ಮೀನು ಹಿಡಿಯುತ್ತಿದ್ದ ವ್ಯಕ್ತಿಯನ್ನು ಕಚ್ಚಿ ನೀರಿಗೆಳೆದ ಶಾರ್ಕ್! - Mahanayaka
3:21 PM Thursday 12 - December 2024

ಮೀನು ಹಿಡಿಯುತ್ತಿದ್ದ ವ್ಯಕ್ತಿಯನ್ನು ಕಚ್ಚಿ ನೀರಿಗೆಳೆದ ಶಾರ್ಕ್!

bull shark
27/06/2023

ಯುಎಸ್: ಸ್ನೇಹಿತನೊಂದಿಗೆ ಫ್ಲೋರಿಡಾದ ನ್ಯಾಷನಲ್ ಎವರ್ಗ್ಲೇಡ್ಸ್ ಪಾರ್ಕ್ ನಲ್ಲಿ  ಮೀನು ಹಿಡಿಯುತ್ತಿದ್ದ ವ್ಯಕ್ತಿಯೊಬ್ಬರನ್ನು ಬುಲ್ ಶಾರ್ಕ್ ವೊಂದು ಕಚ್ಚಿ ನೀರಿಗೆಳೆದ ಘಟನೆ ನಡೆದಿದ್ದು, ಘಟನೆಯ ನಂತರ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಘಟನೆಯ ದೃಶ್ಯ ವ್ಯಕ್ತಿಯ ಸ್ನೇಹಿತನ ಕ್ಯಾಮರಾದಲ್ಲಿ ಸೆರೆಯಾಗಿದೆ. ಗಾಯಗೊಂಡ ವ್ಯಕ್ತಿಯ ವಿವರಗಳು ಲಭ್ಯವಾಗಿಲ್ಲ. ಆ ವ್ಯಕ್ತಿ ತನ್ನ ಸ್ನೇಹಿತನೊಂದಿಗೆ ಫ್ಲೋರಿಡಾದ ನ್ಯಾಷನಲ್ ಎವರ್ಗ್ಲೇಡ್ಸ್ ಪಾರ್ಕ್ ನಲ್ಲಿ ಮೀನು ಹಿಡಿಯಲು ತೆರಳಿದ್ದ, ಈ ನಡುವೆ ಆತ ನದಿಯ ನೀರಿಗೆ ಕೈ ಹಾಕಿ ಕೈತೊಳೆಯಲು ಮುಂದಾಗಿದ್ದಾನೆ. ಆತನ ಸ್ನೇಹಿತ ನೀರಿಗೆ ಕೈ ಹಾಕಬೇಡ ಎಂದು ಎಚ್ಚರಿಸಿದರೂ ನಿರ್ಲಕ್ಷ್ಯಿಸಿ ನೀರಿಗೆ ಕೈ ಹಾಕಿದ್ದ.

ವ್ಯಕ್ತಿ ನೀರಿಗೆ ಕೈ ಹಾಕಿದ ಕೆಲವೇ ಸೆಕೆಂಡುಗಳಲ್ಲಿ ಆತನ ಕೈಗೆ ಬುಲ್ ಶಾರ್ಕ್ ವೊಂದು ಕಚ್ಚಿದ್ದು, ಆತನನ್ನು ನೀರಿನತ್ತ ಎಳೆದಿದೆ. ಈ ವೇಳೆ ವಿಡಿಯೋ ಮಾಡುತ್ತಿದ್ದ ಆತನ ಸ್ನೇಹಿತ ಆತನನ್ನು ಮೇಲಕ್ಕೆ ಎಳೆದಿದ್ದಾನೆ. ಶಾರ್ಕ್ ದಾಳಿ ನಡೆಸಿದಾಗ ವ್ಯಕ್ತಿ ಕಿರುಚಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ತಕ್ಷಣವೇ ಬೋಟ್ ನ್ನು ಹಿಂದಕ್ಕೆಳೆದು ವ್ಯಕ್ತಿಯನ್ನು ವಿಮಾನದ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆತನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬುಲ್ ಶಾರ್ಕ್ ಗಳು ಆಕ್ರಮಣಕಾರಿಯಾಗಿದ್ದು, ಹೆಚ್ಚು ಆಳವಿಲ್ಲದ ನೀರಿನಲ್ಲಿ ಇವುಗಳು  ಕಂಡು ಬರುತ್ತವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ