ಹಾವಿನ ದ್ವೇಷ: ರಾಜಸ್ಥಾನದ ಈ ವ್ಯಕ್ತಿಗೆ ಎರಡು ಬಾರಿ ಕಚ್ಚಿದ ಹಾವು; ಕೊನೆಗೂ ಉಳಿಯಲೇ ಇಲ್ಲ ಜೀವ
ರಾಜಸ್ಥಾನದ 44 ವರ್ಷದ ಜಸಾಬ್ ಖಾನ್ ಎಂಬುವವರಿಗೆ ಜೂನ್ 20 ರಂದು ಹಾವೊಂದು ಕಚ್ಚಿತ್ತು. ಪೋಖ್ರಾನ್ ಆಸ್ಪತ್ರೆಯಲ್ಲಿ ನಾಲ್ಕು ದಿನಗಳ ಕಾಲ ಚಿಕಿತ್ಸೆ ಪಡೆದ ನಂತರ ಅವರು ಬದುಕುಳಿದರು. ಆದಾಗ್ಯೂ ಖಾನ್ ಆಸ್ಪತ್ರೆಯಿಂದ ಮನೆಗೆ ಮರಳಿದ ಒಂದು ದಿನದ ನಂತರ ಜೂನ್ 26 ರಂದು, ಅವರಿಗೆ ಮತ್ತೊಮ್ಮೆ ಹಾವು ಕಚ್ಚಿದೆ. ಖಾನ್ ಜೋಧಪುರದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಅವರು ನಿಧನರಾಗಿದ್ದಾರೆ.
ಜಸಾಬ್ ಖಾನ್ ಜೋಧಪುರ ಜಿಲ್ಲೆಯ ಮೆಹ್ರಾನ್ ಗಢ್ ಗ್ರಾಮದ ನಿವಾಸಿ. ಎರಡು ಬಾರಿ, ಖಾನ್ ಅವರನ್ನು ರಾಜಸ್ಥಾನದ ಮರುಭೂಮಿ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ವೈಪರ್ನ್ ಉಪ ಜಾತಿಯಾದ ‘ಬಂಡಿ’ ಎಂದು ಕರೆಯಲ್ಪಡುವ ಹಾವು ಕಚ್ಚಿದೆ ಎಂದು ಹೇಳಲಾಗಿದೆ. ಈ ವಿಲಕ್ಷಣ ಘಟನೆಯ ಕುರಿತು ಭನಿಯಾನಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜೂನ್ 20 ರಂದು ಹಾವು ಜಸಾಬ್ ಅವರ ಮೊಣಕಾಲಿಗೆ ಕಚ್ಚಿತ್ತು. ಕೂಡಲೇ ಅವರನ್ನು ಪೋಖ್ರಾನ್ ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಚಿಕಿತ್ಸೆ ಪಡೆದು ಜೂನ್ 25 ರಂದು ಮನೆಗೆ ಮರಳಿದರು. ಆದಾಗ್ಯೂ, ಒಂದು ದಿನದ ನಂತರ ಹಾವು ಇನ್ನೊಂದು ಕಾಲಿಗೆ ಅವರನ್ನು ಮತ್ತೆ ಕಚ್ಚಿತು.
ಮೊದಲ ಹಾವು ಕಡಿತದಿಂದ ಅವರ ದೇಹವು ಚೇತರಿಸಿಕೊಳ್ಳುತ್ತಿರುವಾಗಲೇ ಖಾನ್ ಗೆ ಎರಡನೇ ಬಾರಿಗೆ ಹಾವು ಕಚ್ಚಿದೆ. ಆದರೆ ಎರಡನೇ ಬಾರಿಗೆ ವಿಷದಿಂದ ಬದುಕುಳಿಯಲು ಸಾಧ್ಯವಾಗಲಿಲ್ಲ.
ಮೃತರು ತಾಯಿ, ಪತ್ನಿ, ನಾಲ್ವರು ಪುತ್ರಿಯರು ಹಾಗೂ 5 ವರ್ಷದ ಪುತ್ರನನ್ನು ಅಗಲಿದ್ದಾರೆ. ಜಸಾಬ್ ಸಾವಿಗೆ ಕಾರಣವಾದ ಹಾವನ್ನು ಅವರ ಕುಟುಂಬ ಸದಸ್ಯರು ಕೊಂದು ಹಾಕಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw