ಅಜಿತ್ ಪವಾರ್ ಕೈ ಕೊಟ್ಟ ಬೆನ್ನಲ್ಲೇ ಎನ್ ಸಿಪಿ ಪಕ್ಷದ ಸಭೆ: ಅಣ್ಣನಿಗೆ ಟಕ್ಕರ್ ಕೊಟ್ರಾ ಸುಪ್ರಿಯಾ ಸುಳೆ..?
![](https://www.mahanayaka.in/wp-content/uploads/2023/07/5d98034bdd1dc8bed7c7d18545307f79e6791c2528bb03704d35e6a42e7d469c.0.webp)
ಎನ್‌ಸಿಪಿ ಪಕ್ಷದ ನಾಯಕ ಅಜಿತ್ ಪವಾರ್ ಕಳೆದ ವಾರ ಬಿಜೆಪಿ ಮತ್ತು ಸಿಂಧೆ ಶಿವಸೇನೆ ಬೆಂಬಲಿತ ಸರ್ಕಾರಕ್ಕೆ ಬೆಂಬಲ ನೀಡಿ, ಉಪಮುಖ್ಯಮಂತ್ರಿ ಆದರು. ಇದೀಗ ಪಕ್ಷದ ಬಹುಪಾಲು ಶಾಸಕರು ತಮ್ಮೊಂದಿಗಿದ್ದಾರೆ ಎಂಬುದನ್ನು ನಿರೂಪಿಸಲು ಎನ್ ಸಿಪಿಯ ಎರಡು ಬಣಗಳು ಇಂದು ಮುಂಬೈನಲ್ಲಿ ಸಭೆ ಕರೆದಿವೆ.
ಈ ಬಗ್ಗೆ ಶರದ್ ಪವಾರ್ ಅವರು ಇಂದು ಕರೆದಿರುವ ಸಭೆಗೆ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರು ಹಾಜರಾಗುವಂತೆ ಎನ್‌ಸಿಪಿ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣವು ಇಂದು ಕರೆದಿರುವ ಎಲ್ಲಾ ಶಾಸಕರ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಬೇಕೆಂಬುದು ಒಂದು ವಿನಮ್ರ ವಿನಂತಿ. ಪ್ರಸ್ತುತ ಪರಿಸ್ಥಿತಿಯಲ್ಲಿ 83 ವರ್ಷದ ಯುವ ಯೋಧ ಅಂದರೆ ನಮ್ಮ ಗೌರವಾನ್ವಿತ ಪವಾರ್ ಸಾಹೇಬರು ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಎಂದು ಸುಪ್ರಿಯಾ ಸುಳೆ ವಿಡಿಯೋ ಮಾಡಿ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಅಜಿತ್ ಪವಾರ್ ಅವರು ವಿರೋಧ ಪಕ್ಷದ ನಾಯಕತ್ವವನ್ನು ತೊರೆದು ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಸರ್ಕಾರವನ್ನು ಸೇರಿದ ನಂತರ ಈ ಸಭೆಯನ್ನು ಕರೆದಿರುವುದು ಬಹಳ ಕುತೂಹಲ ಮೂಡಿಸಿದೆ. ಇದೀಗ ಅವರು ಉಪಮುಖ್ಯಮಂತ್ರಿ ಹುದ್ದೆಯನ್ನು ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಹಂಚಿಕೊಂಡಿದ್ದಾರೆ.
ರಾಜ್ಯ ಎನ್‌ಸಿಪಿ ಅಧ್ಯಕ್ಷ ಜಯಂತ್ ಪಾಟೀಲ್ ಅವರನ್ನು ತೆಗೆದುಹಾಕಿ ಮತ್ತು ಹೊಸ ನೇಮಕಾತಿಗಳನ್ನು ಮಾಡುವ ಮೂಲಕ ಅಜಿತ್ ಪವಾರ್ ಬಣಕ್ಕೆ ದೊಡ್ಡ ಪಟ್ಟು ನೀಡಿದೆ. ನಮ್ಮ ಬಣಕ್ಕೆ ಎನ್‌ಸಿಪಿ ಶಾಸಕರ ಬೆಂಬಲವಿದೆ ಎಂದು ಎರಡೂ ಬಣಗಳು ಹೇಳಿಕೊಳ್ಳುತ್ತಿದ್ದು, ಇಂದಿನ ಸಭೆಯಲ್ಲಿ ಈ ಬಗ್ಗೆ ಬಹಿರಂಗವಾಗಲಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw