ಶಾಲೆಯಲ್ಲಿ ಈದ್ ಆಚರಣೆ ಆರೋಪ: ಕ್ಷಮೆಯಾಚಿಸಿದ ಈ ಎರಡು ಶಾಲೆಗಳು..! - Mahanayaka

ಶಾಲೆಯಲ್ಲಿ ಈದ್ ಆಚರಣೆ ಆರೋಪ: ಕ್ಷಮೆಯಾಚಿಸಿದ ಈ ಎರಡು ಶಾಲೆಗಳು..!

01/07/2023

ಶಾಲೆಯಲ್ಲಿ ಈದ್ ಆಚರಿಸಿರುವುದಕ್ಕಾಗಿ ಗುಜರಾತ್ ನ ಎರಡು ಶಾಲೆಗಳು ಕ್ಷಮೆಯಾಚಿಸಿರುವ ಘಟನೆ ನಡೆದಿದೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವು ತರಿಸಿರುವುದಕ್ಕಾಗಿ ಕ್ಷಮೆಯಾಚಿಸುತ್ತೇವೆ ಎಂದು ಶಾಲೆಗಳ ಮ್ಯಾನೇಜ್ಮೆಂಟ್ ತಿಳಿಸಿದೆ.

ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ ನಡೆಸಿತ್ತು.
ಎರಡು ಶಾಲೆಗಳು ಕ್ಷಮೆಯಾಚಿಸಿವೆಯಾದರೂ ಇವುಗಳಲ್ಲಿ ಒಂದು ಶಾಲೆಯ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.

ಮೆಹ್ಸಾನ ಜಿಲ್ಲೆಯ ಪ್ರಿ ಸ್ಕೂಲ್, ಕ್ಷಮೆಯಾಚಿಸಿದ ಶಾಲೆಗಳಲ್ಲಿ ಒಂದು. ಮ್ಯಾನೇಜ್ಮೆಂಟ್ ಮತ್ತು ಹೆತ್ತವರು ಪರಸ್ಪರ ಮಾತುಕತೆ ನಡೆಸಿ ರಾಜಿಯಲ್ಲಿ ಪ್ರಕರಣವನ್ನು ಮುಗಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾವು ನಡೆಸಿದ ಬಕ್ರೀದ್ ಆಚರಣೆಯು ಹಿಂದುಗಳ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ನಮಗೆ ಗೊತ್ತಾಗಿದೆ. ಯಾರದೇ ಮನಸ್ಸನ್ನು ನೋಯಿಸುವ ಉದ್ದೇಶ ನಮಗಿಲ್ಲ. ನಾವು ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟಿದ್ದೇವೆ. ಇದು ನಮ್ಮ ಕೊನೆಯ ತಪ್ಪು ಎಂದು ಪರಿಗಣಿಸಿ ಕ್ಷಮಿಸಬೇಕು ಎಂದು ಕಿಡ್ಸ್ ಕಿಂಗ್ಡಂ ಶಾಲೆಯ ಮ್ಯಾನೇಜರ್ ರಾಶಿ ಗೌತಮ್ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ. ನಾವು ಇದಕ್ಕಿಂತ ಈ ಮೊದಲೂ ಬಕ್ರೀದ್ ಆಚರಣೆ ಮಾಡಿದ್ದೆವು ಮತ್ತು ಇದೇ ಮೊದಲು ಬಾರಿ ಪ್ರತಿಭಟನೆ ಎದುರಾಗಿದೆ ಎಂದು ಕೂಡ ಅವರು ತಿಳಿಸಿದ್ದಾರೆ.

ಹಾಗೆಯೇ ಇನ್ನೊಂದು ಶಾಲೆಯ ವಿರುದ್ಧ ಶಿಕ್ಷಣ ಸಚಿವಾಲಯ ತನಿಖೆಗೆ ಆದೇಶಿಸಿದೆ. ವಿದ್ಯಾರ್ಥಿಗಳಲ್ಲಿ ಬಲವಂತವಾಗಿ ನಮಾಜ್ ಮಾಡಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಶಾಲೆಯ ವಿರುದ್ಧ ಆರೋಪ ಹೊರಿಸಿದೆ. ಆದರೆ ಒಂದು ನಾಟಕದ ಸಣ್ಣ ಭಾಗದ ವಿಡಿಯೋವನ್ನು ಉಪಯೋಗಿಸಿ ನಮ್ಮ ವಿರುದ್ಧ ಸುಳ್ಳು ಆರೋಪ ಹೊರಿಸಲಾಗುತ್ತಿದೆ ಎಂದು ಶಾಲಾಡಳಿತ ತಿಳಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ