ಕೇಂದ್ರ ಅಕ್ಕಿ ಕೂಡದಿದ್ದಕ್ಕೆ ವಿಧಿ ಇಲ್ಲದೇ ಹಣ ಕೊಡ್ತಿದೀವಿ: ಬಿಜೆಪಿಗರಿಗೆ ಸಚಿವ ವೆಂಕಟೇಶ್ ಟಾಂಗ್ - Mahanayaka

ಕೇಂದ್ರ ಅಕ್ಕಿ ಕೂಡದಿದ್ದಕ್ಕೆ ವಿಧಿ ಇಲ್ಲದೇ ಹಣ ಕೊಡ್ತಿದೀವಿ: ಬಿಜೆಪಿಗರಿಗೆ ಸಚಿವ ವೆಂಕಟೇಶ್ ಟಾಂಗ್

vekatesh
01/07/2023

ಚಾಮರಾಜನಗರ: ಕೇಂದ್ರ ಸರ್ಕಾರ ಅಕ್ಕಿ ಕೊಡದಿದ್ದಕ್ಕೇ ವಿಧಿ ಇಲ್ಲದೇ ಹಣ ಕೊಡುತ್ತಿದ್ದೇವೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಬಿಜೆಪಿ ಅಕ್ಕಿ ಕೊಡಬೇಕೆಂಬ ಟೀಕೆಗೆ ತಿರುಗೇಟು ಕೊಟ್ಟರು.

ಚಾಮರಾಜನಗರದಲ್ಲಿ ಮಾಧ್ಯಮವರೊಟ್ಟಿಗೆ ಅವರು ಮಾತನಾಡಿ, ಇಂದಿನಿಂದ ವಿದ್ಯುತ್, ಅಕ್ಕಿ ಗ್ಯಾರಂಟಿ ಜಾರಿಯಾಗುತ್ತಿದೆ, ನಾವು ಕೊಟ್ಟ ಭರವಸೆ ಜಾರಿ ಮಾಡುತ್ತಿದ್ದೇವೆ,

ಅಕ್ಕಿ ಬದಲು ಹಣ ಕೊಡುವ ವಿಚಾರವನ್ನು ವಿರೋಧ ಮಾಡುವವರು ಮಾಡುತ್ತಿರುತ್ತಾರೆ, ಅಕ್ಕಿ ಸಂಗ್ರಹವಾದ ಮೇಲೆ ಅಕ್ಕಿಯನ್ನು ಕೊಡುತ್ತೇವೆ, ಹಣ ಕೊಡುವುದು ತಾತ್ಕಾಲಿಕ ವ್ಯವಸ್ಥೆ ಎಂದರು.

ಜನರಿಗೆ ಕೊಟ್ಟ ಭರವಸೆ ಈಡೇರಿಸಲು ಅಕ್ಕಿ ಸಿಗದ ಕಾರಣ ಹಣ ಕೊಡ್ತಿದ್ದೇವೆ,
ಕೇಂದ್ರ ಸರ್ಕಾರ ಅಕ್ಕಿ ಕೊಡದ ಕಾರಣ ವಿಧಿ ಇಲ್ಲದೆ ಹಣ ಕೊಡ್ತಿದ್ದೇವೆ, ಎರಡ್ಮೂರು ತಿಂಗಳ ಬಳಿಕ ಅಕ್ಕಿ ಕೊಡುತ್ತೇವೆ, ಪ್ರತಿಪಕ್ಷದವರು ಹೇಳಿದಂಗೆ ಕೇಳೋಕ್ ಆಗಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಅವ್ರಿಗೆ ಇನ್ನೇನ್ ಕೆಲಸ ಇದೆ, ಏನಾದ್ರು ಹೇಳುತ್ತಿರುತ್ತಾರೆ ಪ್ರೋಟೆಸ್ಟ್ ಮಾಡೋರಿಗೆ ಬೇಡ ಅನ್ನೋಕೆ ಆಗುತ್ತಾ, ಮಾಡಲಿ ಎಂದು ಯಡಿಯೂರಪ್ಪ ಪ್ರತಿಭಟನೆ ಸಂಬಂಧ ತಿರುಗೇಟು ಕೊಟ್ಟರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ