗಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw