ಅಪಘಾತದಲ್ಲಿ ಎಮ್ಮೆ ಸಾವು ಪ್ರಕರಣ: 29 ವರ್ಷಗಳ ಬಳಿಕ ಹಿರಿಯ ಚಾಲಕನಿಗೆ ನೋಟಿಸ್..! - Mahanayaka
11:02 AM Sunday 22 - December 2024

ಅಪಘಾತದಲ್ಲಿ ಎಮ್ಮೆ ಸಾವು ಪ್ರಕರಣ: 29 ವರ್ಷಗಳ ಬಳಿಕ ಹಿರಿಯ ಚಾಲಕನಿಗೆ ನೋಟಿಸ್..!

29/06/2023

ಅದು 29 ವರ್ಷಗಳ ಹಿಂದಿನ ಅಪಘಾತ ಪ್ರಕರಣ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 83 ವರ್ಷದ ವ್ಯಕ್ತಿಗೆ ನೋಟಿಸ್​ ನೀಡಿರುವ ಘಟನೆ ಉತ್ತರಪ್ರದೇಶದ ಬರೇಲಿಯ ಬಾರಾಬಂಕಿಲ್ಲಿ ನಡೆದಿದೆ.

ಹೌದು. ಉತ್ತರ ಪ್ರದೇಶ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಚ್ಚನ್​(83) ಎಂಬುವವರಿಗೆ ನೋಟಿಸ್​ ನೀಡಲಾಗಿದೆ. ನಿವೃತ್ತಿಯಾಗಿ 28 ವರ್ಷಗಳ ಬಳಿಕ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನೋಟಿಸ್​ ನೀಡಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಚ್ಚನ್​, 1994ರಲ್ಲಿ ಉತ್ತರಪ್ರದೇಶ ಸಾರಿಗೆ ಸಂಸ್ಥೆಯಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ಫರೀದ್​ಪುರದಿಂದ ಬರೇಲಿಯತ್ತ ಹೋಗುವಾಗ ರಾತ್ರಿ ಸಮಯದಲ್ಲಿ ರಸ್ತೆಯಲ್ಲಿ ಎಮ್ಮೆವೊಂದು ಮಲಗಿತ್ತು. ಕತ್ತಲಾಗಿದ್ದರಿಂದ ಅದನ್ನು ನೋಡದೇ ನಿಯಂತ್ರಣ ತಪ್ಪಿ ಗುದ್ದಿದ್ದ ಪರಿಣಾಮ ಸ್ಥಳದಲ್ಲೇ ಎಮ್ಮೆ ಮೃತಪಟ್ಟಿತ್ತು.

ಈ ಸಂಬಂಧ ನಾನು ಫರೀದ್​ಪುರ ಪೊಲೀಸ್​ ಠಾಣೆಗೆ ಖುದ್ದಾಗಿ ತೆರಳಿದ್ದೆ. ಎರಡು ಬಾರಿ ನೋಟಿಸ್​ ನೀಡಲಾಗಿತ್ತು. ನಾನು ಸಹ ಅದಕ್ಕೆ ಉತ್ತರಿಸಿದ್ದೆ. ಪ್ರಕರಣ ಮುಗಿದು 29 ವರ್ಷಗಳ ಬಳಿಕ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್​ ನೀಡಿರುವುದು ಆಶ್ವರ್ಯವನ್ನುಂಟು ಮಾಡಿದೆ ಎಂದು ಅಚ್ಚನ್​ ಹೇಳಿದ್ದಾರೆ.

ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಪೊಲೀಸ್​ ಅಧಿಕಾರಿಯೊಬ್ಬರು, 29 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನೋಟಿಸ್​ ನೀಡಿರುವುದು ಆಶ್ಚರ್ಯ ಎನ್ನಿಸಿದೆ. ಅಚ್ಚನ್ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಕಾನೂನಿನ ಪ್ರಕಾರ ಅವರನ್ನು ಬಂಧಿಸುವುದಿಲ್ಲ ಎಂದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ