ಚಾಮರಾಜನಗರ: ಮಕ್ಕಳಿಲ್ಲದ ಖಾಲಿ ಶಾಲೆಗೆ ಇಬ್ಬರು ಶಿಕ್ಷಕರು!! - Mahanayaka

ಚಾಮರಾಜನಗರ: ಮಕ್ಕಳಿಲ್ಲದ ಖಾಲಿ ಶಾಲೆಗೆ ಇಬ್ಬರು ಶಿಕ್ಷಕರು!!

dasanahundy
05/07/2023

ಚಾಮರಾಜನಗರ: ರಾಜ್ಯದ ಹಲವು ಶಾಲೆಗಳು ಶಿಕ್ಷಕರ ಕೊರತೆ ಎದುರಿಸುತ್ತಿದ್ದಾರೆ ಈ  ಮಕ್ಕಳಿಲ್ಲದ ಸರ್ಕಾರಿ ಶಾಲೆಗೆ ಇಬ್ಬರು ಶಿಕ್ಷಕರಿದ್ದಾರೆ.

ಹೌದು..ಯಳಂದೂರು ತಾಲೂಕಿನ ದಾಸನಹುಂಡಿ ಎಂಬ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಥೆ ಇದಾಗಿದ್ದು, ಒಂದರಿಂದ ಐದನೇ ತರಗತಿವರೆಗೆ ಮಕ್ಕಳು ಕಲಿಯಬಹುದಾಗಿದೆ.

13 ಮಕ್ಕಳಲ್ಲಿ ಐವರು ಐದನೇ ತರಗತಿ ಪಾಸಾಗಿದ್ದು, ಉಳಿದ 8 ಮಕ್ಕಳು ಖಾಸಗಿ ಶಾಲೆಗೆ ಸೇರ್ಪಡೆಗೊಂಡಿದ್ದಾರೆ. ಮುಖ್ಯ ಶಿಕ್ಷಕರು ಸರಿಯಾಗಿ ಪಾಠ ಮಾಡಲ್ಲ, ಮಕ್ಕಳಿಗೆ ಪೂರಕ ವಾತಾವರಣ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪಾಲಕರು ಆರೋಪಿಸಿ ಬೇರೆ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಿದ್ದಾರೆ. ಈಗ ಶಾಲೆಗೆ ಮತ್ತೋರ್ವ ಶಿಕ್ಷಕ ವರ್ಗಾವಣೆ ಆಗಿ ಬಂದಿದ್ದು ಶೂನ್ಯ ಮಕ್ಕಳ ಶಾಲೆಗೆ ಇಬ್ಬರು ಶಿಕ್ಷಕರಿದ್ದಾರೆ.

ಈ ಸಂಬಂಧ, ಡಿಡಿಪಿಐ ಪ್ರತಿಕ್ರಿಯಿಸಿ, ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಕೂಡಲೇ ಪಾಲಕರ ಸಭೆ ಕರೆದು ಸಮಸ್ಯೆ ಬಗೆಹರಿಸಲಿದ್ದು ಆರೋಪ ಕೇಳಿಬಂದ ಶಿಕ್ಷಕರನ್ನು ಡೆಪ್ಯೂಟೇಷನ್ ಮೂಲಕ ಬೇರೆಡೆ ವರ್ಗಾವಣೆ ಮಾಡಲಾಗುವುದು ಎಂದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ