ಮದುವೆಗೂ ಮುನ್ನ ದಿನ ವಧುವಿನ ತಂದೆಯನ್ನು ಕೊಂದ ನೆರೆಹೊರೆಯ ಯುವಕರು! - Mahanayaka

ಮದುವೆಗೂ ಮುನ್ನ ದಿನ ವಧುವಿನ ತಂದೆಯನ್ನು ಕೊಂದ ನೆರೆಹೊರೆಯ ಯುವಕರು!

kerala
28/06/2023

ಮಗಳ ಮದುವೆಗೆ ಒಂದು ದಿನ ಇರುವಾಗಲೇ ಆಕೆಯ ತಂದೆಯನ್ನು ನೆರೆ ಹೊರೆಯ ಯುವಕರು ಬರ್ಬರವಾಗಿ ಹತ್ಯೆ ನಡೆಸಿದ ಘಟನೆ ಕೇರಳದ ತಿರುವನಂತಪುರಂನ ಕಲ್ಲಂಬಲ್ಲಂ ಬಳಿ ನಡೆದಿದೆ.

ರಾಜು(61) ಹತ್ಯೆಗೀಡಾದ ವ್ಯಕ್ತಿಯಾಗಿದ್ದು, ಜೂನ್ 27ರಂದು ನೆರೆ ಹೊರೆಯ ವ್ಯಕ್ತಿಗಳೊಂದಿಗೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿದ ನಂತರ ರಾಜು ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಮದುವೆಗೂ ಮುನ್ನ ದಿನ ರಾಜು ಅವರ ಮಗಳ ಮಾಜಿ ಸ್ನೇಹಿತ ಜಿಷ್ಣು ಹಾಗೂ ನೆರೆ ಹೊರೆಯವರ ಜೊತೆಗೆ ರಾಜು ಅವರಿಗೆ ಜಗಳ ನಡೆದಿತ್ತು. ಈ ವೇಳೆ ಜಿಷ್ಣುವಿನ ಸಹೋದರ ಜಿಜಿನ್ ಮತ್ತಿಬ್ಬರು ಸ್ನೇಹಿತರಾದ ಶ್ಯಾಮ್ ಮತ್ತು ಮನು ಎಂಬವರು  ರಾಜು ಅವರ ತಲೆಗೆ ಕೈ ಸಲಿಕೆಯಿಂದ ಹೊಡೆದಿದ್ದು, ಪರಿಣಾಮವಾಗಿ ಅವರು ಸ್ಥಳದಲ್ಲೇ ಕುಸಿದು ಸಾವನ್ನಪ್ಪಿದ್ದಾರೆ.

ಘರ್ಷಣೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ತಲೆಗೆ ಏಟು ಬಿದ್ದ ರಾಜು ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸುವಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆನ್ನಲಾಗಿದೆ. ಸದ್ಯ ನಾಲ್ವರು ದಾಳಿಕೋರರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ಬಂಧನ ಇನ್ನೂ ಅಧಿಕೃತವಾಗಿ ನಡೆದಿಲ್ಲ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ