ಕೊಲ್ಲೂರು  ದೇವಸ್ಥಾನದಲ್ಲಿ ಮಹಿಳೆಯ ಚಿನ್ನಾಭರಣಗಳಿದ್ದ ಪರ್ಸ್ ಕಳವು ಪ್ರಕರಣ: ಓರ್ವ ಆರೋಪಿಯ ಬಂಧನ - Mahanayaka
10:07 AM Saturday 21 - September 2024

ಕೊಲ್ಲೂರು  ದೇವಸ್ಥಾನದಲ್ಲಿ ಮಹಿಳೆಯ ಚಿನ್ನಾಭರಣಗಳಿದ್ದ ಪರ್ಸ್ ಕಳವು ಪ್ರಕರಣ: ಓರ್ವ ಆರೋಪಿಯ ಬಂಧನ

kolluru
04/07/2023

ಕುಂದಾಪುರ: ಕಳೆದ ತಿಂಗಳು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ದರ್ಶನಕ್ಕೆ ಬಂದಿದ್ದ ಮಹಿಳೆಯ ಚಿನ್ನಾಭರಣಗಳಿದ್ದ ಪರ್ಸ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಕೊಲ್ಲೂರು ಪೊಲೀಸರು ಬಂಧಿಸಿದ್ದಾರೆ.

ತೀರ್ಥಹಳ್ಳಿ ಮೂಲದ ಬಸ್ ನಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್ ಬಿ.ಜಿ. (32) ಎಂದು ಗುರುತಿಸಲಾಗಿದೆ. ಈತನಿಂದ ಕಳವು ಮಾಡಿದ ಚಿನ್ನಾಭರಣಗಳಾದ 7½  ಪವನ್  ಚಿನ್ನದ ಚೈನ್, 3 ಪವನ್ ತೂಕದ ಎರಡು ಚಿನ್ನದ  ಬಳೆ, 1½  ಪವನ್  ಚಿನ್ನದ  ಚೈನ್,  ½  ಪವನ್  ಚಿನ್ನದ ಬಳೆ, 1 ಪವನ್ ತೂಕದ 4 ಜೊತೆ ಚಿನ್ನದ ಕಿವಿ ಓಲೆ ಸಹಿತ ಒಟ್ಟು 13½ ಪವನ್ (108 ಗ್ರಾಂ) ವಶಕ್ಕೆ ಪಡೆಯಲಾಗಿದೆ.

ಕಾಸರಗೋಡು ಮೂಲದ ಸುರತ್ಕಲ್ ನಿವಾಸಿ ಪ್ರವೀಣ್ ಎನ್ನುವರು ಪತ್ನಿಯೊಂದಿಗೆ ಜೂ.4ರಂದು ತನ್ನ ಬಾಡಿಗೆ ಮನೆಯಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಬಂದಿದ್ದು ಮನೆಯಲ್ಲಿ ಯಾರು ಇಲ್ಲದ ಕಾರಣ ಪತ್ನಿ ಮನೆಯಲ್ಲಿದ್ದ 13 ½ ಪವನ್ ಚಿನ್ನಾಭರಣಗಳನ್ನು ಚಿಕ್ಕ ಪರ್ಸ್ ನಲ್ಲಿ  ಹಾಕಿ  ವ್ಯಾನಟಿ ಬ್ಯಾಗ್ ನಲ್ಲಿಟ್ಟುಕೊಂಡು ಬಂದಿದ್ದು ದೇವರ  ದರ್ಶನ ಮಾಡಿ ಹೊರಗಡೆ ಬಂದಾಗ ವ್ಯಾನಟಿ ಬ್ಯಾಗ್ ಜೀಪ್ ಓಪನ್ ಆಗಿದ್ದು ಚಿನ್ನಾಭರಣಗಳಿದ್ದ ಚಿಕ್ಕ ಪರ್ಸ್ ಕಳವಾಗಿದ್ದು ಅದರಲ್ಲಿದ್ದ 4 ಲಕ್ಷದ 75 ಸಾವಿರ ರೂ. ಮೌಲ್ಯದ ಚಿನ್ನಾಭರಣ ಕಳವಾದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.


Provided by

ಉಡುಪಿ ಜಿಲ್ಲಾ  ಪೊಲೀಸ್ ಅಧೀಕ್ಷಕ ಅಕ್ಷಯ್ ಮಚಿಂದ್ರ ಹಾಕೆ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿದ್ಧಲಿಂಗಪ್ಪ ಟಿ., ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ, ಬೈಂದೂರು ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ, ಕೊಲ್ಲೂರು ಠಾಣೆ ಉಪನಿರೀಕ್ಷಕರಾದ ಜಯಶ್ರೀ, ಸುಧಾರಾಣಿ, ಸಿಬ್ಬಂದಿಗಳಾದ ನಾಗೇಂದ್ರ ಹಾಗೂ ಸಂದೀಪ್ ಈ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw


ವಿಡಿಯೋ ನೋಡಿ:

 

ಇತ್ತೀಚಿನ ಸುದ್ದಿ