ನೋಯ್ಡಾದಲ್ಲಿ 55 ಗ್ರಾಂ ಚೀಸ್ ಪಾಪ್ ಕಾರ್ನ್ ಗೆ 460 ರೂ, 600 ಮಿಲಿ ಪೆಪ್ಸಿಗೆ 360 ರೂಪಾಯಿ: ಬಿಲ್ ನೋಡಿ ಶಾಕ್ ಆದ ಪತ್ರಕರ್ತ ಕೊಟ್ಟ ಉತ್ತರ ಏನ್ ಗೊತ್ತಾ..?!
ಕೊರೊನಾ ಎಂಬ ಸಾಂಕ್ರಾಮಿಕ ರೋಗವು ಜನರನ್ನು ತಮ್ಮ ತಮ್ಮ ಮನೆಗಳಲ್ಲಿ ಬಂಧಿಯಾಗಿಸಿತ್ತು. ಆವಾಗ ಹೆಚ್ಚಿನವರು ಒಟಿಟಿ ಪ್ಲ್ಯಾಟ್ ಫಾರ್ಮ್‌ಗಳಲ್ಲಿ ಸಿನಿಮಾಗಳನ್ನು ನೋಡುವ ಮೂಲಕ ಅಧಿಕ ಪ್ರಮಾಣದ ಹಣವನ್ನು ಉಳಿಸಿದ್ದರು.
ಕೊರೊನಾ ಹೊರಟು ಹೋದ ನಂತರ ಜನರು ಮಾಲ್ ಗಳು ಮತ್ತು ಚಿತ್ರಮಂದಿರಗಳಿಗೆ ಭೇಟಿ ನೀಡಲು ಪ್ರಾರಂಭಿಸಿದರು. ನೋಯ್ಡಾದ ಮಲ್ಟಿಪ್ಲೆಕ್ಸ್‌ನಲ್ಲಿ ಪೆಪ್ಸಿ ಬೆಲೆಯನ್ನು ನೋಡಿ ವ್ಯಕ್ತಿಯೊಬ್ಬರು ದಿಗ್ಭ್ರಮೆಗೊಂಡಿದ್ದಾರೆ. ಆ ವ್ಯಕ್ತಿ ತನ್ನ ಅನುಭವವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಟ್ವೀಟ್ ವೈರಲ್ ಆಗುತ್ತಿದೆ.
ಪತ್ರಕರ್ತ ತ್ರಿದೀಪ್ ಕೆ ಮಂದಾ ಎಂಬುವವರು ನೋಯ್ಡಾದ ಮಾಲ್ ಆಫ್ ಇಂಡಿಯಾದಲ್ಲಿರುವ ಪಿವಿಆರ್ ಗೆ ಭೇಟಿ ನೀಡಿದ್ದರು. ಸಿನಿಮಾ ನೋಡುವ ಮುನ್ನ ಅವರು ಕೆಲವು ತಿಂಡಿಗಳನ್ನು ಖರೀದಿದರು. ಆವಾಗ ಅವರಿಗೆ ತಿಂಡಿ ಮತ್ತು ಪಾನೀಯಗಳ ಬೆಲೆಯನ್ನು ನೋಡಿ ಶಾಕ್ ಆಗಿದ್ದಾರೆ.
ಸಾಮಾನ್ಯ ಗಾತ್ರದ ಪಾಪ್ ಕಾರ್ನ್ ಮತ್ತು ಪೆಪ್ಸಿ ಕ್ಯಾನ್ ನ ದರ ತುಂಬಾ ಹೆಚ್ಚಾಗಿತ್ತು. “55 ಗ್ರಾಂ ಚೀಸ್ ಪಾಪ್ ಕಾರ್ನ್ ಗೆ 460 ರೂ., 600 ಮಿಲಿ ಪೆಪ್ಸಿಗೆ 360 ರೂ ಸೇರಿದಂತೆ ಅವರು ನೋಯ್ಡಾದಲ್ಲಿ ಒಟ್ಟು 820 ರೂ ಪಾವತಿಸಿದ್ದಾರೆ. ಇದು @PrimeVideoIN ವಾರ್ಷಿಕ ಚಂದಾದಾರಿಕೆಗೆ ಬಹುತೇಕ ಸಮಾನವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಜನರು ಇನ್ನು ಮುಂದೆ ಚಿತ್ರಮಂದಿರಗಳಿಗೆ ಹೋಗದಿರುವುದರಲ್ಲಿ ಆಶ್ಚರ್ಯವೇನಿಲ್ಲ ಎಂದು ಪತ್ರಕರ್ತ ಬಿಲ್‌ನ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ಈ ಟ್ವೀಟ್ ಮಾಡಿದ ನಂತರ ಅನೇಕ ಜನರಿಂದ ಕಾಮೆಂಟ್ ಗಳ ಮಹಾಪೂರವೇ ಹರಿದುಬಂದಿದೆ. ಓರ್ವರು ಹೇಳಿದ್ದಾರೆ. ‘ಇಲ್ಲಿಗೆ ಬಂದಾಗ ಮೊದಲು ತಿನ್ನಬೇಕಾ, ಸಿನಿಮಾ ನೋಡಬೇಕಾ ಎಂದಿದ್ದಾರೆ.
ಇನ್ನೋರ್ವ ವ್ಯಕ್ತಿ ಹೇಳಿದ್ದಾರೆ. ‘ನಾನು ಕೊನೆಯ ಬಾರಿಗೆ ಸಿನೆಮಾ ಹಾಲ್ ಗೆ ಹೋಗಿರುವುದೇ ನನಗೆ ನೆನಪಿಲ್ಲ’ ಎಂದಿದ್ದಾರೆ.ಮೂರನೆಯ ವ್ಯಕ್ತಿ ‘ನಾನು ನಿನ್ನೆಯೇ ಪಿವಿಆರ್ ಗೆ ಹೋಗಿದ್ದೆ. ಸಾಮಾನ್ಯ ಪಾಪ್ ಕಾರ್ನ್ ಮತ್ತು ಪೆಪ್ಸಿ ಕಾಂಬೋ 600 ಆಗಿತ್ತು. ಇದು ಲಭ್ಯವಿರುವ ಅತ್ಯಂತ ಚಿಕ್ಕ ಕಾಂಬೋ ಆಗಿದೆ’ ಎಂದು ಕಿಡಿಕಾರಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw